ಇಂದು ಆರಂಭಗೊಂಡ ಅಧಿವೇಶನದಲ್ಲಿ ಕಂಡುಬಂದ ಹಲವು ವಿಶೇಷತೆಗಳು

Social Share

ಬೆಂಗಳೂರು,ಫೆ.14- ಇಂದಿನಿಂದ ಆರಂಭವಾದ ವರ್ಷದ ಮೊದಲ ವಿಧಾನ ಪರಿಷತ್ ಕಲಾಪ ಹಲವು ವಿಶೇಷತೆಗಳಿಗೆ ಕಾರಣವಾಯಿತು. ಹೊಸದಾಗಿ ಚುನಾಯಿತರಾದ ಹಲವು ಯುವ ಸದಸ್ಯರು ಕಲಾಪದಲ್ಲಿ ಭಾಗವಹಿಸಿದ್ದರು. ಸಭಾಪತಿ ಬಸವರಾಜ ಹೊರಟ್ಟಿ ಅವರು, ಮುಖ್ಯಮಂತ್ರಿ ಅವರ ಶಿಫಾರಸ್ಸು ಆಧರಿಸಿ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಸಭಾನಾಯಕರನ್ನಾಗಿ ಮರು ನೇಮಕ ಮಾಡಲಾಗಿದೆ ಎಂದು ಘೋಷಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪತ್ರ ಆಧರಿಸಿ ಬಿ.ಕೆ.ಹರಿಪ್ರಸಾದ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ, ಕೆ.ಗೋವಿಂದ ರಾಜು ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ಹರಿಪ್ರಸಾದ್ ಅವರ ಶಿಫಾರಸ್ಸು ಆಧರಿಸಿ ಸದಸ್ಯ ಪ್ರಕಾಶ್ ರಾಥೋಡ್‍ರನ್ನು ವಿಪಕ್ಷ ಸಚೇತಕರನ್ನಾಗಿ ನೇಮಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು.
ಸಭಾಪತಿ, ಉಪಸಭಾಪತಿಯವರ ಗೈರು ಹಾಜರಿಯಲ್ಲಿ ಪೀಠದಲ್ಲಿ ಕುಳಿತು ಸದನ ನಡೆಸುವ ಪ್ಯಾನಲ್‍ಗೆ ಬಿಜೆಪಿಯ ಡಾ.ತೇಜಸ್ವಿನಿ, ಭಾರತಿಶೆಟ್ಟಿ, ಜೆಡಿಎಸ್‍ನ ಕೆ.ಟಿ.ಶ್ರೀಕಂಠಯ್ಯ, ಕಾಂಗ್ರೆಸ್‍ನ ವೀಣಾ ಅಚ್ಚಯ್ಯ ಅವರನ್ನು ನೇಮಿಸಲಾಗಿದೆ ಎಂದು ಪ್ರಕಟಿಸಿದರು. ನೂತನ ಸದಸ್ಯರಾದ ದಿನೇಶ್ ಗೂಳಿಗೌಡ, ರಾಜೇಂದ್ರ, ಮಂಜುನಾಥ್ ಭಂಡಾರಿ, ಅನಿಲ್ ಕುಮಾರ್, ಚೆನ್ನರಾಜ ಹಟ್ಟಿಹೊಳಿ, ಸಲಿಂ ಅಹಮದ್, ಅರುಣ್ ಸೇರಿದಂತೆ ಹಲವರು ಕಲಾಪದಲ್ಲಿ ಭಾಗವಹಿಸಿ ಗಮನ ಸೆಳೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗೂಳಿಗೌಡ ಅವರು, ಪ್ರಜಾಪ್ರಭುತ್ವದ ದೇಗುಲ ಎಂದೇ ಕರೆಯುವ ವಿಧಾನ ಪರಿಷತ್‍ನಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಮಂಡ್ಯ ಜಿಲ್ಲೆಯ ಜನಪ್ರತಿನಿಗಳಿಗೆ ಧನ್ಯವಾದ ಹೇಳುವುದಲ್ಲದೆ, ಜಿಲ್ಲೆಯ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆ ಹರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

Articles You Might Like

Share This Article