ಕಲಬುರಗಿಯಲ್ಲಿ ಅಪ್ರಾಪ್ತೆ ರೇಪ್-ಮರ್ಡರ್ ಕೇಸ್, ಅಪ್ತಾಪ್ತ ಅರೆಸ್ಟ್

Social Share

ಕಲಬುರಗಿ,ಅ.3- ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು 24 ಗಂಟೆಗಳಲ್ಲೇ ಪ್ರಕರಣ ಭೇದಿಸುವಲ್ಲಿ ಪೂಲೀಸರು ಯಶಸ್ವಿಯಾಗಿದ್ದಾರೆ.ಆಳಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ನಡೆದಿದ್ದ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಭಾರಿ ಆತಂಕ ಮೂಡಿಸಿತ್ತು ,ಘಟನೆಯಲ್ಲಿ ಬಂಧಿಯಾಗಿರುವ ಆರೋಪಿ ಕೂಡ ಅಪ್ತಾಪ್ತನಾಗಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಷಾ ಪಂತ್ ತಿಳಿಸಿದ್ದಾರೆ

ಆರೋಪಿಯ ಮೊಬೈಲ್‍ನಲ್ಲಿ ನಿರಂತರವಾಗಿ ಅಶ್ಲೀಲ ವೀಡಿಯೋ ನೋಡುವ ಗೀಳು,ಅಪ್ರಾಪ್ತೆಯ ಮೇಲೆ ಲೈಂಗಿಕ ಕಿರುಕುಳ ನೀಡುವ ಹಂತಕ್ಕೆ ತೆಗೆದುಕೊಂಡು ಹೋಗಿದೆ. ನಂತರ ಮಾನ ಹೋಗುತ್ತದೆ ಎಂದು ಬಾಲಕಿಯ ಕೊಲೆ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಅದೇ ಗ್ರಾಮದವನಾದ ಆರೋಪಿ ಬಾಲಕ,ಮಂಗಳವಾರ ಸಂಜೆ ಬಾಲಕಿ ಒಬ್ಬಳೆ ಬಹಿರ್ದೆಸೆಗೆ ಹೋಗುವಾಗ ಸಮೀಪದ ಗುಡಿಯ ಕಟ್ಟೆಯ ಮೇಲೆ ಕುಳಿತಿದ್ದ.

ಆಗ ಅವಳನ್ನು ಹಿಂಬಾಲಿಸಿದ ಆರೋಪಿ ಬಾಲಕಿಯನ್ನು ಎಳೆದುಕೊಂಡು ಕಬ್ಬಿನ ಹೊಲಕ್ಕೆ ಹೋಗಿ ಲೈಂಗಿಕ ದೌರ್ಜನ್ಯ ನಡೆಸಿ, ಬಾಲಕಿ ಅಳುವುದನ್ನು ನೋಡಿ ಹೌಹಾರಿ ಪಕ್ಕದಲ್ಲಿದ್ದ ಕಲ್ಲನ್ನು ತಲೆ ಮೇಲೆ ಎತ್ತಿ ಹಾಕಿ ಮಾರಣಾಂತಿಕವಾಗಿ ಗಾಯಗೊಳಿಸಿದ್ದಾನೆ.

ಇದು ಘನಘೋರ : ಸಕಾಲದಲ್ಲಿ ಚಿಕಿತ್ಸೆ ಸಿಗದೇ ತಾಯಿ ಮತ್ತು ಅವಳಿ ನವಜಾತ ಶಿಶುಗಳ ಸಾವು

ಇನ್ನೂ ಬಾಲಕಿ ಬದುಕಿದ್ದಾಳೆ ಎಂದು ತಿಳಿದ ಕಿರಾತಕ, ಬಾಲಕಿ ತೊಟ್ಟಿದ್ದ ಶಾಲನ್ನು ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಕೊಲೆ ನಂತರ ಹತ್ತಿರದ ನಾಲೆಗೆ ತೆರಳಿದ ಆರೋಪಿ ಕೈ, ಕಾಲು ತೊಳೆದುಕೊಂಡು ನಂತರ ಬೇರೆ ದಾರಿಯಿಂದ ಬಂದು ಊರು ಸೇರಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.

Articles You Might Like

Share This Article