ರಾಜ್ಯಪಾಲರ ಭಾಷಣದ ವೇಳೆ ಕಾಂಗ್ರೆಸ್‍ ಕುರ್ಚಿಗಳು ಖಾಲಿ ಖಾಲಿ

Social Share

ಬೆಂಗಳೂರು,ಫೆ.10- ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವ ವೇಳೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‍ನ ಬಹುತೇಕ ಶಾಸಕರು ಗೈರು ಹಾಜರಾಗಿದ್ದರು.

ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡುವಾಗ ಪ್ರತಿಪಕ್ಷಗಳು ಹಾಜರಿರುವುದು ರೂಢಿ ಸಂಪ್ರದಾಯ, ಮೊದಲಿನಿಂದಲೂ ಇದು ಪಾಲನೆಯಾಗುತ್ತಿದೆ. ಕೆಲವು ವೇಳೆ ರಾಜಕೀಯ ಸಂಘರ್ಷಗಳು ಸಹನೆ ಮಿತಿ ಮೀರಿದ ವೇಳೆಯಲ್ಲೂ ಪ್ರತಿಪಕ್ಷಗಳು ಸದನದಲ್ಲಿ ಹಾಜರಿದ್ದು, ಆಕ್ಷೇಪಿಸುವುದು, ಪ್ರತಿಭಟಿಸುವುದು ಅಥವಾ ಬಹಿಷ್ಕರಿಸುವುದನ್ನು ಮಾಡಿವೆ. ಇದೇ ಮೊದಲ ಬಾರಿಗೆ ಶೇ.80ರಷ್ಟು ಸದಸ್ಯರು ಗೈರು ಹಾಜರಾಗುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.

ಇದು ಚುನಾವಣೆಯ ವರ್ಷವಾಗಿದ್ದು ಎಲ್ಲಾ ರಾಜಕೀಯ ಪಕ್ಷಗಳಿಗೂ ಪ್ರಚಾರದತ್ತ ಹೆಚ್ಚು ಗಮನ ಹರಿಸಿವೆ. ಕಾಂಗ್ರೆಸ್ ನಿರಂತರವಾದ ಪ್ರಜಾಧ್ವನಿ ಯಾತ್ರೆ ಮಾಡಿದರೆ, ಜೆಡಿಎಸ್ ಪಂಚರತ್ನ ಯಾತ್ರೆ ನಡೆಸುತ್ತಿದೆ. ಆಡಳಿತಾರೂಢ ಬಿಜೆಪಿ ಮೊದಲ ಹಂತದಲ್ಲಿ ಜನಸಂಕಲ್ಪ ಯಾತ್ರೆ ಮುಗಿಸಿ, ಈಗ ಎರಡನೇ ಹಂತದಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಸುತ್ತಿದೆ.

ಪಂಜಾಬ್‍ನ ಗಡಿಯಲ್ಲಿ ಚೀನಾ ಮೇಡ್ ಶಸ್ತ್ರಾಸ್ತ್ರ, ಡ್ರಗ್ಸ್ ಎಸೆದ ಪಾಕ್ ಡ್ರೋನ್

ಈ ಮೂಲಕ ಮೂರು ಪಕ್ಷಗಳು ಜನರನ್ನು ತಲುಪಲು ಯತ್ನಿಸುತ್ತಿವೆ. ಇದರ ನಡುವೆ ಆರಂಭವಾಗಿರುವ ವರ್ಷಾರಂಭದ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ವಿಪಕ್ಷ ಕಾಂಗ್ರೆಸ್ ನಿರಾಸಕ್ತಿ ತೋರಿಸಿದೆ.

ಇಂದು ವಿಧಾನಮಂಡಲದ ಸಭಾಂಗಣದಲ್ಲಿ ನಡೆದ ರಾಜ್ಯಪಾಲರ ಭಾಷಣದ ವೇಳೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಭಾಗದ ಖುರ್ಚಿಗಳು ಬಹುತೇಕ ಖಾಲಿ ಉಳಿಸಿದ್ದವು. ಕಾಂಗ್ರೆಸ್‍ನ ವಿಧಾನಸಭೆ ಮತ್ತು ವಿಧಾನ ಪರಿಷತ್‍ನ ಬಹುತೇಕ ಸದಸ್ಯರು ಗೈರು ಹಾಜರಾಗಿದ್ದರು. ಪ್ರತಿಪಕ್ಷದ ಮೊದಲ ಸಾಲಿನಲ್ಲಿ ಸಿದ್ದರಾಮಯ್ಯ ಹೊರತು ಪಡಿಸಿ ಉಳಿದೆಲ್ಲಾ ನಾಯಕರು ಹಾಜರಿದ್ದರು. ಇನ್ನೂ ಎರಡು, ಮೂರು ಮತ್ತು ನಾಲ್ಕನೇ ಸಾಲು ಸಂಪೂರ್ಣ ಖಾಲಿ ಇತ್ತು. ಐದನೇ ಸಾಲಿನಲ್ಲಿ ಬೆರಳೆಣಿಕೆಯ ಕಾಂಗ್ರೆಸ್ ಸದಸ್ಯರು ಕಂಡು ಬಂದರು.

ವಿಮಾನದಲ್ಲಿ ದೋಷ, 13 ಗಂಟೆ ನಿಲ್ದಾಣದಲ್ಲೇ ಕಾಲ ಕಳೆದ 170 ಪ್ರಯಾಣಿಕರು

ವಿಧಾನಸಭೆ ಉಪನಾಯಕ ಯು.ಟಿ.ಖಾದರ್, ಕಾಂಗ್ರೆಸ್ ಹಿರಿಯ ನಾಯಕರಾದ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್, ರಮೇಶ್ ಕುಮಾರ್, ಬಿ.ಕೆ.ಹರಿಪ್ರಸಾದ್, ಸಲೀಂ ಅಹ್ಮದ್ ಸೇರಿದಂತೆ ಆಯ್ದ ಕೆಲವು ಶಾಸಕರು ಮಾತ್ರ ಉಪಸ್ಥಿತರಿದ್ದರು. ಸಿದ್ದರಾಮಯ್ಯ ಕಲಬುರಗಿ ಜಿಲ್ಲೆಯ ಸುರಪುರ ಮತ್ತು ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿನ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ.

ಬಿಜೆಪಿ, ಜೆಡಿಎಸ್ ಪಾಳೆಯದಲ್ಲಿ ಬಹುತೇಕ ಶಾಸಕರು ಕಲಾಪದಲ್ಲಿ ಹಾಜರಿದ್ದರು. ಕಾಂಗ್ರೆಸ್ ಭಾಗದ ಕುರ್ಚಿಗಳು ಮಾತ್ರ ಖಾಲಿ ಹೊಡೆಯುತ್ತಿದ್ದವು. ಜೆಡಿಎಸ್‍ನಿಂದ ಕಾಂಗ್ರೆಸ್‍ನತ್ತ ಮುಖ ಮಾಡಿರುವ ಕೆಲವು ಶಾಸಕರು ಜೆಡಿಎಸ್ ಪಾಳೆಯದಲ್ಲೇ ಆಸೀನರಾಗಿದ್ದರು.

Joint session, Governor Thawar Chand Gehlot Congress, MLAs, absent,

Articles You Might Like

Share This Article