ವಾಷಿಂಗ್ಟನ್, ಜ. 4-ಲಾಸ್ ಏಂಜಲೀಸ್ನ ಮಾಜಿ ಮೇಯರ್ ಎರಿಕ್ ಗಾರ್ಸೆಟ್ಟಿ ಅವರನ್ನು ಭಾರತಕ್ಕೆ ತನ್ನ ರಾಯಭಾರಿಯಾಗಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮರುನಾಮಕರಣ ಮಾಡಿದ್ದಾರೆ.
ಮೂಲತ ಕ್ಯಾಲಿಫೋರ್ನಿಯಾದವರಾದ ಎರಿಕ್ ಎಂ. ಗಾರ್ಸೆಟ್ಟಿ ಅವರು ರಿಪಬ್ಲಿಕ್ ಆಫ್ ಇಂಡಿಯಾಕ್ಕೆ ಅಮೇರಿಕಾ ರಾಯಭಾರಿಯಾಗಲಿದ್ದಾರೆ ಎಂದು ಸೆನೆಟ್ಗೆ ಅನುಮೂದನೆಗಾಗಿ ಕಳುಹಿಸಲಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾರತಕ್ಕೆ ರಾಯಭಾರಿಯಾಗಿ ಸೇವೆ ಸಲ್ಲಿಸಲು ಸರ್ವಾನುಮತದಿಂದ ನಾವು ಈ ನಿರ್ಧರ ಮಾಡಿರುವುದಾಗಿ ಹೇಳಿದ್ದಾರೆ. ಪ್ರಮುಖ ಪಾತ್ರದಲ್ಲಿ ಸೇವೆ ಸಲ್ಲಿಸಲು ಎರಿಕ್ ಗಾರ್ಸೆಟ್ಟಿ ಉತ್ತಮ ಅರ್ಹತೆ ಹೊಂದಿರುವುದರಿಂದ ಆಯ್ಕೆ ನಡೆಇದದೆ ಪೂರ್ಣ ಸೆನೆಟ್ ತಕ್ಷಣವೇ ದೃಢೀಕರಿಸುತ್ತದೆ ಎಂದು ಭಾವಿಸುತ್ತೇವೆ.
ಎಂದರು.ಭಾರತದೊಂದಿಗಿನ ನಮ್ಮ ಸಂಬಂಧವು ನಿರ್ಣಾಯಕವಾಗಿದ್ದು ಶೀಘ್ರದಲ್ಲೇ ಅಕೃತ ಆದೇಶ ಹೊರಬೀಳಲಿದೆ ಎಮದು ಹೇಳಿದರು.
#JoeBiden, #Renominates, #EricGarcetti, #Ambassador, #India,