ಜೋಶಿಮಠ,ಜ.7- ಹಿಂದುಗಳ ಶ್ರದ್ಧಾ ಕೇಂದ್ರವಾಗಿರುವ ಉತ್ತರಾಕಾಂಡ್ನ ಬದ್ರಿನಾಥ, ಹೇಮಕುಂದ್ ಸಾಹಿಬ್ ಮತ್ತು ಅಂತಾರಾಷ್ಟ್ರೀಯ ಯಾತ್ರಾ ಕೇಂದ್ರ ಅವೌಲಿಗೆ ಹೆಬ್ಬಾಗಿಲಿನಂತಿರುವ ಜೋಶಿಮಠ ಪ್ರಕೃತಿ ವಿಕೋಪದ ಅಂಚಿನಲ್ಲಿದೆ.
ಶತಮಾನಗಳ ಹಿಂದೆ ಆದಿಗುರು ಶಂಕರಾಚಾರ್ಯರು ನೆಲೆಸಿದ್ದ ಈ ಸ್ಥಳ ಭೂ ಕುಸಿತದಿಂದ ಅಪಾಯಕಾರಿ ಪರಿಸ್ಥಿತಿಯಲ್ಲಿದ್ದು ಸಂಪೂರ್ಣ ನಶಿಸಿ ಹೋಗುವ ಆತಂಕದಲ್ಲಿದೆ. ಜೋಶಿಮಠನಲ್ಲಿರುವ ಮನೆಗಳು, ರಸ್ತೆಗಳು, ಮೈದಾನ ಸೇರಿದಂತೆ ಹಲವೆಡೆ ಕ್ರಮೇಣ ಬಿರುಕು ಹೆಚ್ಚಾಗ ತೋಡಗಿದೆ.
ಪರಿಸ್ಥಿತಿಯ ಗಂಭೀರತೆ ಅರಿತ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿನಿ, ಈ ಪ್ರದೇಶದಲ್ಲಿ ವಾಸವಿರುವ 600ಕ್ಕೂ ಹೆಚ್ಚು ಕುಟುಂಬಗಳನ್ನು ತಕ್ಷಣ ಸ್ಥಳಾಂತರಿಸಲು ಆದೇಶಿಸಿದ್ದಾರೆ. ಶುಕ್ರವಾರ ಜೋಶಿಮಠದಲ್ಲಿರುವ ದೇವಸ್ಥಾನ ಕುಸಿದಿದ್ದು, ಸ್ಥಳೀಯರಲ್ಲಿನ ಆತಂಕವನ್ನು ಹೆಚ್ಚಿಸಿದೆ. ಸುಮಾರು ಒಂದುವರೆ ವರ್ಷಗಳ ಹಿಂದೆ ಬಿರುಕು ಬಿಟ್ಟಿರುವ ಗೋಡೆಗಳ ನಡುವೆಯೇ ಬದುಕುತ್ತಿರುವ ನಿವಾಸಿಗಳು ಯಾವ ಕ್ಷಣದಲ್ಲಿ ಏನಾಗುವುದೋ ಎಂಬ ಭಯದಲ್ಲಿದ್ದಾರೆ.
ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಕುಡುಕ ಅರೆಸ್ಟ್
ಜೋಶಿಮಠನ ಗಾಂಧಿನಗರ ಪ್ರದೇಶದಲ್ಲಿ ಒಂದುವರೆ ವರ್ಷದ ಹಿಂದೆ ಬಿರುಕು ಕಾಣಿಸಿಕೊಳ್ಳಲಾರಂಭಿಸಿತ್ತು. ಕ್ರಮೇಣ ಅದು ಸುನೀಲ್, ಮನೋಹರ್ ಬಾಗ್, ಸಿಗಂಧರ್, ಮರ್ವಾರಿ ಭಾಗಗಳಿಗೂ ಹಬ್ಬಿತ್ತು ಜೋಶಿಮಠನ ನಗರಸಭೆ ಮಾಜಿ ಅಧ್ಯಕ್ಷ ರಿಶಿಪ್ರಸಾದ್ ಸಾತಿ ತಿಳಿಸಿದ್ದಾರೆ.
