ನವದೆಹಲಿ,ಫೆ.8- ದೇಶದ ಭದ್ರತೆ, ಸಾರ್ವಭೌಮತೆ ಮತ್ತು ಸಮಗ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಅಥವಾ ನೈತಿಕತೆಗೆ ಹಾನಿಯುಂಟುಮಾಡುವ ರೀತಿಯಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ತಮ್ಮ ಸರ್ಕಾರಿ ಮಾನ್ಯತೆಯನ್ನು ಕಳೆದುಕೊಳ್ಳುತ್ತಾರೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತನ್ನ ಹೊಸ ಮಾರ್ಗಸೂಚಿಗಳಲ್ಲಿ ತಿಳಿಸಿದೆ.
ನಿನ್ನೆ ಪ್ರಕಟಿಸಲಾದ ಕೇಂದ್ರೀಯ ಮಾಧ್ಯಮ ಮಾನ್ಯತೆ ಮಾರ್ಗಸೂಚಿಗಳು-2022, ಆನ್‍ಲೈನ್ ಸುದ್ದಿ ವೇದಿಕೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರಿಗೂ ಮಾನ್ಯತಾ ಪತ್ರಗಳನ್ನು ನೀಡುವ ಪ್ರಸ್ತಾವನೆ ಮಾಡಿದೆ. ಸುದ್ದಿ ಸಂಗ್ರಹಕರನ್ನು ಮಾನ್ಯತೆಗೆ ಪರಿಗಣಿಸುವಂತ್ತಿಲ್ಲ ಎಂದು ಸರ್ಕಾರ ಹೇಳಿದೆ.
ಹೊಸ ನೀತಿಯ ಪ್ರಕಾರ ಪತ್ರಕರ್ತರು ದೇಶದ ಭದ್ರತೆ, ಸಾರ್ವಭೌಮತೆ ಮತ್ತು ಸಮಗ್ರತೆ, ವಿದೇಶಿ ರಾಜ್ಯಗಳೊಂದಿಗಿನ ಸ್ನೇಹ ಸಂಬಂಧಗಳು, ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಅಥವಾ ನೈತಿಕತೆ ಅಥವಾ ಯಾವುದೇ ಸಂಬಂಧದಲ್ಲಿ ಪೂರ್ವಾಗ್ರಹ ಪೀಡಿತ ರೀತಿಯಲ್ಲಿ ವರ್ತಿಸಿದರೆ ಮಾನ್ಯತೆಯನ್ನು ಹಿಂಪಡೆಯಲು ಅಥವಾ ಅಮಾನತುಗೊಳಿಸಲು ಅವಕಾಶಗಳಿವೆ.
ನ್ಯಾಯಾಲಯದ ನಿಂದನೆ, ಮಾನನಷ್ಟ ಅಥವಾ ಅಪರಾಧಕ್ಕೆ ಪ್ರಚೋದನೆ ವರದಿಗಳನ್ನು ಮಾಡುವ, ನಕಲಿ ಮಾಹಿತಿ ಅಥವಾ ದಾಖಲೆಗಳನ್ನು ಪ್ರಕಟಿಸುವ ಸುದ್ದಿಸಂಸ್ಥೆಗಳ ಮತ್ತು ಪತ್ರಕರ್ತರ ಮಾನ್ಯತೆಯನ್ನು ರದ್ದುಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳ ಮಾನ್ಯತೆಯನ್ನು ಗರಿಷ್ಠ ಐದು ವರ್ಷಗಳವರೆಗೆ, ಕನಿಷ್ಠ ಎರಡು ವರ್ಷಗಳವರೆಗೆ ವಜಾಗೊಳಿಸಲು ಸೆಂಟ್ರಲ್ ಮೀಡಿಯಾ ಅಕ್ರೆಡಿಟೇಶನ್ ಕಮಿಟಿ ನಿರ್ಧರಿಸಬಹುದಾಗಿದೆ.
