ಜಾಗತಿಕ ಶಾಂತಿ, ಸ್ಥಿರತೆ ಮತ್ತು ಆರ್ಥಿಕತೆ ಸಹಜ ಸ್ಥಿತಿಗೆ ಬರಲು ಭಾರತ-ಅಮೆರಿಕ ಬಾಂಧವ್ಯ ಅತ್ಯಗತ್ಯ

Social Share

ವಾಷಿಂಗ್ಟನ್, ಆ.16- ಜಾಗತಿಕ ಶಾಂತಿ, ಸ್ಥಿರತೆ ಮತ್ತು ಆರ್ಥಿಕತೆ ಸಹಜ ಸ್ಥಿತಿಗೆ ಬರಲು ಭಾರತ-ಅಮೆರಿಕ ನಡುವೆ ಉತ್ತಮ ಬಾಂಧವ್ಯ ಅತ್ಯಗತ್ಯ ಎಂದು ಅಮೆರಿಕ ಅಧ್ಯಕ್ಷ ಜೊ ಬಿಡೆನ್ ನಂಬಿದ್ದಾರೆ ಎಂದು ಅಮೆರಿಕ ವಾಣಿಜ್ಯ ಪ್ರತಿನಿಧಿ ಕ್ಯಾಥರೀನ್ ತೈ ಹೇಳಿದ್ದಾರೆ.

ಎರಡು ದೇಶಗಳು ಈಗ ಕಠಿಣ ವಿಷಯಗಳಲ್ಲಿ ಕೆಲಸ ಮಾಡಲು ಮತ್ತು ಸಮಸ್ಯೆ ಪರಿಹರಿಸಲು ಮುಂದಾಗಿವೆ ಎಂದು ತಿಳಿಸಿದ್ದಾರೆ. ನಮ್ಮ ಎರಡು ಮಹಾನ್ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಸಂಬಂಧ ಜಾಗತಿಕ ಶಾಂತಿ, ಸ್ಥಿರತೆ ಮತ್ತು ಆರ್ಥಿಕ ಸ್ಥಿತಿ ಸುಧಾರಿಸಲು ಅತ್ಯಗತ್ಯ ಎಂದು ಅಧ್ಯಕ್ಷ ನಂಬುತ್ತಾರೆ ಎಂದು ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಇಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನದ ಸಮಾರಂಭದಲ್ಲಿ ಹೇಳಿದರು.

ಕಳೆದ ವರ್ಷ ಭಾರತ ಭೇಟಿಯ ಸಮಯದಲ್ಲಿ ದೇಶದ ರೋಮಾಂಚಕ ಸಂಸ್ಕøತಿಯ ನಿಜವಾದ ಪರಿಮಳ ಸವಿದೆ ಎಂದು ಹೇಳಿದರು. ಪ್ರಪಂಚದಾದ್ಯಂತ ಇರುವ ನಮ್ಮ ಪ್ರಮುಖ ವ್ಯಾಪಾರ ಪಾಲುದಾರರ ನಡುವೆ ಹೋಲಿಕೆಗಳನ್ನು ಮಾಡಲು ನಾನು ಯಾವಾಗಲೂ ಹಿಂಜರಿಯುತ್ತೇನೆ. ಭಾರತೀಯ ಆತಿಥ್ಯ ಸೋಲಿಸುವುದು ಕಷ್ಟ ಎಂದು ನಾನು ಒಪ್ಪಿಕೊಳ್ಳುತ್ತೇನೆ ಎಂದು ಅವರು ಹೇಳಿದರು.

ಭಾರತ ಮತ್ತು ಅಮೆರಿಕ ತಮ್ಮ ಭಿನ್ನಾಭಿಪ್ರಾಯಗಳ ಹೊರತಾಗಿಯೂ 21ನೇ ಶತಮಾನದತ್ತ ಸಾಗುತ್ತಿರುವಾಗ ಒಂದೇ ರೀತಿಯ ಸವಾಲುಗಳನ್ನು ಎದುರಿಸುತ್ತಿವೆ ಎಂದರು. ನಮ್ಮ ನಾಯಕರು ಆ ಸವಾಲುಗಳನ್ನು ಒಟ್ಟಿಗೆ ಎದುರಿಸಲು ಹಿಂದೆಂದಿಗಿಂತಲೂ ಹೆಚ್ಚು ಬದ್ಧರಾಗಿದ್ದಾರೆ. ಅದರ ಭಾಗವಾಗಿರಲು ನನಗೆ ತುಂಬಾ ಸಂತೋಷವಾಗಿದೆ ಎಂದು ತೈ ಹೇಳಿದರು.

ಇಂಡೋ ಫೆಸಿಫಿಕ್ ಆರ್ಥಿಕ ಚೌಕಟ್ಟಿನ ಉಪಕ್ರಮದ ಹಲವಾರು ಅಂಶಗಳಲ್ಲಿ ಭಾರತ ಭಾಗವಹಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದರು.

Articles You Might Like

Share This Article