ಹೆಣ್ಣೊಬ್ಬಳ ಹೋರಾಟದ ಕಥೆ ಜೂಲಿಯೆಟ್ 2

Social Share

ಶಾಶ್ವತವಾಗಿ ಬಿಟ್ಟು ಹೋದ ಅಪ್ಪನ ಆಸೆಯನ್ನು ಈಡೇರಿಸುವ ಸಲುವಾಗಿ ಮಹಿಳೆ ದಿಟ್ಟ ಹೋರಾಟದ ಹಾದಿ ಹಿಡಿಯುವಾಗ ಬಂದೊದುಗುವ ಸಂಕಷ್ಟಗಳ ಸರಮಾಲೆಯನ್ನು ಎದುರಿಸಿ ನಿಂತು ಜಯಿಸುವ ಸಾಹಸಿ ಮಹಿಳೆಯ ಜೀವನ ಚಿತ್ರಣವೇ ಜೂಲಿಯೆಟ್ 2 ಸಿನಿಮಾದ ಕಥಾ ಹೂರಣ.ಈ ವಾರ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಜೂಲಿಯೆಟ್ 2 ಚಿತ್ರದ ಮೂಲಕ ನಿರ್ದೇಶಕ ವಿ ರಾಜ್ ಬಿ ಗೌಡ ತನ್ನ ಆಲೋಚನೆಗಳು ಮತ್ತು ಕನಸುಗಳನ್ನು ತೆರೆಯ ಮೇಲೆ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ

ತಂದೆ ಮಗಳ ನಡುವಿನ ಕಥಾಹಂದರ ಇರುವ ಈ ಚಿತ್ರದಲ್ಲಿ ಅನಿರೀಕ್ಷಿತವಾಗಿ ಜರುಗುವ ಘಟನೆಯೊಂದು ಚಿತ್ರ ಸಾಗುವ ಹಾದಿಯನ್ನೇ ಬದಲಾಯಿಸಿಬಿಡುತ್ತದೆ, ಆರಂಭದಲ್ಲೇ ಜೂಲಿಯಟ್ ತಂದೆ ಅಪಘಾತವೊಂದರಲ್ಲಿ ಹುಸಿರು ಚೆಲ್ಲುತ್ತಾರೆ. ಆ ಸಂದರ್ಭದಲ್ಲಿ ತನ್ನ ಮಗಳಿಗೆ ಮುಖ್ಯವಾದ ಜವಾಬ್ದಾರಿಯೊಂದನ್ನ ವಹಿಸಿ ಹೋಗುತ್ತಾರೆ.

ತನ್ನ ಪತ್ನಿಯ ಅನಾರೋಗ್ಯದ ಚಿಕಿತ್ಸೆಗಾಗಿ ಹಳ್ಳಿಯ ಮನೆಯನ್ನು ಸ್ನೇಹಿತನ ಬಳಿ ಅಡಮಾನವಿಟ್ಟು ಹಣ ಪಡೆದಿರುತ್ತಾರೆ. ಆ ಮನೆಯನ್ನು ಬಿಡಿಸಿಕೊಂಡಿರುವುದಿಲ್ಲ. ಮಗಳಿಗೆ ಆ ಜವಾಬ್ದಾರಿಯನ್ನ ವಹಿಸುತ್ತಾರೆ. ತನ್ನ ತಂದೆಯ ಕೊನೆಯ ಆಸೆಯನ್ನು ಈಡೇರಿಸಲು.

