ಕಳಸ – ಬಂಡೂರಿ ತಡೆಗೆ ಸುಪ್ರೀಂ ಮೊರೆ ಹೋದ ಗೋವಾ

Social Share

ಬೆಂಗಳೂರು,ಜ.16- ಕಳಸಾ-ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಪರಿಷ್ಕೃತ ಡಿಪಿಆರ್‍ಗೆ ಕೇಂದ್ರ ಅನುಮೋದನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಯೋಜನೆ ತಡೆಯುವ ಸಲುವಾಗಿ ಗೋವಾ ಸರ್ಕಾರ ಸುಪ್ರೀಂಕೋರ್ಟ್ ಮೊರೆಹೋಗಿದೆ.

ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಯೋಜನೆಗೆ ಶೀಘ್ರವೇ ಟೆಂಡರ್ ಕರೆಯುವುದಾಗಿ ಮುಖ್ಯಮಂತ್ರಿಗಳು ಘೋಷಿಸಿರುವ ಹಿನ್ನೆಲೆಯಲ್ಲಿ, ಈ ಯೋಜನೆ ತಡೆಯಲು ಗೋವಾ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ.

ವನ್ಯಜೀವಿ (ರಕ್ಷಣೆ) ಕಾಯ್ದೆ 1972ರ ಸೆಕ್ಷನ್ 29ರ ಪ್ರಕಾರ ವನ್ಯಜೀವಿ ಅಭಯಾರಣ್ಯಗಳಲ್ಲಿ ನೀರು ಹರಿಸುವುದಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ ಎಂಬ ಕಾನೂನು ಆಧಾರದಲ್ಲಿ ಗೋವಾ ಸರ್ಕಾರ ಸುಪ್ರೀಂಕೋರ್ಟ್‍ನಲ್ಲಿ ವಾದ ಮಂಡಿಸಲು ನಿರ್ಧರಿಸಿದೆ.

ಸ್ಯಾಂಟ್ರೊ ರವಿ ಪ್ರಕರಣವನ್ನು ಸಿಐಡಿಗೆ ವಹಿಸಿ ಸರ್ಕಾರ ಆದೇಶ

ಮಹದಾಯಿ ಜಲಾನಯನ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಲು ಗೋವಾದ ಮುಖ್ಯ ವನ್ಯಜೀವಿ ವಾರ್ಡನ್ ಸೇರಿದಂತೆ ಎಲ್ಲಾ ಅಗತ್ಯ ಅನುಮೋದನೆಗಳು ಬೇಕಾಗುತ್ತದೆ ಎಂದು ಮಹದಾಯಿ ಜಲ ವಿವಾದ ನ್ಯಾಯಮಂಡಳಿ ಷರತ್ತು ವಿಧಿಸಿದೆ ಎಂದು ಗೋವಾ ಸರ್ಕಾರ ವಾದಿಸುತ್ತಿದೆ.

ಮಹದಾಯಿ ಜಲಾನಯನ ಪ್ರದೇಶದಿಂದ ಮಹದಾಯಿ ವನ್ಯಜೀವಿ ಅಭಯಾರಣ್ಯದ ಮೂಲಕ ನೀರು ಹರಿಸುವುದನ್ನು ಕೇಂದ್ರದ ಒಪ್ಪಿಗೆಯ ಮೂಲಕವಷ್ಟೇ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂಬುದು ಅದರ ವಾದವಾಗಿದೆ.

ಏನಿದು ಯೋಜನೆ ?
ಖಾನಾಪುರದ ಕಣಕುಂಬಿ ಬಳಿ ಮಹದಾಯಿ ನದಿಯಿಂದ ಎರಡು ಜಾಕ್‍ವೆಲ್‍ಗಳ ಮೂಲಕ ನೀರೆತ್ತಿ ನಾಲಾ ತಿರುವು ಮಾಡಿ ನೀರು ಹರಿಸುವ ಯೋಜನೆ ಇದಾಗಿದೆ. ಇದರಿಂದ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು, ಸುತ್ತಮುತ್ತಲ ಪಟ್ಟಣ, ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಕೆಯಾಗುತ್ತದೆ. ಮಹದಾಯಿ ನದಿ ನೀರು ವಿವಾದ ನ್ಯಾಯಾೀಧಿಕರಣ ತನ್ನ 2018ರ ಆಗಸ್ಟ್ 14ರ ತೀರ್ಪಿನಲ್ಲಿ ಈ ಉದ್ದೇಶಕ್ಕಾಗಿ 3.90 ಟಿಎಂಸಿ ನೀರು ಹಂಚಿಕೆ ಮಾಡಿತ್ತು.

