ಆಲಿಘರ್‍ನಲ್ಲೂ ಬಿರುಕು ಬಿಟ್ಟ ಮನೆಗಳು

Social Share

ನವದೆಹಲಿ,ಜ.11-ಉತ್ತರಾಖಂಡದ ಜೋಶಿಮಠದ ಮಾದರಿಯಲ್ಲೇ ಆಲಿಘರ್‍ನಲ್ಲೂ ಮನೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅಲಿಘರ್‍ನ ಕನ್ವರಿಗಂಜ್‍ನಲ್ಲಿರುವ ಐದು ಮನೆಗಳಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಜೋಶಿಮಠದ ಮಾದರಿಯಲ್ಲೇ ನಮ್ಮ ಕೆಲವು ಮನೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿವೆ. ಇದರಿಂದ ನಾವು ಭಯಭೀತರಾಗಿದ್ದೇವೆ. ಈ ಕುರಿತಂತೆ ನಾವು ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ಭೂಗರ್ಭದಲ್ಲಿ ಆಳವಡಿಸಲಾಗುತ್ತಿರುವ ಪೈಪ್‍ಲೈನ್ ಸೋರಿಕೆಯಿಂದಾಗಿ ಮನೆಗಳು ಬಿರುಕು ಬೀಳುತ್ತಿರುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮಗಳನ್ನು ಬರ್ಬರ ಹತ್ಯೆ ಮಾಡಿದ ತಂದೆ ಮತ್ತು ಮಲತಾಯಿ

ಮನೆಗಳಲ್ಲಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಪೌರಾಯುಕ್ತರು ಸ್ಥಳಕ್ಕೆ ಆಗಮಿಸಿ ಬಿರುಕು ಬಿಟ್ಟಿರುವ ಮನೆಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Joshimath, cracks, develop, few houses, Aligarh,

Articles You Might Like

Share This Article