ಸಬೂಬು ಹೇಳದೆ ಕಲಾಪಕ್ಕೆ ಬನ್ನಿ : ಕಾಗೇರಿ

Social Share

ಬೆಂಗಳೂರು,ಫೆ.9- ನಾಳೆಯಿಂದ ಆರಂಭವಾಗಲಿರುವ ಜಂಟಿ ಅಧಿವೇಶನ ವರ್ಷದ ಕೊನೆಯ ಅಧಿವೇಶನವಾಗಿರುವ ಹಿನ್ನಲೆಯಲ್ಲಿ ಸದಸ್ಯರು ಸಬೂಬು ಹೇಳದೆ ಕಲಾಪದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ವಿಧಾಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಬರುತ್ತಿದೆ ಎಂದು ನೆಪ ಹೇಳದೆ ಎಲ್ಲ ಸದಸ್ಯರು ಕಡ್ಡಾಯವಾಗಿ ಕಲಾಪದಲ್ಲಿ ಪಾಲ್ಗೊಳ್ಳಬೇಕು. ನಿಮ್ಮ ಜವಾಬ್ದಾರಿ ಅರಿತು ಪಾಲ್ಗೊಳ್ಳಿ. ಇದು ಪ್ರಜಾಪ್ರಭುತ್ವದ ಜವಾಬ್ದಾರಿ ಎಂಬುದನ್ನು ಯಾರೊಬ್ಬರು ಮರೆಯಬಾರದು ಎಂದು ಸಲಹೆ ಮಾಡಿದರು.

ಯಾವುದೇ ಸದಸ್ಯರು ಮೊದಲೇ ಕಾರ್ಯಕ್ರಮವನ್ನು ನಿಗದಿಪಡಿಸುವುದಿದ್ದರೆ ಇದು ಕೊನೆಯ ಅಧಿವೇಶನ ವಾಗಿರುವುದರಿಂದ ನಿಮ್ಮ ಹಾಜರಾತಿ ಅತ್ಯಮೂಲ್ಯ ವಾಗಿರುತ್ತದೆ.

ಬೆಂಗಳೂರು ನಗರದೊಳಗೆ ಟ್ರಾಕ್ಟರ್ ಸಂಚಾರ ನಿರ್ಬಂಧ ವಿರೋಧಿಸಿ ಬಾರಿ ಪ್ರತಿಭಟನೆ

ನಾನು ಸಭಾಧ್ಯಕ್ಷನಾಗಿ ನಿಮ್ಮ ಪರವಾಗಿ ಮತ್ತು ಮತದಾರರಿಗೆ ಮನವಿ ಮಾಡಿಕೊಳ್ಳುತ್ತೇನೆ. ಚುನಾವಣೆ ಎನ್ನುವ ಕಾರಣಕ್ಕೆ ಸದನದ ಘನತೆ ಕುಗ್ಗಬಾರದು ಎಂದರು. ಕೊನೆಯ ಅಧಿವೇಶನ ಇದಾಗಿರುವುದರಿಂದ 5 ವರ್ಷಗಳ ತಮ್ಮ ಸಾರ್ವಜನಿಕ ಜೀವನ ಯಶಸ್ವಿಯಾಗಿ ಮುನ್ನಡೆಸಲು ಕಾರಣವಾಗಿದೆ. ಜೊತೆಗೆ ತಮ್ಮ ಜವಾಬ್ದಾರಿ ಕೂಡ ಹೆಚ್ಚಾಗಿದೆ. ಆಯ್ಕೆಯಾದ ಸದಸ್ಯರು ಮತದಾರರ ಋಣವನ್ನು ತೀರಿಸಲು ಇದೊಂದು ಸುವರ್ಣಾವಕಾಶ. 224 ಸದಸ್ಯರು ಸದನಕ್ಕೆ ಹಾಜರಾಗಬೇಕು.

ಕಳೆದ ಡಿಸೆಂಬರ್‍ನಲ್ಲಿ ಬೆಳಗಾವಿಯಲ್ಲಿ ಚಲಿಗಾಲದ ಅಧಿವೇಶನ ಆರಂಭವಾಗಿತ್ತು. ಬಳಿಕ ನಾಳೆಯಿಂದ ಕೊನೆಯ ಅಧಿವೇಶನ ಆರಂಭವಾಗಲಿದೆ. ಒಟ್ಟು 11 ದಿನಗಳ ಕಾಲ ಕಲಾಪ ನಡೆಯಲಿದ್ದು, 24ರ ನಂತರವು ಚುನಾವಣಾ ನೀತಿ ಸಂಹಿತೆ ಅನ್ವಯವಾಗದೆ ಕಲಾಪ ನಡೆಸಲು ಅವಕಾಶ ಸಿಗುತ್ತದೆ ಎಂದರು.

