ಜೋ ಬಿಡೆನ್ 2ನೇ ಅವಧಿಗೆ ಸ್ವಪಕ್ಷೀಯರಿಂದಲೇ ವಿರೋಧ

Social Share

ಲ್ಯಾಕೋನಿಯಾ,ಮಾ.6- ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಎರಡನೇ ಅವಧಿಗೆ ಅಧ್ಯಕ್ಷರಾಗುವುದನ್ನು ಅವರೇ ಪಕ್ಷದ ಸಂಸದರು ವಿರೋಧಿಸಲಾರಂಭಿಸಿದ್ದಾರೆ. ಜೋ ಬಿಡೆನ್‍ಗೆ 80 ವರ್ಷವಾಗಿರುವುದು ಒಂದು ಕಾರಣವಾದರೆ, ಆಫ್ಘಾನಿಸ್ಥಾನದಿಂದ ಸೇನೆಯನ್ನು ಹಿಂಪಡೆದ ಅವರ ನಿರ್ಧಾರ ಅಮೆರಿಕನ್ನರಲ್ಲಿ ಅಸಮಧಾನ ಮಡುಗಟ್ಟುವಂತೆ ಮಾಡಿದೆ.

ಹೀಗಾಗಿ ಬಿಡೆನ್ ಎರಡನೇ ಅವಧಿಗೆ ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧೆ ಮಾಡದಿರುವುದು ಒಳ್ಳೆಯದು ಎಂದು ಅವರದೇ ಪಕ್ಷದ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2019ರ ಚುನಾವಣೆಯಲ್ಲಿ ನ್ಯೂ ಹಾಂಪ್‍ಶೈರ್ ಪ್ರಾಂತ್ಯದಿಂದ ದಾಖಲಾರ್ಹ ಮತಗಳ ಮೂಲಕ ಬಿಡೆನ್ ಚುನಾಯಿತರಾಗಿದ್ದರು. ಈಗ ತವರು ನೆಲದಲ್ಲೂ ವಿರೋಧ ವ್ಯಕ್ತವಾಗುತ್ತಿದೆ. ಈ ಮೊದಲು ಬಿಡೆನ್ ಪರವಾದ ನಿಲುವು ಹೊಂದಿದ್ದ ಸ್ಟೀವ್ ಶಟ್ರ್ಲೆಫ್ ಈಗ ವಿರೋಧ ವ್ಯಕ್ತಪಡಿಸಿದ್ದಾರೆ.

ಬ್ರಿಟನ್ ಸಂಸತ್‍ನಲ್ಲಿ ರಾಹುಲ್ ಭಾಷಣ

ಅಮೆರಿಕಾದ ಬಹಳಷ್ಟು ಮಂದಿ ಬಿಡೆನ್ ಈ ಅವಧಿಗೆ ಸಾಕು ಎಂದು ಅಭಿಪ್ರಾಯ ಹೊಂದಿದ್ದಾರೆ. ಆದರೆ ಬಾಯಿ ಬಿಟ್ಟು ಹೇಳುತ್ತಿಲ್ಲ, ನಾನು ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಇದು ಮುಂದಿನ 2024ರ ಸಾರ್ವತ್ರಿಕ ಚುನಾವಣೆಗೆ ಎರಡನೇ ಬಾರಿಗೆ ಆಯ್ಕೆಯಾಗಲು ಸಿದ್ಧವಾಗುತ್ತಿರುವ ಅಮೆರಿಕಾದ ಅಧ್ಯಕ್ಷರಿಗೆ ಹಿನ್ನೆಡೆಯುಂಟು ಮಾಡಿದೆ. ಡೆಮಾಕ್ರಟಿಕ್ ಪಕ್ಷದಲ್ಲೇ ತಮ್ಮ ನಾಯಕ ವಿರುದ್ಧ ಅಸಮಧಾನಗಳು ಕೇಳಿ ಬರಲಾರಂಭಿಸಿವೆ.