ಸುನೀಲ್ ಪ್ರದೇಶದಲ್ಲಿ ಹದಿನೈದು ದಿನಗಳ ಹಿಂದೆ ಕಾಣಿಸಿಕೊಂಡ ಬಿರುಕಿನಿಂದ ಇತ್ತೀಚೆಗೆ ಮನೆಯೊಂದು ಕುಸಿದಿದೆ. ಮೌಂಟೈನ್ ವ್ಯೂ ಮತ್ತು ಮಲಾರಿ ಇನ್ ಎಂಬ ಎರಡು ಹೋಟೆಲ್ಗಳ ಗೋಡೆಗಳು ಮನೆಯೊಂದಿಗೆ ಕುಸಿದಿವೆ. ಆ ಭಾಗದಲ್ಲಿ ಐದು ಕುಟುಂಬಗಳು ವಾಸಿಸುತ್ತಿದ್ದವು, ಅವುಗಳನ್ನು ಸ್ಥಳಾಂತರಿಸುವ ತುರ್ತು ಪರಿಸ್ಥಿತಿ ಎದುರಾಗಿದೆ.
ಸಮೀಪದಲ್ಲೇ ಇರುವ ವಿದ್ಯುತ್ ಉತ್ಪಾದನಾ ಯೋಜನೆಯಲ್ಲಿ ಕೆಲಸ ಮಾಡುವ ಕುಟುಂಬಗಳು ಜೋಶಿಮಠನಲ್ಲಿ ವಾಸಿಸುತ್ತಿವೆ. ಆ ಜನರನ್ನು ಕಂಪನಿ ಸ್ಥಳಾಂತರಿಸುತ್ತಿದೆ. ಜನಸಾಮಾನ್ಯರು ಒಂದುವರೆ ವರ್ಷದಿಂದ ಬಿರುಕು ಬಿಟ್ಟಿರುವ ಗೋಡೆಗಳಿಗೆ ಬಿದಿರಿನ ಮರವನ್ನು ಅಡ್ಡಲಾಗಿ ಇಟ್ಟು ಭಯದಲ್ಲೇ ವಾಸ ಮಾಡುತ್ತಿದ್ದಾರೆ.
ಶಿಕ್ಷಕಿ ಮೇಲೆ ಗುಂಡು ಹರಿಸಿದ 6 ವರ್ಷದ ವಿದ್ಯಾರ್ಥಿ
ಸುಮಾರು 561 ಮನೆಗಳ ಗೋಡೆಗಳು ಹಾನಿಯಾಗಿವೆ. ಬಿರುಕು ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತಿದೆ. ಸುರಕ್ಷಿತ ಮನೆಗಳ ಕೊರತೆಯಿಂದ ಜನ ಎಲ್ಲಿಗೆ ಹೋಗಬೇಕು ಎಂಬುದನ್ನು ಅರಿಯದೇ ಕಂಗಾಲಾಗಿದ್ದಾರೆ. ಕಳೆದ ವರ್ಷ ಬದರಿನಾಥ ಹೆದ್ದಾರಿ ಕುಸಿದಿತ್ತು.
ಅನಂತರವಂತೂ ಭಯ ಮತ್ತಷ್ಟು ಹೆಚ್ಚಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಬದ್ರಿನಾಥದ ಧಾರ್ಮಿಕ ಮತ್ತು ಸಾಂಸ್ಕøತಿಕ ಐಕ್ಯತಾ ಸ್ಥಳವಾದ ಜೋಶಿಮಠ ಕುಸಿಯುವ ಸಾಧ್ಯತೆಗಳು ದಟ್ಟವಾಗಿವೆ ಎನ್ನಲಾಗಿದೆ.
Cracks, Continue, Badrinath, Joshimath, Land Subsidence,