ಕಡಲೆಕಾಯಿ ಪರಿಷೆಯಲ್ಲಿ ಬಡವರ ಬಾದಾಮಿ ಸವಿದ ಬೆಂಗಳೂರಿಗರು

Social Share

ಬೆಂಗಳೂರು, ನ.13- ಮಲ್ಲೇಶ್ವರಂನ ಕಾಡುಮಲ್ಲೇಶ್ವರ ಮಲ್ಲಿಕಾರ್ಜುನ ಸ್ವಾಮಿ ಸನ್ನಿಧಾನದಲ್ಲಿ ನಡೆಯುತ್ತಿರುವ ಕಡಲೆಕಾಯಿ ಪರಿಷೆಗೆ ರಜಾದಿನವಾದ ಇಂದು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಚಳಿಗೆ ಬಡವರ ಬಾದಾಮಿ ಸವಿದು ಸಂಭ್ರಮಿಸಿದರು.

ಬಸವನಗುಡಿಯ ಮಾದರಿಯಲ್ಲೇ ಇಲ್ಲೂ ಕೂಡ ಕಡಲೆಕಾಯಿ ಪರಿಷೆ ನಡೆಯುತ್ತಿದೆ. ತುಮಕೂರು, ಕೋಲಾರ, ಬೆಂಗಳೂರು ಗ್ರಾಮಾಂತರ, ತಮಿಳು ನಾಡು, ಆಂಧ್ರ ಪ್ರದೇಶದಿಂದ ಈ ಬಾರಿ ರೈತರು ಕಡಲೆಕಾಯಿ ಮಾರಾಟಕ್ಕೆ ಬಂದಿದ್ದು, ಹಸಿ, ಒಣ ಹಾಗೂ ಉರಿದ ಕಡಲೆಕಾಯಿ ಮಾರಾಟ ಜೋರಾಗಿತ್ತು. ಜತೆಗೆ ಮಕ್ಕಳ ಆಟಿಕೆ, ಕರಕುಶಲ ವಸ್ತುಗಳ ಮಾರಾಟವೂ ಕೂಡ ಜನರನ್ನು ಆಕರ್ಷಿಸುತ್ತಿದೆ.

ನಮ್ಮ ಸಂಸ್ಕøತಿ, ಸಂಪ್ರದಾಯವನ್ನು ಇಂದಿನ ಯುವಕರಿಗೆ ತಿಳಿಸಿ ಉಳಿಸಿ ಬೆಳೆಸುವ ಸಲುವಾಗಿ ಪ್ರತಿ ವರ್ಷ ಪರಿಷೆ ಮಾಡಿಕೊಂಡು ಬರಲಾಗುತ್ತಿದೆ. ಕೊರೊನಾದಿಂದ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಪರಿಷೆಗೆ ಈ ಬಾರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಗರದ ವಿವಿಧ ಭಾಗಗಳಿಂದ ಜನರು ಆಗಮಿಸಿ ಪರಿಷೆಯ ಸೊಗಡನ್ನು ಸವಿದರು.

ಟಿಪ್ಪು ಪ್ರತಿಮೆ ನಿರ್ಮಿಸಿದರೆ ಜನ ಕಾಂಗ್ರೆಸಿಗರನ್ನು ಮನೆಗೆ ಕಳಿಸುತ್ತಾರೆ : ಜೋಷಿ

ಇನ್ನು ಚುಮು ಚುಮು ಚಳಿಗೆ ಉರಿದ ಕಡಲೆಕಾಯಿಯನ್ನು ಕೊಂಡು ತಿನ್ನುತ್ತಾ ಹೆಜ್ಜೆ ಹಾಕಿ ಜಾತ್ರೆ ವೀಕ್ಷಿಸಿ ವೀಕೆಂಡ್ ಎಂಜಾಯ್ ಮಾಡಿದರು. ನಾಳೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಲ್ಲೇಶ್ವರ ಸ್ವಾಮಿಗೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದ್ದು , ಜಾನಪದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Articles You Might Like

Share This Article