15ನೇ ವಿಧಾನಸಭೆಯ ಅಧಿವೇಶನ ಇದಾಗಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರು ವಿಧಾನಸೌಧ ಗ್ರಾಂಡ್ ಸ್ಟೆಪ್ ಮೂಲಕ ಆಗಮಿಸಿ ಜಂಟಿ ಅಧಿವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಫೆ.17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2023-24ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. 20ರಿಂದ 24ರವರೆಗೆ ಬಜೆಟ್ ಮೇಲಿನ ಚರ್ಚೆ ಅಂಗೀಕಾರವಾಗಲಿದೆ. ಸೋಮವಾರ ಕಾರ್ಯಕಲಾಪ ಸಭೆ ಕರೆದು ಉಭಯ ಸದನಗಳ ನಾಯಕರ ಜೊತೆ ಚರ್ಚಿಸಿ ಅಧಿವೇಶನವನ್ನು ಎಲ್ಲಿಯವರೆಗೂ ನಡೆಸಬೇಕೆಂಬುದರ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.

ಬಂಡಾಯಕ್ಕೆ ಇತಿಶ್ರೀ ಹಾಡಲು ಬಿಜೆಪಿ ಕಾರ್ಯತಂತ್ರ

ಈ ಬಾರಿಯ ಅಧಿವೇಶನದಲ್ಲಿ ಒಟ್ಟು 7 ವಿಧೇಯಕಗಳು ಮಂಡನೆಯಾಗಲಿದೆ. ಕನ್ನಡ ಸಮಗ್ರ ವಿಧೇಯಕ ಹಾಗೂ 6 ಖಾಸ ಬಿಲ್‍ಗಳು ವೇಳಾಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಒಟ್ಟು ಆರು ದಿನಗಳ ಕಾಲ ಚರ್ಚೆ ನಡೆಯಲಿದೆ. ನಿಯಮದಂತೆ ಶೂನ್ಯವೇಳೆ, ಖಾಸಗಿ ಕಲಾಪ ನಡೆಯಲಿದೆ. ಸದಸ್ಯರಿಂದ 1300 ಪ್ರಶ್ನೆಗಳು ಬಂದಿದ್ದು, ಚುಕ್ಕಿ ಇಲ್ಲದ ಪ್ರಶ್ನೆಗಳು ಸಹ ಬಂದಿವೆ ಎಂದು ತಿಳಿಸಿದರು.

ಲೋಕಸಭಾ ಸ್ಪೀಕರ್ ಅವರು ನನ್ನ ಅಧ್ಯಕ್ಷತೆಯಲ್ಲಿ ಉತ್ತಮ ಸದನ ಎಂದು ನಿರ್ಧರಿಸಲು ನನ್ನ ನೇತೃತ್ವದಲ್ಲಿ ಮಾನದಂಡಕ್ಕೆ ಕಮಿಟಿ ರಚನೆ ಮಾಡಿದ್ದಾರೆ. ದೆಹಲಿ ಸ್ಪೀಕರ್, ಅಸ್ಸಾಂ, ತಮಿಳುನಾಡು ಸ್ಪೀಕರ್ ಸದಸ್ಯರಿದ್ದರು. ಮಹಾರಾಷ್ಟ್ರ, ಗುಜರಾತ್ ಸ್ಪೀಕರ್ ಮಧ್ಯದಲ್ಲಿ ಭಾಗಿಯಾಗಿದ್ದರು. 17 ಮೇ 2022ರಲ್ಲಿ ಕಮಿಟಿ ರಚನೆ ಮಾಡಲಾಯಿತು. ಮೂರು ಸಭೆಯನ್ನು ಮಾಡಿದ್ದೆವು ಎಂದು ಇದೇ ವೇಳೆ ಕಾಗೇರಿ ತಿಳಿಸಿದರು.

ಬಾನಂಗಳದಲ್ಲಿ ಲೋಹದ ಹಕ್ಕಿಗಳ ರೋಚಕ ತಾಲೀಮು

2023ರಲ್ಲಿ ಫೆ.6ರಂದು ದೆಹಲಿಯಲ್ಲಿ ಲೋಕಸಭಾ ಸ್ಪೀಕರ್‍ಗೆ ವರದಿ ನೀಡಿದೆವು. ಇನ್ನು ಮುಂದೆ ಲೋಕಸಭಾ ಸ್ಪೀಕರ್ ಅವರಿಗೆ ಮನವಿ ಮಾಡಿದ್ದೇವೆ. ಈಗಿನಿಂದಲೇ ಜ ರಿಗೆ ಬರುವಂತೆ ಮನವಿ ಮಾಡಿದ್ದೇವೆ. ನಾವು ಕೊಟ್ಟ ವರದಿ ಪ್ರಕಾರ ಉತ್ತಮ ವಿಧಾನಸಭೆ, ವಿಧಾನಪರಿಷತ್ ಯಾವುದು ಎಂದು ನಿರ್ಧಾರ ಆಗಲಿದೆ. ನನ್ನ ಸ್ಪೀಕರ್ ಅವ ಮುಗಿಯುವ ಸಂದರ್ಭದಲ್ಲಿ ನಾನು ಭೇಟಿಯಾಗಿ ಬಂದಿದ್ದೇನೆ. ಕರ್ನಾಟಕ ವಿಧಾನಸಭೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.

joint session, starting, tomorrow, Speaker Kageri,

Articles You Might Like

Share This Article