ಸುಪ್ರೀಂ ಕೋರ್ಟ್ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಯು.ಯು.ಲಿಲಿತ್ ಅಧಿಕಾರ ಸ್ವೀಕಾರ

Social Share

ನವದೆಹಲಿ,ಆ.27- ಸರ್ವೋಚ್ಛ ನ್ಯಾಯಾಲಯದ 49ನೇ ಮುಖ್ಯ ನ್ಯಾಯಮೂರ್ತಿಗಳಾಗಿ ಉದಯ್ ಉಮೇಶ್ ಲಲಿತ್ ಅವರು ಇಂದು ಅಧಿಕಾರ ಸ್ವೀಕರಿಸಿದರು. ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿಕಾರ ಗೌಪ್ಯತೆಯನ್ನು ಬೋಧಿಸಿದರು.

ಸತ್ಯ, ನ್ಯಾಯ, ನಿಷ್ಠೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರತಿಜ್ಞೆಯನ್ನು ಅವರು ಮಾಡಿದರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಎನ್.ವಿ.ರಮಣ ಅವರ ಅಧಿಕಾರ ಅವಧಿ ನಿನ್ನೆಗೆ ಮುಗಿದ್ದಿತ್ತು. ತೆರವಾಗಿದ ಈ ಸ್ಥಾನಕ್ಕೆ ಹಿರಿಯ ನ್ಯಾಯಮೂರ್ತಿ ಉದಯ್ ಲಲಿತ್ ಅವರನ್ನು ನೇಮಿಸಲಾಗಿತ್ತು.

ನೂತನ ಮುಖ್ಯ ನ್ಯಾಯಮೂರ್ತಿಗಳ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಹಲವಾರು ಸಚಿವರು ಹಾಗೂ ಸುಪ್ರೀಂಕೋರ್ಟ್‍ನ ಹಿರಿಯ ನ್ಯಾಯಮೂರ್ತಿಗಳು, ವಕೀಲರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಕೇವಲ 74 ದಿನಗಳ ಕಾಲ ಮಾತ್ರವೇ ಯುಯು ಲಿಲಿತ್ ಅಧಿಕಾರದಲ್ಲಿ ಇರಲಿದ್ದಾರೆ. ನವೆಂಬರ್ 8ರಂದು ಅವರು 65ನೇ ವರ್ಷಕ್ಕೆ ಕಾಲಿಡುವುದರೊಂದಿಗೆ ಸಿಜೆಐ ಸ್ಥಾನದಿಂದ ನಿವೃತ್ತರಾಗಲಿದ್ದಾರೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗುವ ಮುನ್ನ ವಕೀಲಿಕೆಯಲ್ಲಿದ್ದ ಯು.ಯು.ಲಿಲಿತ್ ಅವರನ್ನು, 2014ರಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಅವರನ್ನು ನೇರವಾಗಿ ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸು ಮಾಡಿತ್ತು.
ಸುಪ್ರೀಂ ಕೋರ್ಟ್ ಇತಿಹಾಸದಲ್ಲಿ ಈವೆಗೂ ಕೇವಲ 8 ಮಂದಿ ಮಾತ್ರವೇ ನೇರವಾಗಿ ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. 2014ರ ಬಳಿಕ ಈ ರೀತಿಯಲ್ಲಿ ನೇಮಕವಾದ ನಾಲ್ಕನೇ ವ್ಯಕ್ತಿ ಯುಯು ಲಿಲಿತ್.

ಲಲಿತ್ ಅವರು 1983ರ ಜೂನ್‍ನಲ್ಲಿ ಬಾರ್ ಕೌನ್ಸಿಲ್‍ಗೆ ಸೇರಿದ್ದರು. 1986 ರಲ್ಲಿ ಭಾರತದ ಸುಪ್ರೀಂ ಕೋರ್ಟ್‍ನಲ್ಲಿ ಅಭ್ಯಾಸ ಮಾಡಲು ಪ್ರಾರಂಭಿಸಿದರು. 1986 ರಿಂದ 1992 ರವರೆಗೆ, ಲಲಿತ್ ಅವರು ಭಾರತದ ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ಅವರೊಂದಿಗೆ ಕೆಲಸ ಮಾಡಿದ್ದರು. 29 ಏಪ್ರಿಲ್ 2004 ರಂದು, ಲಲಿತ್ ಅವರನ್ನು ಸುಪ್ರೀಂ ಕೋರ್ಟ್‍ನ ಹಿರಿಯ ವಕೀಲರಾಗಿ ನೇಮಿಸಲಾಯಿತು.

ತ್ರಿವಳಿ ತಲಾಖ್ ತೀರ್ಪು ಐವರು ಸದಸ್ಯರ ಸಾಂವಿಧಾನಿಕ ಪೀಠದ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದ ಯುಯು ಲಿಲಿತ್ ಅವರ ಪೀಠವು, 3-2 ಮತಗಳಿಂದ ತ್ರಿವಳಿ ತಲಾಖ್ ಎನ್ನುವುದು ಅಸಾಂವಿಧಾನಿಕ ಎಂದು ಹೇಳಿದ್ದರು. 13 ಜುಲೈ 2020ರಂದು ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಆಡಳಿತದ ಹಕ್ಕು ವಿಚಾರದಲ್ಲಿ ತಿರುವಾಂಕೂರು ರಾಜಮನೆತನದ ಹಕ್ಕನ್ನು ಎತ್ತಿಹಿಡಿದ ದ್ವಿಸದಸ್ಯ ಪೀಠದಲ್ಲಿ ನ್ಯಾಯಮೂರ್ತಿ ಯು.ಯು.ಲಲಿತ್ ಭಾಗವಾಗಿದ್ದರು.

2019ರ ಜನವರಿ 10ರಂದು, ಅಯೋಧ್ಯೆ ವಿವಾದದ ಪ್ರಕರಣದ ವಿಚಾರಣೆಗಾಗಿ ರಚಿಸಲಾದ ಐವರು ನ್ಯಾಯಾೀಶರ ಪೀಠದಿಂದ ನ್ಯಾಯಮೂರ್ತಿ ಲಲಿತ್ ಅವರು ಹಿಂದೆ ಸರಿದಿದ್ದರು. ಉತ್ತರ ಪ್ರದೇಶದ ಹಿಂದಿನ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಸಂಬಂಧಿತ ಪ್ರಕರಣದಲ್ಲಿ ಅವರು ಹಾ ಜಾರಾಗಿದ್ದನ್ನು ರಾಜೀವ್ ಧವನ್ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಇದರ ಬೆನ್ನಲ್ಲಿಯೇ ಅಯೋಧ್ಯೆ ಪ್ರಕರಣದಲ್ಲಿ ತೀರ್ಪುದಾರರಾಗಲು ಅವರು ನಿರಾಕರಿಸಿದ್ದರು. ಇಂಥ ಅನೇಕ ಉನ್ನತ-ಪ್ರೊಫೈಲ್ ಪ್ರಕರಣಗಳಿಂದ ಯುಯು ಲಿಲಿತ್ ಸ್ವತಃ ಹಿಂದೆ ಸರಿದಿದ್ದರು.

Articles You Might Like

Share This Article