ಪತ್ರಕರ್ತನ ಹತ್ಯೆ ಖಂಡಿಸಿ ಪ್ರತಿಭಟನೆ

Social Share

ರತ್ನಗಿರಿ,ಫೆ.10- ಪತ್ರಕರ್ತನ ಹತ್ಯೆ ಖಂಡಿಸಿ ಮಹಾರಾಷ್ಟ್ರದಲ್ಲಿ ಪತ್ರಕರ್ತರ ಸಂಘಗಳು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿವೆ. ಕಳೆದ 7 ರಂದು ಪತ್ರಕರ್ತ ಶಶಿಕಾಂತ್ ವಾರಿಶೆ ಎಂಬುವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಆದರೆ, ಶಶಿಕಾಂತ್ ಅವರನ್ನು ಸಮಾಜದ್ರೋಹಿಗಳು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಪತ್ರಕರ್ತರ ಸಂಘಟನೆಗಳು ಪ್ರತಿಭಟನೆ ಹಾದಿ ಹಿಡಿದಿವೆ.

ಟಿವಿಜೆಎ, ಮುಂಬೈ ಪ್ರೆಸ್ ಕ್ಲಬ್, ಮುಂಬೈ ಮರಾಠಿ ಪತ್ರಕರ್ತರ ಸಂಘ, ಬಿಎನ್‍ಪಿ (ಬಾಂಬೆ ನ್ಯೂಸ್ ಫೋಟೋಗ್ರಾಫರ್ ಅಸೋಸಿಯೇಷನ್) ಮತ್ತು ಮುಂಬೈ ಕ್ರೈಂ ರಿಪೋರ್ಟರ್ ಅಸೋಸಿಯೇಷನ್ ಮತ್ತಿತರ ಸಂಘಗಳು ರಾಜ್ಯಾದ್ಯಂತ ತಹಸಿಲ್ ಮತ್ತು ಜಿಲ್ಲಾ ಕೇಂದ್ರಗಳ ಹೊರಗೆ ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ, ತಹಸಿಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ರತ್ನಗಿರಿಯಲ್ಲಿ ಉದ್ದೇಶಿತ ನಾನಾರ್ ಸಂಸ್ಕರಣಾಗಾರದ ವಿರುದ್ಧ ಅವರು ಸುದ್ದಿ ಪ್ರಕಟಿಸಿದ ಕೆಲವೇ ಗಂಟೆಗಳ ನಂತರ ಸಂಸ್ಕರಣಾಗಾರವನ್ನು ಬೆಂಬಲಿಸುವ ಗುಂಪಿನ ಪದಾಧಿಕಾರಿಯನ್ನು ಬಂಧಿಸಲಾಯಿತು.

ಇಸ್ರೋ ಮತ್ತೊಂದು ಮೈಲಿಗಲ್ಲು : ಬಾಹ್ಯಾಕಾಶದ ಕಕ್ಷೆ ಸೇರಿದ 3 ಉಪಗ್ರಹಗಳು

ಈ ಘಟನೆ ಬೆನ್ನಲ್ಲೇ ಪತ್ರಕರ್ತ ವಾರಿಶೆ ರಾಜಾಪುರ ಹೆದ್ದಾರಿಯ ಪೆಟ್ರೋಲ್ ಪಂಪ್ ಬಳಿ ನಿಂತಿದ್ದಾಗ ಕಾರಿನಲ್ಲಿ ಬಂದು ದುಷ್ಕರ್ಮಿಗಳು ಕಾರಿನಿಂದ ಡಿಕ್ಕಿ ಹೊಡೆಸಿ ಹತ್ಯೆ ಮಾಡಿದ್ದರು. ಕಾರಿನಡಿ ಸಿಲುಕಿದ ಶಶಿಕಾಂತ್ ದೇಹವನ್ನು ಕಾರು ಹಲವು ಮೀಟರ್‍ಗಳ ದೂರದವರೆಗೆ ಎಳೆದೊಯ್ದಿತ್ತು.

ಸ್ಥಳೀಯ ಭೂ ಮಾಫಿಯಾದ ನಾಯಕ ಅಂಬೇಕರ್ ಅವರು ಮುಂಬರುವ ರಿಫೈನರಿ ಪರವಾಗಿ ಯಾವುದೇ ಭೂಸ್ವಾೀಧಿನವನ್ನು ವಿರೋಧಿಸುವವರಿಗೆ ಬೆದರಿಕೆ ಮತ್ತು ಕಿರುಕುಳ ನೀಡುತ್ತ ಬಂದಿದ್ದಾರೆ.

ಕಾರು ಅಪಘಾತ ಮಾಡಿದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆಬ್ರವರಿ 13ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ರತ್ನಗಿರಿ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ್ ಕುಲಕರ್ಣಿ ತಿಳಿಸಿದ್ದಾರೆ.

ಪಂಜಾಬ್‍ನ ಗಡಿಯಲ್ಲಿ ಚೀನಾ ಮೇಡ್ ಶಸ್ತ್ರಾಸ್ತ್ರ, ಡ್ರಗ್ಸ್ ಎಸೆದ ಪಾಕ್ ಡ್ರೋನ್

ಆದರೂ ಪತ್ರಕರ್ತನನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಿಸಿರುವ ಪ್ರಮುಖ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಪತ್ರಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

Journalist, association, hold, protest, Maharashtra,

Articles You Might Like

Share This Article