ಹಳ್ಳಿಗೆ ಹೋದಾಗ ಅಲ್ಲಿ ಎದುರಾಗುವ ಘಟನೆಗಳೇ ಸಿನಿಮಾದ ಜೀವಾಳ. ಊರಿಗೆ ಬರುವಾಗ ತನ್ನ ತಂದೆಯ ಜೊತೆ ಕಳೆದಿದ್ದ ಆ ಸುಂದರ ದಿನಗಳನ್ನು ನೆನೆಯುತ್ತಾ ಮೆಲುಕು ಹಾಕುತ್ತಲೇ ಜೂಲಿಯೆಟ್ ತನ್ನೂರಿಗೆ ಬಂದಿಳಿಯುತ್ತಾಳೆ. ಅಂದು ರಾತ್ರಿ ಜೂಲಿಯೆಟ್ ಒಬ್ಬಳೇ ಆ ಮನೆಯಲ್ಲಿರಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗುತ್ತದೆ, ಆದರೆ ಅಂದು ರಾತ್ರಿ ಹಲವಾರು ಆಗಂತುಕರು ಆ ಮನೆಗೆ ಬಂದು ಜೂಲಿಯೆಟ್‌ಗೆ ಇನ್ನಿಲ್ಲದ ಕಿರುಕುಳ ನೀಡುತ್ತಾರೆ.

ಅಲ್ಲಿಗೆ ಬಂದ ಆ ವ್ಯಕ್ತಿಗಳು ಯಾರು, ಅವರು ಯಾವ ಉದ್ದೇಶದಿಂದ ಆಕೆಯನ್ನು ಅಟ್ಯಾಕ್ ಮಾಡುತ್ತಾರೆ, ಅವರನ್ನೆಲ್ಲ ಜೂಲಿಯೆಟ್ ಒಬ್ಬಳೇ ಇ ರಾತ್ರಿ ಹೇಗೆ ಎದುರಿಸುತ್ತಾಳೆ, ಕೊನೆಗೂ ಆ ದುಷ್ಟರಿಂದ ಜೂಲಿಯಟ್ ಪಾ ಬ೦ದಳೇ, ತನ್ನ ತಂದೆಯ ಆಸೆಯಂತೆ ಮನೆಯನ್ನು ತನ್ನಂತೆ ಮಾಡಿಕೊಂಡಳೇ ಎಂಬುದನ್ನು ನಿರ್ದೇಶಕ ವಿರಾಜ್ ಬಿ.ಗೌಡ ಅವರು ಚಿತ್ರದ ಕ್ಲೈಮಾಕ್ಸ್‌ನಲ್ಲಿ ಸೊಗಸಾಗಿ ನಿರೂಪಿಸಿದ್ದಾರೆ.

ಜೂಲಿಯೆಟ್ ಒಬ್ಬಳ ಒಂಟಿ ಮನೆಯಲ್ಲಿ ನಾಲ್ವರು ನರರಾಕ್ಷಸರ ಮಧ್ಯೆ ಸಿಂಹಿಣಿಯಂತೆ ಹೋರಾಡುವ ದೃಶ್ಯ ಚಿತ್ರ ನೋಡುವ ಪ್ರತಿಯೊಬ್ಬರನ್ನೂ ಕಾಡುತ್ತದೆ. ಕೊನೆಗೂ ಹೆಣ್ಣು ಅಬಲೆಯಲ್ಲ ಆಕೆ ಸಿಡಿದು ನಿಂತರೆ ಹತ್ತು ಜನ ಎದುರು ನಿಂತರೂ ಧೈರ್ಯದಿಂದ ಹೋರಾಡಿ ಗೆಲ್ಲಬಲ್ಲಳು ಎಂಬುದನ್ನು ನಿರ್ದೇಶಕರು ಈ ಚಿತ್ರದ ಮೂಲಕ ಹೇಳಿದ್ದಾರೆ,

ಪ್ರತಿ ಹೆಣ್ಣು ಮಕ್ಕಳಿಗೂ ಈ ಚಿತ್ರ ಸ್ಪೂರ್ತಿದಾಯಕವಾಗಿದೆ. ಪುರುಷಪ್ರಧಾನ ಸಮಾಜದಲ್ಲಿ ತಾನು ಅಬಲೆಯಲ್ಲ ಎಂಬ ಆತ್ಮಸ್ಥೆರ್ಯ ತುಂಬುತ್ತದೆ. ನೆನಪಲ್ಲಿ ಈಗ ಅವಳಿರದ ಜಾಗ ಎಂಬ ಸಾಹಿತ್ಯವಿರುವ ಸಂದೀಪ್ ಆರ್.ಎನ್ ಅವರ ಸಂಗೀತದಲ್ಲಿ ಮೂಡಿಬಂದಿರುವ ತಂದೆ ಮಗಳ ನಡುವಿನ ಮಧುರ ಬಾಂಧವ್ಯವನ್ನು ಹೇಳುವ ಹಾಡು ನೋಡುಗರೆಲ್ಲರಿಗೂ ಆಪ್ತವಾಗುತ್ತದೆ.

