ಬೆಂಗಳೂರು, ಜ.9- ಅಶ್ಲೀಲ ವಿಡಿಯೋ ಇದೆ ಎಂದು ಸಚಿವರೊಬ್ಬರ ಪುತ್ರನಿಗೆ ಬ್ಲಾಕ್‍ಮೇಲ್ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಸಿದಂತೆ ಖ್ಯಾತ ಜ್ಯೋತಿಷಿ ಪುತ್ರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಸಚಿವ ಎಸ್.ಟಿ.ಸೋಮಶೇಖರ್ ಅವರ ಪುತ್ರ ನಿಶಾಂತ್ ಅವರಿಗೆ ಅಶ್ಲೀಲ ವಿಡಿಯೋ ಇದೆ ಎಂದು ನಕಲಿ ವಿಡಿಯೋ ಮಾಡಿ ಬ್ಲಾಕ್‍ಮೇಲ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರ್‍ಟಿ ನಗರದ ಪ್ರಸಿದ್ಧ ಜ್ಯೋತಿಷಿಯೊಬ್ಬರ ಪುತ್ರ ರಾಹುಲ್‍ಭಟ್‍ನನ್ನು ಬಂಧಿಸಿದ್ದಾರೆ.
ಆರೋಪಿ ರಾಹುಲ್‍ಭಟ್‍ನನ್ನು ಬಂಧಿಸಲಾಗಿದೆ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರಮಣ್‍ಗುಪ್ತ ಈ ಸಂಜೆಗೆ ತಿಳಿಸಿದ್ದಾರೆ.ಯಾರೋ ಅಪರಿಚಿತರು ಸಂಚು ರೂಪಿಸಿ ನಕಲಿ ಅಶ್ಲೀಲ ವಿಡಿಯೋ ಸೃಷ್ಟಿಸಿ ನಮ್ಮ ತಂದೆಯವರ ಆಪ್ತ ಸಹಾಯಕರಾದ ಶ್ರೀನಿವಾಸಗೌಡ, ಭಾನು ಪ್ರಕಾಶ್ ಅವರ ಮೊಬೈಲ್ ನಂಬರ್‍ಗಳಿಗೆ ಪದೇ ಪದೇ ಮೆಸೇಜ್ ಕಳುಹಿಸಿ ಹಣದ ಬೇಡಿಕೆ ಇಟ್ಟಿದ್ದರು.
ಹಣ ಕೊಡದಿದ್ದರೆ ಈ ಅಶ್ಲೀಲ ವಿಡಿಯೋದಲ್ಲಿರುವ ದೃಶ್ಯಾವಳಿಗಳು ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಹರಿಬಿಟ್ಟು ನನ್ನ ಹಾಗೂ ನನ್ನ ತಂದೆಯವರ ತೇಜೋವಧೆ ಮಾಡುವುದಾಗಿ ಬ್ಲಾಕ್‍ಮೇಲ್ ಮಾಡಿದ್ದರು ಎಂದು ಸಚಿವರ ಪುತ್ರ ನಿಶಾಂತ್ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದು, ನಕಲಿ ವಿಡಿಯೋ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು.
ಈ ದೂರು ಆಧರಿಸಿ ಎಫ್‍ಐಆರ್ ದಾಖಲಿಸಿದ್ದ ಸಿಸಿಬಿ ಅಕಾರಿಗಳು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ.
