ನಟಿ ಕಾಜೋಲ್‍ಗೆ ಕೋವಿಡ್ ಪಾಸಿಟಿವ್

Social Share

ಮುಂಬೈ, ಜ.30-ತಮಗೆ ಕೋವಿಡ್-19 ಪಾಸಿಟಿವ್ ಬಂದಿದೆ ಎಂದು ನಟಿ ಕಾಜೋಲ್ ಇಂದು ತಿಳಿಸಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ತನ್ನ ಮತ್ತು ತಮ್ಮ ಪುತ್ರಿಯ ಚಿತ್ರವನ್ನು ಷೇರ್ ಮಾಡಿಕೊಂಡಿರುವ 47 ವರ್ಷ ವಯಸ್ಸಿನ ನಟಿ ಕಾಜೋಲ್ ಶೀತದಿಂದಾಗಿ ಕಾಲ್ಪನಿಕ ರುಡಾಲ್ ಜಿಂಕೆಯ ಮೂಗಿನಂತೆ ಕೆಂಪಾಗಿರುವ ತಮ್ಮ ಮೂಗನ್ನು ಇತರರಿಗೆ ತೋರಿಸಲು ತೀವ್ರ ಮುಜುಗರವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಕಾಜೋಲ್ 2021ರಲ್ಲಿ ನೆಟ್‍ಫ್ಲಿಕ್ಸ್ ಕೌಟುಂಬಿಕ ಕಥಾಚಿತ್ರ ತ್ರಿಭಂಗಾದಲ್ಲಿ ಕೊನೆಯ ಬಾರಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು.

Articles You Might Like

Share This Article