ಜ್ಯೋತಿರಾತ್ಯ ಸಿಂಧಿಯಾ ಘರ್ ವಾಪ್ಸಿ ಸಾಧ್ಯತೆ

Social Share

ಶಿಮ್ಲಾ, ನ.25- ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡು ಕೇಂದ್ರ ಸಚಿವರಾಗಿರುವ ಜ್ಯೋತಿರಾತ್ಯ ಸಿಂಧಿಯಾ ಅವರು ಮತ್ತೆ ಘರ್ ವಾಪ್ಸಿ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ. ರಾಹುಲ್‍ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಮಧ್ಯ ಪ್ರದೇಶ ಪ್ರವೇಶಿಸಿರುವುದನ್ನು ಇತ್ತಿಚೆಗೆ ಸಿಂಧಿಯಾ ಸ್ವಾಗತಿಸಿದ್ದರು.

ಈ ಬೆಳವಣಿಗೆ ಬೆನ್ನಲ್ಲೆ ಅವರು ಮತ್ತೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ ಎಂದು ಬಿಂಬಿಸಲಾಗುತ್ತಿದೆ. ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಸ್ವಾಗತ ಹೇಳಿಕೆಯು ಅವರ ಮನೆಗೆ ಮರಳುವ ಸೂಚನೆಯಾಗಿರಬಹುದು ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ವಕ್ತಾರರು ಅಭಿಪ್ರಾಯಪಟ್ಟಿದ್ದಾರೆ.

ಮತದಾರರಿಗೆ ತೀರ್ಥಯಾತ್ರೆ, ಪ್ರವಾಸ, ಭರ್ಜರಿ ಉಡುಗೊರೆಗಳ ಭಾಗ್ಯ

ಕಳೆದ 2020ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಸಿಂಧಿಯಾ ಅವರಿಗೆ ಕೆಸರಿ ಪಕ್ಷದ ಸಹವಾಸ ಸಾಕಾಗಿಹೋಗಿರುವುದರಿಂದ ಅವರು ಮತ್ತೆ ಕಾಂಗ್ರೆಸ್ ಮರಳುವ ಸಾಧ್ಯತೆಗಳಿವೆ ಎಂದು ಎಐಸಿಸಿ ವಕ್ತಾರ ಕುಲದೀಪ್ ಸಿಂಗ್ ರಾಥೋಡ್ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಬಗ್ಗೆ ಜನರು ಅಸಮಾಧಾನಗೊಂಡಿರುವುದರಿಂದ ಗುಡ್ಡಗಾಡು ರಾಜ್ಯ ಹಿಮಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಇದುವರೆಗೆ ಅತಿ ಹೆಚ್ಚು ಮತದಾನವಾಗಿದ್ದು ಬದಲಾವಣೆಯ ಸ್ಪಷ್ಟ ಸೂಚನೆಯಾಗಿದೆ ಎಂದು ಪ್ರತಿಪಾದಿಸಿದ ಅವರು, ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಕಾವೇರಿ ನದಿ ನೀರು ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ : ಕಾಂಗ್ರೆಸ್ ಆರೋಪ

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ ನೂತನ ಮುಖ್ಯಮಂತ್ರಿಯನ್ನು ಶಾಸಕರು ಮತ್ತು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಅವರು ಹೇಳಿದರು.

ಬಿಜೆಪಿಯವರು ಶಾಸಕರನ್ನು ಕುದುರೆ ವ್ಯಾಪಾರ ಮಾಡುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಆದರೂ ನಮ್ಮ ಶಾಸಕರು ಒಗ್ಗಟ್ಟು ಕಾಪಾಡಿಕೊಳ್ಳುವುದರ ಜೊತೆಗೆ ಪಕ್ಷ ತೊರೆಯುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Jyotiraditya Scindia, Congress, Reads, Homecoming, Soon,

Articles You Might Like

Share This Article