ಕೀವ್, ಫೆ.21- ಅಮೆರಿಕ ಮತ್ತು ರಷ್ಯಾ ನಡುವಿನ ಸಂಭವನೀಯ ಸಂಘರ್ಷ ತಪ್ಪಿಸುವ ಕೊನೆಯ ಪ್ರಯತ್ನವಾಗಿ ಅಮೇರಿಕ ಅಧ್ಯಕ್ಷ ಜೋ ಬಿಡೆನ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಲು ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಆದರೆ, ಪುಟಿನ್ ಉಕ್ರೇನ್ ಮೇಲೆ ದಾಳಿ ನಡೆಸದಿದ್ದರೆ ಮಾತ್ರ ಈ ಭೇಟಿ ಎಂದು ಬಿಡೆನ್ ಹೇಳಿದ್ದಾರೆ.
ದಾಳಿ ಆರಂಭವಾಗುವ ಕ್ಷಣದವರೆಗೆ ನಾವು ರಾಜರಾಂತ್ರಿಕ ಪ್ರಯತ್ನಗಳನ್ನು ಮುಂದುವರಿಸುತ್ತೇವೆ ಎಂದು ಅಮೆರಿಕ ಆಡಳಿತ ಸ್ಪಷ್ಟವಾಗಿ ಹೇಳಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಅವರು ತಿಳಿಸಿದ್ದಾರೆ.
ಅಮೆರಿಕ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್ ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯಿ ಲ್ಬಾವ್ರೋವ್ ಅವರು ಮತ್ತೆ ಉಕ್ರೇನ್ ಮೇಲೆ ದಾಳಿ ನಡೆಯದಿದ್ದಲ್ಲಿ ಯೂರೋಪ್‍ನಲ್ಲಿ ಮಾತುಕತೆ ನಡೆಸಬೇಕೆಂದು ನಿಗದಿಯಾಗಿದೆ.
ಕೀವ್‍ನಲ್ಲಿ ಬಾಹ್ಯ ಜನಜೀವನ ಭಾನುವಾರ ಮಾಮೂಲಿನಂತಿತ್ತು. ಆಹಾರ ಮತ್ತು ಚರ್ಚ್‍ಗಳ ಸೇವೆಗಳು ಅಬಾತವಾಗಿದ್ದವು. ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುವ ನಿರ್ಧಾರದಲ್ಲಿ ಅಚಲವಾಗಿದೆ ಎಂದು ವಿಶ್ಲೇಷಿಸಲಾಗಿತ್ತು.
