1700 ಅಡಿ ಎತ್ತರದ ಗಡಾಯಿಕಲ್ಲು ಏರಲಿರುವ ಜ್ಯೋತಿರಾಜ್

Social Share

ಬೆಳ್ತಂಗಡಿ, ಫೆ.11- ಚಿತ್ರದುರ್ಗದ ಕಲ್ಲಿನ ಕೋಟೆ, ಜೋಗ್ ಫಾಲ್ಸ್ ಪ್ರದೇಶ ಸೇರಿದಂತೆ ಅಪಾಯಕಾರಿ ಪ್ರದೇಶಗಳನ್ನು ಯಾವುದೇ ಸುರಕ್ಷತಾ ಪರಿಕರಗಳಿಲ್ಲದೆ ಬರಿಗೈಯಿಂದಲೇ ಏರುವ ಸಾಹಸಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಭಾನುವಾರ 1700 ಅಡಿ ಎತ್ತರದ ಗಡಾಯಿ ಕಲ್ಲನ್ನು ಏರಲಿದ್ದಾರೆ.

ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲಿರುವ ಗಡಾಯಿಕಲ್ಲು, ನರಸಿಂಹ ಘಡ,ಜಮಲಾಬಾದ್ ಎಂದು ಕೂಡ ಹೆಸರುವಾಸಿಯಾಗಿದೆ. ಹಲವಾರು ಪರ್ವತಗಳು, ಬೆಟ್ಟ, ಕಟ್ಟಡಗಳನ್ನು ಏರಿರುವ ಜ್ಯೋತಿರಾಜï, ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ತಮ್ಮ ಸಾಹಸ ತೋರಲು ಮುಂದಾಗಿದ್ದಾರೆ.

ಇದಕ್ಕಾಗಿ ಇವರ ಜತೆ ಎಂಟು ಮಂದಿಯ ತಂಡ ಆಗಮಿಸಿದ್ದು ಪೂರ್ವ ತಯಾರಿ ಕೈಗೊಂಡಿದೆ. ತಂಡದ ಸದಸ್ಯರಾದ ಬಸವರಾಜ, ರಾಜಶೇಖರ, ಪವನ್ ಜೋಸ್, ನಿಂಗರಾಜು ಮದನ್, ನವೀನ್, ಅಭಿ, ಪವನ್ ಕುಮಾರ್ ಆಗಮಿಸಿದ್ದು ಧರ್ಮಸ್ಥಳದಲ್ಲಿ ವಾಸ್ತವ್ಯ ಹೂಡಿದ್ದಾರೆ.ತಂಡ ಶಾಸಕ ಹರೀಶ್ ಪೂಂಜರವರನ್ನು ಭೇಟಿ ಮಾಡಿದೆ. ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ವತಿಯಿಂದ ಗಡಾಯಿ ಕಲ್ಲು ಏರಲು ಅನುಮತಿಯನ್ನು ಪಡೆದಿದೆ.

BIG NEWS : ಬೆಂಗಳೂರಿನಲ್ಲಿ ಅಲ್‍ಖೈದಾ ಲಿಂಕ್ ಹೊಂದಿರುವ ಶಂಕಿತ ಉಗ್ರನ ಸೆರೆ

ಪೂರ್ವ ತಯಾರಿ: ನಾಳೆ ಬೆಳಿಗ್ಗೆ 8.30ರ ಬಳಿಕ ಗಡಾಯಿ ಕಲ್ಲನ್ನು ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಡೆಯಿಂದ ಏರಲಿರುವ ಜ್ಯೋತಿರಾಜ್ ಸಾಹಸಕ್ಕೆ ತಂಡ ಮಾರ್ಕಿಂಗ್, ಪರಿಸರ ವೀಕ್ಷಣೆ ಮೊದಲಾದ ಪೂರ್ವ ತಯಾರಿ ನಡೆಸಿದೆ. ಕಾನೂನಿನ ಚೌಕಟ್ಟಿನೊಳಗೆ ಉತ್ತರಾಭಿಮುಖವಾಗಿ ಕೈಗಳ ಸಹಾಯದಿಂದ ಗಡಾಯಿಕಲ್ಲು ಏರಲಿರುವ ಜ್ಯೋತಿರಾಜ್ ಸುರಕ್ಷತೆಯ ದೃಷ್ಟಿಯಿಂದ ಸೊಂಟಕ್ಕೆ ರೋಪ್ ಅಳವಡಿಸಿಕೊಂಡು ಸಾಹಸ ನಡೆಸಲಿದ್ದಾರೆ.