ಅಸೋಸಿಯೇಟೆಡ್ ಪ್ರೆಸ್ ಮತ್ತು ಎನ್‍ಆರ್‍ಸಿ ಸೆಂಟರ್ ಫಾರ್ ಪಬ್ಲಿಕ್ ಅಫೇರ್ಸ್ ರಿಸರ್ಚ್‍ನಿಂದ ಸಮೀಕ್ಷೆ ನಡೆಸಿ ಕಳೆದ ತಿಂಗಳು ಬಿಡುಗಡೆ ಮಾಡಲಾದ ವರದಿಯಲ್ಲಿ ರಾಷ್ಟ್ರವ್ಯಾಪಿ ಕೇವಲ ಶೇ.37 ಡೆಮೋಕ್ರಾಟಿಕ್‍ಗಳು ಅಧ್ಯಕ್ಷರು ಎರಡನೇ ಅವಧಿಗೆ ಮುಂದುವರೆಯಬೇಕು ಎಂದು ಬಯಸಿದ್ದಾರೆ. ಕಳೆದ ವರ್ಷದ ಮಧ್ಯಂತರ ಚುನಾವಣೆಯ ಹಿಂದಿನ ವಾರಗಳಲ್ಲಿ ಶೇ.52ಮಂದಿ ಬಿಡೆನ್‍ಗೆ ಬೆಂಬಲ ವ್ಯಕ್ತಪಡಿಸಿದ್ದರು.

ಮತ್ತೆ ಬಿಡೆನ್ ನಾಯಕತ್ವದಲ್ಲೇ ಚುನಾವಣೆಗೆ ಹೋದರೆ ಡೆಮಾಕ್ರೆಟಿಕ್ ಪಕ್ಷಕ್ಕೆ ಹಿನ್ನೆಡೆಯಾಗಲಿದೆ. ರಿಪಬ್ಲಿಕನ್ ಪಕ್ಷ ಮುಂಚೂಣಿಯತ್ತ ಹೆಜ್ಜೆ ಹಾಕಿದ್ದು, ಡೋನಾಲ್ಡ್ ಟ್ರಂಪ್ 2024ರಲ್ಲಿ ಮೇಲುಗೈ ಸಾಧಿಸಬಹುದು. ಅದಕ್ಕಾಗಿ ಆರಂಭದಲ್ಲೇ ಬಿಡೆನ್ ತಮ್ಮ ವಿರುದ್ಧದ ಅಭಿಪ್ರಾಯಗಳನ್ನು ಸರಿ ಪಡಿಸಿಕೊಳ್ಳಬೇಕು ಎಂದು ಡೆಮಾಕ್ರೆಟಿಕ್‍ಗಳು ಸಲಹೆ ನೀಡಿದ್ದಾರೆ.

ನ್ಯೂ ಹಾಂಪ್‍ಶೈರ್ ಸಣ್ಣ ರಾಜ್ಯವೆಂದು ನಿರ್ಲಕ್ಷ್ಯಿಸುವಂತ್ತಿಲ್ಲ. ಸಣ್ಣ ಅಸಮಧಾನ ಮುಂದೆ ಜನಾಭಿಪ್ರಾಯವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.

ಬಿಗ್‍ಬಿ ಪಕ್ಕೆಲುಬು ಮುರಿತ, ಪ್ರಾಣಾಪಾಯದಿಂದ ಪಾರು

ಬಿಡೆನ್ ವಕ್ತಾರ ಆಂಡ್ರ್ಯೂ ಬೇಟ್ಸ್ ಮಾತ್ರ ವ್ಯತಿರಿಕ್ತ ಹೇಳಿಕೆ ನೀಡಿದ್ದು, ಜನ ಬಿಡೆನ್‍ರ ಕ್ರಿಯಾತ್ಮಕ ನಾಯಕತ್ವ ಮುಂದುವರೆಯಬೇಕು ಎಂದು ಬಯಸಿದ್ದಾರೆ. ಚುನಾವಣೆ ಕಾಲಕ್ಕೆ ಜನ ಈ ಸಮೀಕ್ಷೆಗಳನ್ನು ಮರೆತು ಹೋಗುತ್ತಾರೆ. ನ್ಯೂ ಹ್ಯಾಂಪ್‍ಶೈರ್ ಸಂಸದರ ಕೋಪಗಳು ತಣ್ಣಗಾಗುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Joe Bidens, reelection, faces, resistance, Democrats,

Articles You Might Like

Share This Article