ಜಮ್ಮು,ಮಾ.11- ದಂತ ವೈದ್ಯೆಯನ್ನು ಆಕೆಯ ಗೆಳೆಯ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದು, ತಾನು ಆತ್ಮಹತ್ಯೆ ಯತ್ನಿಸಿರುವ ಘಟನೆ ಜಮ್ಮುವಿನಲ್ಲಿ ನಡೆದಿದೆ.
ವೃತ್ತಿಯಲ್ಲಿ ದಂತ ವೈದ್ಯೆಯಾಗಿರುವ ಜಮ್ಮುವಿನ ತಲ್ಲಬ್ ತಿಲ್ಲೋ ನಿವಾಸಿ ಸುಮೇಧಾ ಶರ್ಮಾನನ್ನು ಆಕೆಯ ಗೆಳೆಯ ಪಂಪೋಶ್ ಕಾಲೋನಿ ನಿವಾಸಿ ಜೋಹರ್ ಗನೈ ಅಡುಗೆ ಮನೆಯ ಚಾಕು ಬಳಸಿ ಹತ್ಯೆ ಮಾಡಿದ್ದಾನೆ. ವೈಯಕ್ತಿಕ ಸಮಸ್ಯೆಗಳಿಂದಾಗಿ ತನ್ನ ಜೀವನವನ್ನು ಕೊನೆಗೊಳಿಸಿಕೊಳ್ಳುತ್ತಿರುವುದಾಗಿ ಜೋಹರ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾನೆ.
ಫೇಸ್‍ಬುಕ್ ಪೋಸ್ಟ್ ನೋಡಿದ ಸಂಬಂಕರು ಪೆಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಆತ ನೆಲೆಸಿದ್ದ ಜಮ್ಮುವಿನ ಜಾನಿಪುರದಲ್ಲಿರುವ ಜೋಹರ್ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯವನ್ನು ಕಾಡಲಾರಂಭಿಸಿದೆ ಹಂದಿಜ್ವರ, ಹಾಂಗ್‍ಕಾಂಗ್ ಸೋಂಕು
ಮನೆಯ ಗೇಟ್‍ಗೆ ಬೀಗ ಹಾಕಿದ್ದ ರಿಂದ ಪೋಲೀಸರು ಬಲವಂತವಾಗಿ ಒಳನುಗ್ಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಮೇಧಾ ಶವ ಪತ್ತೆಯಾಗಿದೆ. ಆರೋಪಿ ಜೋಹರ್ ಹೊಟ್ಟೆಗೂ ಬಲವಾದ ಗಾಯಗಳಾಗಿರುವುದು ಕಂಡು ಬಂದಿದೆ. ತಕ್ಷಣ ಇಬ್ಬರನ್ನೂ ಪೋಲೀಸರು ಆಸ್ಪತ್ರೆಗೆ ಕರೆದೊಯ್ದರೂ ಸುಮೇಧಾ ಬದುಕುಳಿಯಲಿಲ್ಲ. ಆರೋಪಿ ಜೋಹರ್‍ನ ಸ್ಥಿತಿ ಚಿಂತಾಜನಕವಾಗಿದೆ.
ಪೋಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಗಳು ಮತ್ತು ಸಂತ್ರಸ್ತರು ಪರಸ್ಪರ ಸಂಬಂಧ ಹೊಂದಿದ್ದರು. ಇಬ್ಬರು ಜಮ್ಮುವಿನ ದಂತ ವೈದ್ಯಕೀಯ ಕಾಲೇಜಿನಲ್ಲಿ ಬಿಡಿಎಸ್ ಪದವಿ ಪಡೆದಿದ್ದಾರೆ.
ನಂತರ ಸುಮೇಧಾ ಎಂಡಿಎಸ್ ಅಧ್ಯಯನಕ್ಕಾಗಿ ಜಮ್ಮುವಿನಿಂದ ತೆರಳಿದರು. ಮಾರ್ಚ್ 7 ರಂದು ಹೋಳಿ ಹಬ್ಬಕ್ಕಾಗಿ ಸುಮೇದಾ ಮನೆಗೆ ಬಂದಿದ್ದರು. ಪ್ರಿಯಕರನ ಮನೆಯಲ್ಲಿ ಜಗಳ ನಡೆದಿದ್ದು, ಈ ಹಂತದಲ್ಲಿ ಕೊಲೆ ನಡೆದಿದೆ. ಎರಡು ಕುಟುಂಬಗಳು ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ ಎಂದು ವರದಿಯಾಗಿದೆ.
BIG NEWS : ಬಿಜೆಪಿ ಸೇರಲ್ಲ, ಬೆಂಬಲಿಸುತ್ತೇನೆ ಅಷ್ಟೇ – ಸುಮಲತಾ ಅಂಬರೀಷ್
ಸಂತ್ರಸ್ತೆಯ ಶವವನ್ನು ಪೋಲೀಸರು ಕಾನೂನು ಕ್ರಮಗಳನ್ನು ಪೂರ್ಣಗೊಳಿಸಿದ ನಂತರ ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
Johar Ganai, stabbed, Sumedha Sharma, death,