ಮಂಡ್ಯ, ಅ.6- ಭಾರತ ಐಕ್ಯತಾ ಯಾತ್ರೆಯ ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಸ್ಥಳೀಯ ಪೊಲೀಸರು ಹಲ್ಲೆ ನಡೆಸಿ, ದೌರ್ಜನ್ಯವೆಸಗಿರುವುದು, ಆಕ್ರೋಶಕ್ಕೆ ಗುರಿಯಾಗಿದೆ.ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಯಾತ್ರೆಯಲ್ಲಿ ಭಾಗವಹಿಸಿದ್ದರಿಂದ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿತ್ತು. ಜನರ ನೂಕುನುಗ್ಗಲು ಹೆಚ್ಚಾಗಿತ್ತು.
ಈ ನಡುವೆ ವರದಿ ಮಾಡುತ್ತಿದ್ದ ಪತ್ರಕರ್ತರಿಗೂ ತೊಂದರೆಯಾಗಿದ್ದು, ಪೊಲೀಸರು ಜಕ್ಕನಹಳ್ಳಿ ಬಳಿ ಇಬ್ಬರು ವರದಿಗಾರರ ಮೇಲೆ ಹಲ್ಲೆ ನಡೆಸಿದ್ದಾರೆ.ಯಾತ್ರೆ ಸಾಗುವ ಹಾದಿಯಲ್ಲಿ ಪೊಲೀಸರು ಭದ್ರತೆ ಹೆಸರಿನಲ್ಲಿ ಪದೇ ಪದೇ ಮಾಧ್ಯಮಗಳಿಗೆ ಕಿರಿಕಿರಿ ಮಾಡುತ್ತಿದ್ದರು. ಯಾತ್ರೆಗಿಂತಲೂ ವೇಗವಾಗಿ ಸಾಗುವಂತೆ ಮಾಧ್ಯಮಗಳಿಗೆ ತಾಕೀತು ಮಾಡಲಾಗಿತ್ತು.
ಈ ಹಂತದಲ್ಲಿ ಮಾಧ್ಯಮದ ಸಿಬ್ಬಂದಿಗಳನ್ನು ಸುತ್ತವರೆದ ಪೊಲೀಸರು ದೌರ್ಜನ್ಯವೆಸಗಿದ್ದಾರೆ. ಪೊಲೀಸರ ಹಲ್ಲೆಯಿಂದ ಪತ್ರಕರ್ತರಿಗೆ ಗಾಯಗಳಾಗಿದೆ. ಗಲಾಟೆಯನ್ನು ಮಂಡ್ಯ ಜಿಲ್ಲೆಯ ಎಸ್‍ಪಿ ಕಂಡು ಕಾಣದಂತೆ ಇರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಪೊಲೀಸರ ದೌರ್ಜನ್ಯಕ್ಕೆ ಕಾಂಗ್ರೆಸ್ ನಾಯಕರು ಅಸಮಧಾನ ವ್ಯಕ್ತ ಪಡಿಸಿದ್ದಾರೆ. ಅಗತ್ಯ ಇರುವ ಕಡೆ ರಕ್ಷಣೆ ಒದಗಿಸದೆ ನಿರ್ಲಕ್ಷ್ಯ ತೋರಿಸಲಾಗುತ್ತಿದೆ. ಅನತ್ಯವಾಗಿ ಭದ್ರತೆಯ ಹೆಸರಿನಲ್ಲಿ ಕಿರಿಕಿರಿ ಮಾಡಲಾಗುತ್ತಿದೆ. ರಾಜ್ಯದಲ್ಲಿ ಯಾತ್ರೆಯ ಉದ್ಘಾಟನೆಯ ದಿನ ಉದ್ದೇಶಪೂರ್ವಕವಾಗಿಯೇ ವಾಹನಗಳನ್ನು ದೂರದಲ್ಲಿ ನಿಲ್ಲಿಸಿ ತೊಂದರೆ ಮಾಡಲಾಯಿತು.
ರಾಹುಲ್‍ಗಾಂಯವರ ಸುತ್ತ ಭದ್ರತೆ ಒದಗಿಸಲು ಹಗ್ಗ ಬಳಸಲು ಪೆÇಲೀಸರು ಹಿಂದೆ ಮುಂದೆ ನೋಡಿದರು. ಆದರೆ ಯಾತ್ರೆಗೆ ಕೆಟ್ಟ ಹೆಸರು ಬರಬೇಕು ಎಂಬ ಕಾರಣಕ್ಕೆ ಮಾಧ್ಯಮದವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.