ಕೆ.ಆರ್.ಪುರಂ-ವೈಟ್‍ಫೀಲ್ಡ್ ಮೆಟ್ರೋ ರೈಲು ಸಂಚಾರಕ್ಕೆ ದಿನಗಣನೆ ಆರಂಭ

Social Share

ಬೆಂಗಳೂರು,ಫೆ.22- ಕೆ.ಆರ್.ಪುರಂ -ವೈಟ್‍ಫೀಲ್ಡ್ ನಡುವಿನ ಮೆಟ್ರೋ ರೈಲು ಸಂಚಾರಕ್ಕೆ ಕೌಂಟ್‍ಡೌನ್ ಶುರುವಾಗಿದೆ. ಈ ಭಾಗದ ಜನರ ಬಹುನಿರೀಕ್ಷಿತ ಮೆಟ್ರೋ ರೈಲು ಸಂಚಾರಕ್ಕೆ ದಿನಗಣನೆ ಆರಂಭವಾಗಿದ್ದು, ಇಂದಿನಿಂದ ಟ್ರಯಲ್ ರನ್ ನಡೆಯಲಿದೆ.

ರೈಲ್ವೇ ಸೇಫ್ಟಿ ಆಯುಕ್ತರು ಇಂದು ಕೆ.ಆರ್.ಪುರಂ ಹಾಗೂ ವೈಟ್‍ಫೀಲ್ಡ್ ನಡುವಿನ ಮೆಟ್ರೋ ರೈಲು ಸಂಚಾರದ ಮಾರ್ಗವನ್ನು ಪರಿಶೀಲಿಸಲಿದ್ದಾರೆ. ಇದೆ ಸಂದರ್ಭದಲ್ಲಿ ಅವರ ಸಮ್ಮುಖದಲ್ಲೇ ಈ ಭಾಗದ ಮೆಟ್ರೋ ರೈಲು ಸಂಚಾರದ ಟ್ರಯಲ್ ರನ್ ನಡೆಯಲಿದೆ.

2024ರ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ವಿವೇಕ್ ರಾಮಸ್ವಾಮಿ ಬಿಡ್

ಸಿಗ್ನಲಿಂಗ್, ಟ್ರ್ಯಾಕ್, ರೈಲಿನ ಸಂಚಾರ, ನಿಲ್ದಾಣಗಳ ಮೇಂಟೆನೆನ್ಸ ಸೇರಿದಂತೆ ಹಲವಾರು ಮಾದರಿಯ ಸುರಕ್ಷಿತೆ ಮತ್ತು ವ್ಯವಸ್ಥೆ ಬಗ್ಗೆ ಮೂರು ದಿನಗಳ ಕಾಲ ಹೊಸ ಮಾರ್ಗದ ಪರಿಶೀಲನೆ ನಡೆಸಲಿರೋ ಸೇಫ್ಟಿ ಕಮಿಷನರ್ ಅವರು ಒಂದು ವಾರದ ಬಳಿಕ ಸಂಪೂರ್ಣ ರಿಫೋರ್ಟ್ ಸಲ್ಲಿಕೆ ಮಾಡಲಿದ್ದಾರೆ.

ಅವರು ನೀಡುವ ವರದಿಯಲ್ಲಿ ಯಾವುದೇ ಲೋಪ ದೋಷಗಳು ಕಂಡು ಬಾರದಿದ್ದರೆ ಮೆಟ್ರೋ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ದೊರೆಯಲಿದೆ. ರೈಲ್ವೇ ಸೇಫ್ಟಿ ಆಯುಕ್ತರ ವರದಿ ಆಧಾರದಲ್ಲಿ ರಾಜ್ಯ ಸರ್ಕಾರ ಕೆ.ಆರ್.ಪುರಂ-ವೈಟ್‍ಫೀಲ್ಡ್ ನಡುವಿನ ಮೆಟ್ರೋ ರೈಲು ಸಂಚಾರಕ್ಕೆ ದಿನಾಂಕ ನಿಗದಿ ಮಾಡಲಿದೆ.

K.R. Puram, Whitefield, metro, Trial run,

Articles You Might Like

Share This Article