ಬೆಟ್ಟ, ಗುಡ್ಡ, ಕಟ್ಟಡ, ಪರ್ವತ ಏರುವ ಜತೆ ಅಪಾಯಕಾರಿ ಸ್ಥಳಗಳಲ್ಲಿರುವ ಶವಗಳನ್ನು ಮೇಲೆತ್ತುವ ಹಾಗೂ ಇನ್ನಿತರ ಸಾಹಸ ಕಾರ್ಯ ಮಾಡುವ ಜ್ಯೋತಿ ರಾಜ್‍ಗೆ ವಿದ್ಯಾಭ್ಯಾಸದಿಂದ ವಂಚಿತರಾಗುವ ಮಕ್ಕಳಿಗೆ ಸಹಕಾರ ನೀಡುವ ಸಲುವಾಗಿ ಫೌಂಡೇಷನ್ ಒಂದನ್ನು ಸ್ಥಾಪಿಸುವ ಉದ್ದೇಶವಿದೆ. ತನ್ನ ಸಾಹಸಮಯ ಕೆಲಸಗಳಿಂದ ಬರುವ ಆದಾಯವನ್ನು ಫೌಂಡೇಷನ್ ಸ್ಥಾಪನೆಗೆ ಮೀಸಲಿರಿಸುವುದಾಗಿ ತಿಳಿಸಿದ್ದಾರೆ.

ಸುಸಜ್ಜಿತ ಜಿಮ್ ಒಂದನ್ನು ಸ್ಥಾಪಿಸುವ ಕುರಿತು ತಿಳಿಸಿದ್ದಾರೆ. ಜೋಗ್ ಜಲಪಾತ ಪರಿಸರದಲ್ಲಿ ಜಾರಿ ಬಿದ್ದು ಗಾಯಗೊಂಡು ಚಿಕಿತ್ಸೆಗೆ ಒಳಗಾದ ಕಾರಣದಿಂದ ಕೂಡಿಟ್ಟ ದುಡ್ಡೆಲ್ಲ ವ್ಯಯವಾಗಿದೆ. ಒಟ್ಟು 13 ಜನ ಶಿಷ್ಯರನ್ನು ಹೊಂದಿದ್ದು ಅವರು ಹಲವು ಸಾಹಸಗಳಲ್ಲಿ ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಜನರು ಹೃದಯವಂತರಾಗಿದ್ದು, ಸಹಕಾರದ ಧ್ಯೇಯ ಹೊಂದಿದ್ದಾರೆ. ಜಿಲ್ಲೆಯ ಇತರ ಕಡೆ ಇರುವ ಪರ್ವತ, ಎತ್ತರದ ಕಟ್ಟಡಗಳನ್ನು ಏರಲು ಅನುಮತಿ ನೀಡಿದರೆ ತಮ್ಮ ಸಾಹಸವನ್ನು ಅಲ್ಲಿಯೂ ತೋರುವುದಾಗಿ ತಿಳಿಸಿದ್ದಾರೆ.

