ದ್ವೇಷದಿಂದ ತುಂಬಿದ ಹಿಂಸೆಗೆ ಅಮೆರಿಕದಲ್ಲಿ ಸ್ಥಾನವಿಲ್ಲ: ಬಿಡೆನ್

Social Share

ವಾಷಿಂಗ್ಟನ್,ಸೆ.16- ದೇಶದಲ್ಲಿ ನಡೆಯುತ್ತ್ತರುವ ದ್ವೇಷದ ಹಿಂಸಾಚಾರವನ್ನು ಬೇರು ಸಹಿತ ಕಿತ್ತುಹಾಕಬೇಕು ಎಂದು ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ. ಹಿಂಸಾಚಾರವನ್ನು ಉತ್ತೇಜಿಸುವವರಿಗೆ ತಕ್ಕ ಶಿಕ್ಷೆ ಖಚಿತ, ಇಂತಹುದಕ್ಕೆ ಅಮೆರಿಕಾದಲ್ಲಿ ಸ್ಥಾನವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಕಳೆದ 2020ರಲ್ಲಿ ಅಮೆರಿಕದಲ್ಲಿ ನಡೆದ ಅಪರಾಧ ಚಟುವಟಿಕೆಗಳು ಮಿತಿ ಮೀರಿವೆ ಇದನ್ನು ಕೊನೆಗಾಣಿಸಲು ಸಿದ್ದ ಎಂದು ಪ್ರತಿಜ್ಞೆ ಮಾಡಿದ್ದಾರೆ.

ಹಿಂದೂಗಳು, ಸಿಖ್ಖರು ಮತ್ತು ಮುಸ್ಲಿಮರ ವಿರುದ್ಧದ ಘಟನೆಗಳು ಸೇರಿದಂತೆ ದೇಶಾದ್ಯಂತ ದ್ವೇಷ ಸಂಬಂಧಿತ ಘಟನೆಗಳ ಉಲ್ಬಣಸಿರುವುದು ಶ್ವೇತ ವರ್ಣೀಯರ ಪ್ರಾಬಲ್ಯಕ್ಕಾಗಿ ಇಂತಹ ಪ್ರವೃತ್ತಿಯಿಂದ ಮಟ್ಟಿನಿಲ್ಲಬೇಕು ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ದ ಹರಿಹಾಯ್ದಿದ್ದಾರೆ.

ನಮ್ಮ ನಂಬಿಕೆಗಳು ಏನೇ ಇರಲಿ, ದ್ವೇಷಪೂರಿತ ಹಿಂಸಾಚಾರದ ವಿರುದ್ಧ ನಾವು ಒಗ್ಗಟ್ಟಾಗಿ ನಿಲ್ಲಬೇಕು, ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮಲ್ಲಿ ಒಂದು ಗುಂಪಿನ ಮೇಲಿನ ದಾಳಿ ಅಕ್ಷರಶಃ ನಮ್ಮೆಲ್ಲರ ಮೇಲಿನ ದಾಳಿಯಾಗಿದೆ ಎಂದು ಬಿಡೆನ್ ಶ್ವೇತ ಭವನದಲ್ಲಿ ನಡೆದ ಯುನೈಟೆಡ್ ವಿ ಸ್ಟ್ಯಾಂಡ ಶೃಂಗಸಭೆಯ ಭಾಷಣದಲ್ಲಿ ಹೇಳಿದರು.

Articles You Might Like

Share This Article