ದೇಶದ ಸಾಮಾನ್ಯ ಜನರ ಸೇವೆಯೇ ನನ್ನ ಪ್ರಥಮ ಆಧ್ಯತೆ : CJI ಚಂದ್ರಚೂಡ್

Social Share

ಬೆಂಗಳೂರು, ನ.9- ದೇಶದ ಸಾಮಾನ್ಯ ಜನರ ಸೇವೆಯೇ ನನ್ನ ಪ್ರಥಮ ಆಧ್ಯತೆ ಎಂದು ಸುಪ್ರೀಂಕೋರ್ಟ್‍ನ ನೂತನ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ.

ರಾಷ್ಟ್ರಪತಿ ಭವನದಲ್ಲಿಂದು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಹಾತ್ಮಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ನ್ಯಾಯಾಂಗದ ಮೇಲಿನ ಜನರ ನಂಬಿಕೆಯನ್ನು ಹೆಚ್ಚಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜನರಿಗೆ ಸೇವೆ ಸಲ್ಲಿಸುವುದು ನನ್ನ ಮೊದಲ ಆದ್ಯತೆ. ಮುಂದಿನ ದಿನಗಳಲ್ಲಿ ನೀವೆ ನೋಡಿ ಎಂದರು.

ಸಚಿವ ಸಂಪುಟ ಸೇರಲು ಶಾಸಕರು ಹಿಂದೇಟು

ದೇಶದ ಎಲ್ಲ ಜನರಿಗಾಗಿ ನಾನು ಕೆಲಸ ಮಾಡುತ್ತೇನೆ. ತಂತ್ರಜ್ಞಾನ, ನೋಂದಣಿ ಅಥವಾ ನ್ಯಾಯಾಂಗ ಸುಧಾರಣೆ ಸೇರಿದಂತೆ ಯಾವುದೇ ಕೆಲಸವಿರಲಿ ಅದರಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯ ಬಗ್ಗೆ ಕಾಳಜಿ ವಹಿಸುವುದು ನನ್ನ ಜವಾಬ್ದಾರಿ ಎಂದರು.

ನ್ಯಾಯಾಂಗದ ಮೇಲಿನ ನಂಬಿಕ ಹೆಚ್ಚಿಸುವ ನಿಟ್ಟಿನ ಯೋಜನೆಗಳನ್ನು ನಾನು ಮಾತಿನಲ್ಲಿ ಹೇಳುವುದಿಲ್ಲ, ಕೆಲಸ ಮಾಡಿ ತೋರಿಸುತ್ತೇನೆ ಎಂದು ತಿಳಿಸಿದ್ದಾರೆ.

Articles You Might Like

Share This Article