ವಾಷಿಂಗ್ಟನ್ , ಜುಲೈ 31 – ಅಮೆರಿಕ ಅಧ್ಯಕ್ಷ ಜೋ ಬಿಡೆನ್‍ಗೆ ಮತ್ತೆ ಕೊರೊನಾ ಸೋಂಕು ದೃಢಪಟ್ಟಿದ್ದು ಶ್ವೇತಭವನದ ಪ್ರತ್ಯೇಕ ಕೊಠಡಿಯಲ್ಲಿ ನೆಲೆಸಲಿದ್ದಾರೆ. ಇತ್ತೀಚೆಗೆ ಕೊರೊನಾದಿಂದ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು ಅದರೆ ಶನಿವಾರ ಮತ್ತೆ ಪರೀಕ್ಷೆ ನಡೆಸಿದಾಗ ಕರೋನ ಸೋಂಕು ಮತ್ತೆ ಕಾಣಿಸಿಕೊಂಡಿದೆ.
ಶ್ವೇತಭವನದ ವೈದ್ಯ ಡಾ. ಕೆವಿನ್ ಒ ಕಾನೂರ್ ನೀಡಿರುವ ಮಾಹಿತಿ ಪ್ರಕಾರ ಈಗಾಗಲೆ ರೋಗ ನಿರೋದಕ ಔಷದಿ ,ಚಿಕಿತ್ಸೆ ಪಡೆದಿರುವುದರಿಂದ ಅಧುಕ್ಷ ಬಿಡೆನ್ ಅವರಿಗೆ ರೋಗಲಕ್ಷಣಗಳ ಹೆಚ್ಚಾಗಿ ಬಾದಿಸಿಲ್ಲ ಈ ಸಮಯದಲ್ಲಿ ಹೆಚ್ಚಿನ ಚಿಕಿತ್ಸೆ ಅಗತ್ಯವಿಲ್ಲ, ಕನಿಷ್ಠ ಐದು ದಿನಗಳವರೆಗೆ ಪ್ರತ್ಯೇಕತೆವಾಗಿದ್ದು ಐಸೋಲಟ್ ಆಗಲಿದ್ದಾರೆ ಎಂದು ತಿಳಿಸಿದ್ದಾರೆ ಈ ನಡುವೆ ಅಧ್ಯಕ್ಷರ ಪ್ರವಾಸಗಳನ್ನು ರದ್ದುಗೊಳಿಸಲಾಗಿದೆ.
ನಾನು ಚೆನ್ನಾಗಿದ್ದೇನೆ, ಎಲ್ಲವೂ ಚೆನ್ನಾಗಿದೆ ಎಂದು ಬಿಡೆನ್ ಟ್ವೀಟ್ ವಿಡಿಯೋ ಕಾಳಿಸಿದ್ದಾರೆ. ಬಿಡೆನ್ ಅವರಿಗೆ ಕಳೆದ ಜುಲೈ 21 ರಂದು ಮೊದಲ ಬಾರಿಗೆ ಕರೋನಾ ಸೋಂಕು ಕಣಿಸಿಕೊಂಡಿತ್ತು ನಂತರ ಆಂಟಿ-ವೈರಲ್ ಡ್ರಗ್ ಪ್ಯಾಕ್ಸ್ಲೋವಿಡ್ ಚಿಕಿತ್ಸೆ ನೀಡಲಾಯಿತು. ಕಳೆದ ಶುಕ್ರವಾರ ಮಾಸ್ಕ್ ಧರಿಸಿ ಅಂಗಳದಲ್ಲಿ ಒಡಾಡಲು ಅವಕಾಶ ನೀಡಲು ವೈದ್ಯ ತಂಡ ತಯಾರಿ ನಡೆಸಿದ್ದರು.
ಸಂಸತ್‍ನಲ್ಲಿ ಪ್ರಮುಖ ಕಾಯ್ದೆ ಮಂಗಳವಾರ ಮಂಡನೆಯಾಗಲಿದೆ ಅದರ ಬಗ್ಗೆ ಅಧಿಕಾರಿಗಳ ಜತೆ ನಡೆಸಬೇಕಿತ್ತು ಆದರೆ ಮತ್ತೆ ಸೋಂಕು ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.