500 ಹೊಸ ವಿಮಾನ ಖರೀದಿಸಲು ಮುಂದಾದ ಏರ್ ಇಂಡಿಯಾ

ಜ್ಯೋತಿರಾಜ್ ತಮಿಳುನಾಡು ಮಧುರೆ ಜಿಲ್ಲೆಯ ತೇನಿ ಗ್ರಾಮದ ಜ್ಯೋತಿರಾಜ್ ಸಣ್ಣವರಿರುವಾಗಲೇ ತಮ್ಮ ಪೋಷಕರಿಂದ ಬೇರ್ಪಟ್ಟು ಕರ್ನಾಟಕದ ಬಾಗಲಕೋಟೆಯ ದಂಪತಿಯ ಆಶ್ರಯದಲ್ಲಿ ಬೆಳೆದಿದ್ದರು. ಈ ದಂಪತಿ ಚಿತ್ರದುರ್ಗದಲ್ಲಿ ನೆಲೆ ನಿಂತಿದ್ದರು.

ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಜ್ಯೋತಿರಾಜ್ ಚಿತ್ರದುರ್ಗದ ಬಂಡೆಗಲ್ಲುಗಳನ್ನು ಕುತೂಹಲದಿಂದ ಹತ್ತಲು ಕಲಿತರು. ಕೋತಿಗಳು ಯಾವುದೇ ಸುರಕ್ಷತಾ ಸಹಾಯವಿಲ್ಲದೆ ಮರದಿಂದ ಮರಕ್ಕೆ, ಬಂಡೆಯಿಂದ ಬಂಡೆಗೆ ಹೇಗೆ ಹಾರುತ್ತವೆ ಎಂಬುದನ್ನು ಗಮನಿಸಿ ತಾವು ಅದೇ ರೀತಿ ಯಾವುದೇ ಗುರುವಿನ ಸಹಕಾರವಿಲ್ಲದೆ ಬಂಡೆಗಲ್ಲುಗಳನ್ನು ಏರುವ ಸಾಹಸಗಳನ್ನು ಮೈಗೂಡಿಸಿಕೊಂಡರು.

ಇವರ ಈ ಸಾಹಸ ಚಿತ್ರದುರ್ಗ ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರ ಗಮನವನ್ನು ಸೆಳೆದು ವಿಶ್ವವಿಖ್ಯಾತರಾದರು. ಇವರ ಸಾಹಸ ಕುರಿತ ಕಥೆ, ಡಾಕ್ಯುಮೆಂಟರಿ ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲೂ ಸುದ್ದಿ ಮಾಡಿವೆ.ಪ್ರಸ್ತುತ 35ರ ಹರೆಯದ ಜ್ಯೋತಿರಾಜ್ ಅವಿವಾಹಿತರಾಗಿದ್ದು ಚಿತ್ರದುರ್ಗದಲ್ಲಿ ನೆಲೆಯೂರಿದ್ದಾರೆ.

ಧರ್ಮಸ್ಥಳದ ಧರ್ಮಾಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಆಶೀರ್ವಾದ ಪಡೆದು ನಾಳೆ ಗಡಾಯಿ ಕಲ್ಲು ಏರಲಿದ್ದೇನೆ. ಶಾಸಕ ಹರೀಶ್ ಪೂಂಜ, ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಅಧಿಕಾರಿಗಳ ಸಹಕಾರದಿಂದ ಗಡಾಯಿಕಲ್ಲು ಏರುವ ಬಹುದಿನದ ಕನಸಿಗೆ ಈಗ ಅವಕಾಶ ದೊರಕಿದೆ. ಸಹಾಯಕರ ಸಹಕಾರದಿಂದ ಗಡಾಯಿಕಲ್ಲು ಏರಲು ಬೇಕಾದ ಪೂರ್ವಭಾವಿ ತಯಾರಿಗಳು ಬಹುತೇಕ ಪೂರ್ಣಗೊಂಡಿವೆ.
-ಜ್ಯೋತಿರಾಜ್

Jyothiraj, attempt, climbing, Gadaikallu hill, Sunday,

Articles You Might Like

Share This Article