ಐತಿಹಾಸಿಕ ಕಡಲೆ ಕಾಯಿ ಪರೀಷೆಗೆ ದಿನಗಣನೆ

Social Share

ಬೆಂಗಳೂರು,ನ.11- ಐತಿಹಾಸಿಕ ಕಡಲೆ ಕಾಯಿ ಪರೀಷೆಗೆ ಸಕಲ ಸಿದ್ದತೆಗಳು ಆರಂಭಗೊಂಡಿವೆ.
ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಸಾಧಾರಣವಾಗಿ ನಡೆಸಲಾಗಿದ್ದ ಕಡಲೆ ಕಾಯಿ ಪರೀಷೆಯನ್ನು ಈ ಬಾರಿ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ.

ಕಡೆಯ ಕಾರ್ತಿಕ ಸೋಮವಾರವಾದ ನ.21 ರಂದು ನಡೆಯಲಿರುವ ಪರೀಷೆ ಅಂಗವಾಗಿ ಈ ಬಾರಿ ಕೆಂಪಾಬು ಕೆರೆಯಲ್ಲಿ ತೆಪ್ಪೋತ್ಸವ ನಡೆಸಲಾಗುತ್ತಿದೆ. ಇದರ ಜೊತೆಗೆ ಸಂಗೀತ, ನೃತ್ಯ ಮತ್ತಿತರ ಸಾಂಸ್ಕøತಿಕ ಕಾರ್ಯಕಗಳು ನಡೆಯಲಿವೆ.

ಕಡೆ ಕಾರ್ತಿಕ ಸೋಮವಾರಕ್ಕೂ ನಾಲ್ಕು ದಿನಗಳ ಮೊದಲೆ ಪರೀಷೆ ಆರಂಭವಾಗಲಿದೆ. ಶುಕ್ರವಾರ ಸಂಜೆಯೇ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಆಗಮಿಸುವ ವ್ಯಾಪಾರಿಗಳು ತಾವು ಬೆಳೆದ ಕಡಲೆ ಕಾಯಿಯನ್ನು ಬೀದಿ ಬದಿಯಲ್ಲಿ ರಾಶಿ ಹಾಕಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಾರೆ.

ಮಾಗಡಿ, ರಾಮನಗರ, ಕನಕಪುರ, ದೊಡ್ಡಬಳ್ಳಾಪುರ ಹಾಗೂ ತಮಿಳುನಾಡಿನಲ್ಲಿ ಈ ಬಾರಿ ಭರ್ಜರಿ ಕಡಲೆಕಾಯಿ ಬೆಳೆದಿರುವುದರಿಂದ ಪರೀಷೆಯಲ್ಲಿ ವಿವಿಧ ನಮೂನೆಯ ಕಡಲೆ ಕಾಯಿ ಸಿಗಲಿದೆ. ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಪರೀಷೆ ಈ ಬಾರಿ ಕಳೆಕಟ್ಟಲಿದ್ದು, 6 ಲಕ್ಷಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.

ಪರೀಷೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಸುವುದು ಹಾಗೂ ಪರಿಸರ ಸ್ನೇಹಿ ಬ್ಯಾಗ್ ಬಳಕೆ ಮಾಡುವುದು ಸೇರಿದಂತೆ ಐತಿಹಾಸಿಕ ಕಡಲೆ ಕಾಯಿ ಪರೀಷೆಯನ್ನು ಯಶಸ್ವಿಗೊಳಿಸುವ ಕುರಿತಂತೆ ಇಂದು ಶಾಸಕ ರವಿಸುಬ್ರಮಣ್ಯ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.

Articles You Might Like

Share This Article