ಬೆಂಗಳೂರು,ಮಾ.14- ಆರ್ ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ಕಬ್ಜಾ ಇದೇ ಶುಕ್ರವಾರ ದೇಶಾದ್ಯಂತ ಏಳು ಭಾಶೆಗಳಲ್ಲಿ ಬಿಡುಗಡೆಯಾಗುತ್ತಿದೆ. ಮೊದಲಿನಿಂದಲೂ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ ಈ ಚಿತ್ರದಲ್ಲಿ, ಸ್ಯಾಂಡಲ್ ವುಡ್ ಮೋಸ್ಟ ಪಾಪ್ಯುಲರ್ ಐಕಾನ್ಗಳಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ತ್ರಿಮೂರ್ತಿಗಳ ಅಮೋಘ ಅಭಿನಯ ಮೇಳಯಿಸಿದೆ.
ಸಿನಿಮಾ ಸೆಟ್ಟಿರಿದಾಗಿನಿಂದಲೂ ನಿರ್ದೇಶಕ ಆರ್ ಚಂದ್ರು ವಿಭಿನ್ನ ಶೈಲಿಯ ಪ್ರಚಾರದಲ್ಲಿ ತೊಡಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರೇಕ್ಷಕರಿಗೆ ಸಿನಿಮಾದ ಬಗ್ಗೆ ಪರಿಚಯಿಸಿದ್ದಾರೆ. ಪ್ರತಿದಿನವೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ಈ ಚಿತ್ರ ಇಂದು ಲುಲು ಮಾಲ್ ನಲ್ಲಿ ಪತ್ರಿಕಾಗೋಷ್ಠಿಯನ್ನ ಆಯೋಜಿಸಲಾಗಿತ್ತು.
1.21 ಕೋಟಿ ಮೌಲ್ಯದ ಚಿನ್ನದಗಟ್ಟಿ ದರೋಡೆ : ರೈಲ್ವೆ ಪೊಲೀಸರ ಮೇಲೆ ಶಂಕೆ
ನಟಿ ಶ್ರೇಯ ಮಾತನಾಡುತ್ತ ನಾನು ಬೆಂಗಳೂರನ್ನ ಇಷ್ಟ ಪಡುತ್ತೇನೆ,ನಾನು ಸಿನಿಮಾ ಕಥೆ ಕೇಳದಾಗ ಇಷ್ಟವಾಯ್ತು,ನಿರ್ದೇಶಕ ಆರ್ ಚಂದ್ರು ತುಂಬ ಸೊಗಸಾಗಿ ಕಟ್ಟಿದ್ದಾರೆ.ಕ್ಯಾಮರಾ ವರ್ಕ್ ಅದ್ಭುತವಾಗಿದೆ ಪ್ರಪಂಚದಾದ್ಯಂತ ಏಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.ಎಲ್ಲರೂ ನೋಡಿ ಎಂಜಾಯ್ ಮಾಡಿ ಎಂದರು.
ಈ ಚಿತ್ರದಲ್ಲಿ ಚುಮ್ ಚುಮ್ ಚಳಿ ಹಾಡು ನನಗೆ ಸಿಕ್ಕಿದ್ದು ನನಗೆ ಅದೃಷ್ ಎಂದರು ಮತ್ತೊಬ್ಬ ನಾಯಕ ನಟಿ ತಾನ್ನ ಇದೇ ಸಂದಭದಲ್ಲಿ ಉಪಸ್ಥಿತಿರಿದ್ದ ಡಿ.ಕೆ ಶಿವಕುಮಾರ್ ಪುತ್ರಿ ಕಬ್ಜ ಚಿತ್ರ ಯಶಸ್ವಿಯಾಗಲಿ ಎಂದರು.
Kabzaa, movie, dk shivakumar, daughter,