BIG NEWS: ಕಳಸಾ-ಬಂಡೂರಿ ನಾಲಾ ಯೋಜನೆಯ ಕೇಂದ್ರ ಗ್ರೀನ್ ಸಿಗ್ನಲ್

Social Share

ಬೆಂಗಳೂರು, ಡಿ.29- ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಕಳಸಾ-ಬಂಡೂರಿ ನಾಲಾ ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರು ಇಂದು ಟ್ವಿಟ್ ಮಾಡಿದ್ದು, ಕಳಸಾ-ಬಂಡೂರಿ ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕಕ್ಕೆ ಅತ್ಯಂತ ಆವಶ್ಯಕವಾದ ಈ ಯೋಜನೆಗೆ ಅನುಮೋದನೆ ದೊರೆಯಲು ಸಹಕರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್, ರಚನಾತ್ಮಕ ಯೋಜನಾ ವರದಿ ನಿರೂಪಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಸುತ್ತೋಲೆಯನ್ನು ಸಚಿವರು ಟ್ವಿಟ್ ಮಾಡಿದ್ದು, ಮಹಾರಾಷ್ಟ್ರ, ಕರ್ನಾಟಕ, ಗೋವಾ ರಾಜ್ಯಗಳನ್ನೊಳಗೊಂಡ ಮಹಾದಾಯಿ ನದಿಪಾತ್ರದಲ್ಲಿ 2032 ಚದರ ಅಡಿ ಅಚ್ಚುಕಟ್ಟು ಪ್ರದೇಶವಿದೆ. ಇದರಲ್ಲಿ ಗೋವಾ 1580, ಕರ್ನಾಟಕ 375, ಮಹಾರಾಷ್ಟ್ರ 77 ಚಕಿಮೀ ಪಾಲು ಹೊಂದಿವೆ. 2010ರ ನವೆಂಬರ್ 16ರಂದು ನದಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಕರಣ ರಚಿಸಲಾಗಿದ್ದು, 2018ರ ಆಗಸ್ಟ್ 14ರಂದು ವರದಿ ಸಲ್ಲಿಕೆಯಾಗಿದೆ. ಪರಿಸರ ಸಂರಕ್ಷಣೆ ಮತ್ತು ಇತರ ನಿಯಮಗಳನ್ನು ಪಾಲಿಸಿ ಮಹದಾಯಿಯಿಂದ 2.18ಟಿಎಂಸಿ ನೀರನ್ನು ಬಂಡೂರ ಮತ್ತು 1.7 ಟಿಎಂಸಿ ನೀರನ್ನು ಕಳಸಾ ಅಣೆಕಟ್ಟಿಗೆ ಹಂಚಿಕೆ ಮಾಡಲಾಗಿದೆ.

ಎರಡು ತಿಂಗಳಲ್ಲಿ ಹುಣಸೂರು ಆಸ್ಪತ್ರೆ ಉದ್ಘಾಟನೆ: ಸಚಿವ ಸುಧಾಕರ್

ಇದನ್ನು ಬಳಕೆ ಮಾಡಿಕೊಳ್ಳಲು ಕರ್ನಾಟಕ ಸರ್ಕಾರ ಹೊಸ ಯೋಜನೆಗಳನ್ನು ರೂಪಿಸಿಕೊಳ್ಳಬಹುದಾಗಿದೆ. ಕಳಸಾ ಬಂಡೂರಿ ಹುಬ್ಬಳ್ಳಿ-ಧಾರವಾಡ, ಗದಗ ಮತ್ತು ಬೆಳಗಾವಿಯ ಬಹುತೇಕ ಭಾಗಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವದ ಯೋಜನೆಯಾಗಿದೆ. ಇದಕ್ಕಾಗಿ ನವಲಗುಂದ ಮತ್ತು ನರಗುಂದ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಅನೇಕ ರೈತರು ವರ್ಷಗಟ್ಟಲೆ ನಿರಂತರ ಪ್ರತಿಭಟನೆ ನಡೆಸಿದರು. ರಾಜಕೀಯವಾಗಿಯೂ ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಅಂತಿಮವಾಗಿ ನ್ಯಾಯಾಕರಣ ತೀರ್ಪು ನೀಡಿ ನದಿನೀರಿನ ಹಂಚಿಕೆ ಸೂತ್ರವನ್ನು ಅಂತಿಮಗೊಳಿಸಿತ್ತು. ತೀರ್ಪು ಅಧಿಸೂಚನೆಯಾಗಿಯೂ ಜಾರಿಯಾಗಿದೆ. ಆ ಬಳಿಕ ಕಳಸಾ-ಬಂಡೂರಿ ಯೋಜನೆ ಜಾರಿಗೆ ಭಾರೀ ಒತ್ತಡಗಳು ಕೇಳಿಬಂದಿದ್ದವು. ಆದರೆ, ಯೋಜನೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿದ ಗೋವಾ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

BIG NEWS ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿ ಇಲ್ಲ: ಸಚಿವ ಮಾಧುಸ್ವಾಮಿ

ಮಹಾರಾಷ್ಟ್ರ, ಕರ್ನಾಟಕ ಸರ್ಕಾರಗಳು ಕೂಡ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿವೆ. ಇಂದು ಕೇಂದ್ರ ಜಲ ಆಯೋಗ ವಿಸ್ತೃತ ಯೋಜನಾ ವರದಿ (ಡಿಪಿಆರ್)ಗೆ ಅನುಮತಿ ನೀಡಿದ್ದು, ಇದು ಸುಪ್ರೀಂಕೋರ್ಟ್‍ನ ಅಂತಿಮ ತೀರ್ಪಿಗೆ ಬದ್ಧವಾಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

kalasa, banduri, nala project, Center government, approves, DPR,

Articles You Might Like

Share This Article