ಮಾನ್ಯತೆ ಪಡೆದ ಮಾಧ್ಯಮದವರು ಸಾರ್ವಜನಿಕ, ಸಾಮಾಜಿಕ ಮಾಧ್ಯಮದ ಪ್ರೊಫೈಲ್, ವಿಸಿಟಿಂಗ್ ಕಾರ್ಡ್‍ಗಳು, ಲೆಟರ್ ಹೆಡ್‍ಗಳು ಅಥವಾ ಯಾವುದೇ ಇತರ ನಮೂನೆಗಳಲ್ಲಿ, ಪ್ರಕಟಿತ ಕೃತಿಗಳಲ್ಲಿ ಭಾರತ ಸರ್ಕಾರಕ್ಕೆ ಮಾನ್ಯತೆ ಪಡೆದಿದ್ದಾರೆ ಎಂಬ ಪದ ಬಳಕೆಯನ್ನು ನಿಷೇಧಿಸಲಾಗಿದೆ.
ಕೇಂದ್ರ ಸರ್ಕಾರದ ವಾತಾ ಮತ್ತು ಪ್ರಸಾರ ಸಚಿವಾಲಯ ಪಿಐಬಿ ಪ್ರಧಾನ ನಿರ್ದೇಶಕ ಜನರಲ್ ಅಧ್ಯಕ್ಷತೆಯಲ್ಲಿ ಕೇಂದ್ರೀಯ ಮಾಧ್ಯಮ ಮಾನ್ಯತೆ ಸಮಿತಿ ರಚಿಸಲಿದ್ದು, ಅದರಲ್ಲಿ ಸರ್ಕಾರದಿಂದ ನಾಮನಿರ್ದೇಶನಗೊಂಡ 25 ಸದಸ್ಯರು ಕೆಲಸ ನಿರ್ವಹಿಸಲಿದ್ದಾರೆ. ಸಮಿತಿ ತನ್ನ ಮೊದಲ ಸಭೆಯ ದಿನದಿಂದ ಎರಡು ವರ್ಷಗಳ ಕಾಲಮಿತಿಯನ್ನು ಹೊಂದಿರಲಿದೆ.
ಪಿಐಬಿಯಿಂದ ನಾಮನಿರ್ದೇಶನಗೊಂಡ ಐದು ಸದಸ್ಯರನ್ನೊಳಗೊಂಡ ಉಪ ಸಮಿತಿಯು ಮಾನ್ಯತೆ ಪ್ರಕರಣಗಳ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಆನ್‍ಲೈನ್ ಸುದ್ದಿ ವೇದಿಕೆಗಳು ಒಂದು ವರ್ಷಕ್ಕೂ ಹೆಚ್ಚು ಕಾಲ ಅಸ್ತಿತ್ವದಲ್ಲಿರಬೇಕು ಮತ್ತು ವೆಬ್‍ಸೈಟ್‍ಗೆ ಆರು ತಿಂಗಳ ಸರಾಸರಿ ಮಾಸಿಕ ಸಂದರ್ಶಕರ ಸಂಖ್ಯೆಯನ್ನು ಪರಿಗಣಿಸಿ ಮಾನ್ಯತೆ ನೀಡಲು ಸೂಚಿಸಲಾಗಿದೆ.
ವೆಬ್‍ಸೈಟ್ ಭಾರತದಲ್ಲಿ ನೋಂದಾಯಿತ ಕಚೇರಿಯನ್ನು ಹೊಂದಿರಬೇಕು, ವರದಿಗಾರರು ದೆಹಲಿ ಅಥವಾ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ನೆಲೆಗೊಂಡಿರಬೇಕು ಎಂದು ಸ್ಪಷ್ಟ ಪಡಿಸಲಾಗಿದೆ. ಅರ್ಜಿದಾರರು ಸಲ್ಲಿಸಿದ ಮಾಹಿತಿಯು ಸುಳ್ಳು ಎಂದು ಕಂಡುಬಂದಲ್ಲಿ, ಮುಂದಿನ ಮೂರು ವರ್ಷಗಳವರೆಗೆ ಮಾನ್ಯತೆಗಾಗಿ ಅರ್ಜಿ ಸಲ್ಲಿಸುವ ಅಕಾರವನ್ನು ನಿರ್ಬಂಸಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