ತಾಯಿ ಪ್ರೀತಿ ಕಳೆದುಕೊಂಡು ತಂದೆಯ ಆಸರೆಯಲ್ಲಿ ಬೆಳೆದಿರೋ ಪ್ರತಿಯೊಬ್ಬ ಹೆಣ್ಣಿಗೂ ಈ ಹಾಡು ಮನದಾಳವನ್ನು ತಟ್ಟುತ್ತದೆ. ಚಿತ್ರದಲ್ಲಿ ಬೃಂದಾ ಆಚಾರ್ಯ ಅವರು ಕಾಯಕಿ ಜ್ಯೂಲಿಯೆಟ್‌ಳ ಪಾತ್ರವೇ ತಾನಾಗಿ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಹೆಣ್ಣೂಬ್ಬಳಿಗೆ ತನ್ನೆದುರಿನ ದಾರಿಗಳೆಲ್ಲವೂ ಮುಚ್ಚಿ ಹೋದಾಗ, ಆಕೆ ತನ್ನತನವನ್ನು ಹೇಗೆ ರಕ್ಷಿಸಿಕೊಳ್ಳುತ್ತಾಳೆ ಎಂದು ನಿರ್ದೇಶಕ ವಿರಾಟ್ ಬಿ.ಗೌಡ ಅವರು ಸನ್ ಪ್ರಿಲ್ಲರ್ ಕಥೆಯೊಂದಿಗೆ ನಿರೂಪಿಸಿದ್ದಾರೆ.

ಪಿಎಲ್ ಪ್ರೊಡಕ್ಷನ್ಸ್ ಅಡಿ ಲಿಖಿತ್ ಆರ್. ಕೋಟ್ಯಾನ್ ಅವರ ನಿರ್ಮಾಣದ ಈ ಚಿತ್ರದಲ್ಲಿ ಮಂಗಳೂರು, ಬೆಳ್ತಂಗಡಿ ಹಾಗೂ ಅವರ ಸುತ್ತಲಿನ ದಟ್ಟ ಅರಣ್ಯ ಪ್ರದೇಶವನ್ನು ಛಾಯಾಗ್ರಾಹಕ ಶೆಂಟೊ ವಿ. ಆಂಟೋ ಅವರು ತಮ್ಮ ಕ್ಯಾಮೆರಾದಲ್ಲಿ ರಮಣೀಯವಾಗಿ ಸೆರೆಹಿಡಿದಿದ್ದಾರೆ. ರವಿ ಬಸರೂರು ಸಹೋದರ ಸಚಿನ್ ಬಸರೂರು ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಹೊಸ ರೂಪವನ್ನೇ ನೀಡಿದೆ. ಶಾರದೆಯಂತೆ ಶಾಂತರೂಪಿಯಾಗಿರುವ ಹೆಣ್ಣಿಗೆ ಏನಾದರೂ ತೊಂದರೆಯಾದಾಗ ಆಕೆ ಹೇಗೆ ದುರ್ಗೆಯ ಅವತಾರ ತಾಳುತ್ತಾಳೆ ಎಂಬುದನ್ನ ನೋಡಬಹುದಾಗಿದೆ.

Juliet 2, kannada, movie, review, Brinda Acharya, Anoop Sagar, Srikanth, Roy Badiger, Kush Acharya, Likith R Kotian,
Virat B Gowda,

Articles You Might Like

Share This Article