ಚಮೋಲಿ,ಜ.13-ಉತ್ತರಾಖಂಡದ ಜೋಶಿಮಠದಲ್ಲಿ ಕೇವಲ 12 ದಿನಗಳಲ್ಲಿ 5.4 ಸೆಂ.ಮೀ ನಷ್ಟು ಭೂಮಿ ಮುಳುಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ. ಇಸ್ರೋದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಬಿಡುಗಡೆ ಮಾಡಿರುವ ಉಪಗ್ರಹ ಚಿತ್ರಗಳಲ್ಲಿ ಜೋಶಿಮಠವು ಡಿಸೆಂಬರ್ 27 ಮತ್ತು ಜನವರಿ 8 ರ ನಡುವೆ 5.4 ಸೆಂ.ಮೀ ಮುಳುಗಿರುವುದು ಕಂಡು ಬಂದಿದೆ.
ಮಧ್ಯ ಜೋಶಿಮಠದಲ್ಲಿ, ಸೇನಾ ಹೆಲಿಪ್ಯಾಡ್ ಮತ್ತು ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಮಣ್ಣಿನ ತ್ವರಿತ ಸ್ಥಳಾಂತರ ಸಂಭವಿಸಿದೆ. ಜೋಶಿಮಠ-ಔಲಿ ರಸ್ತೆಯ ಬಳಿ 2,180 ಮೀಟರ್ ಎತ್ತರದಲ್ಲಿ ಮುಳುಗುವಿಕೆಯ ಕೇಂದ್ರ ಬಿಂದುವಿದೆ ಎಂದು ಇಸ್ರೋ ವರದಿ ಹೇಳಿದೆ.
ಬಿಬಿಎಂಪಿ ಖಜಾನೆ ಖಾಲಿಯಾಯ್ತಾ..? ಸಾಲಕ್ಕಾಗಿ ಬ್ಯಾಂಕ್ ಮೊರೆ
ಬದರಿನಾಥದಂತಹ ಜನಪ್ರಿಯ ಯಾತ್ರಾಸ್ಥಳಗಳ ಹೆಬ್ಬಾಗಿಲು ಎಂದು ಕರೆಯಲ್ಪಡುವ ಮುಳುಗುತ್ತಿರುವ ದೇವಾಲಯ ಪಟ್ಟಣವು ಕಟ್ಟಡಗಳು ಮತ್ತು ರಸ್ತೆಗಳಲ್ಲಿ ಭಾರೀ ಬಿರುಕುಗಳು ಕಾಣಿಸಿಕೊಂಡು ದುರಂತದ ಅಂಚಿನಲ್ಲಿದೆ. ಉಪಗ್ರಹ ಸಮೀಕ್ಷೆಯ ನಂತರ ಸುಮಾರು 4,000 ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಹೋಟೆಲ್ಗಳು ಮತ್ತು ವ್ಯಾಪಾರ ಸಂಸ್ಥೆಗಳಲ್ಲದೆ, 678 ಮನೆಗಳು ಅಪಾಯದಲ್ಲಿವೆ ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ.
Joshimath, land, ISRO, releases, satellite, images,