ರಾಜ್ಯ ಸರಕಾರ ಸಲ್ಲಿಸಿದ್ದ 1,300 ಕೋಟಿ ಮೊತ್ತದ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ(ಡಿಪಿಆರ್) ಕೇಂದ್ರ ಜಲ ಆಯೋಗ ಹಾಗೂ ಅಂತಾರಾಜ್ಯ ನದಿನೀರು ವಿವಾದ ಪ್ರಾಕಾರದ ಅನುಮೋದನೆ ಈಗಾಗಲೇ ದೊರಕಿದೆ. ಈಗ ಕೇಂದ್ರ ಜಲಶಕ್ತಿ ಸಚಿವಾಲಯವೂ ಓಕೆ ಎಂದಿದೆ. ಅದರ ಸಮ್ಮತಿ ಪತ್ರ ಕೈಸೇರುತ್ತಿದ್ದಂತೆ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲು ರಾಜ್ಯ ಸರಕಾರ ಸಿದ್ಧತೆ ಮಾಡಿಕೊಂಡಿದೆ. ಈ ಉದ್ದೇಶಕ್ಕೆ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 1,000 ಕೋಟಿ ರೂ. ಮೀಸಲಿಡಲಾಗಿದೆ.

ಉತ್ತರ ಕರ್ನಾಟಕ ಭಾಗದ ಜನರ ಹಲವು ವರ್ಷಗಳ ಬೇಡಿಕೆಯಾದ ಈ ಯೋಜನೆಗೆ ಸಂಬಂಧಿಸಿದಂತೆ 2021-22ನೇ ಸಾಲಿನಲ್ಲಿ ಒಟ್ಟು 1,677 ಕೋಟಿ ರೂ. ಅಂದಾಜು ಮೊತ್ತದ ಯೋಜನಾ ವರದಿಗೆ ರಾಜ್ಯ ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು. 28 ಮೀಟರ್ ಅಣೆಕಟ್ಟೆ ನಿರ್ಮಾಣದಿಂದ ಹಾಗೂ ನಾಲೆಗಳ ನಿರ್ಮಾಣಕ್ಕಾಗಿ 429 ಹೆಕ್ಟೇರ್ ಅರಣ್ಯ ಭೂಮಿ ಅಗತ್ಯವನ್ನು ಅಂದಾಜು ಮಾಡಲಾಗಿತ್ತು.

ಸ್ಯಾಂಟ್ರೋ ರವಿ ಆಮಿಷಕ್ಕೆ ಒಳಗಾಗುವಂತ ಪ್ರಸಂಗ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ

ಆದರೆ ಈ ಯೋಜನಾ ವರದಿಗೆ ಅಗತ್ಯ ಅನುಮೋದನೆ ಪಡೆಯುವುದು ಕಷ್ಟ ಎಂಬ ಕಾರಣಕ್ಕೆ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಪರಿಷ್ಕರಿಸಲಾಯಿತು. ಪರಿಷ್ಕೃತ ಡಿಪಿಆರ್‍ನಲ್ಲಿ28 ಮೀಟರ್ ಎತ್ತರದ ಅಣೆಕಟ್ಟೆ ನಿರ್ಮಾಣದ ಬದಲಿಗೆ ಅದರ ಎತ್ತರವನ್ನು 11 ಮೀಟರ್‍ಗೆ ಇಳಿಸಲಾಯಿತು. ಒಂದರ ಬದಲಿಗೆ ಎರಡು ಜಾಕ್‍ವೆಲ್ ನಿರ್ಮಾಣದ ಮೂಲಕ ನೀರು ಪಂಪ್ ಮಾಡುವಂತೆ ಡಿಪಿಆರ್‍ನಲ್ಲಿ ಬದಲಾವಣೆ ಮಾಡಲಾಯಿತು.

ತಿರುವು ನಾಲೆ ಮೂಲಕ ನೀರು ಹರಿಸಲು ಅರಣ್ಯ ಭೂಮಿ ಸ್ವಾೀನ ಪಡಿಸಿಕೊಳ್ಳುವ ಪ್ರಸ್ತಾವನೆಯಲ್ಲಿ ಬದಲಾವಣೆ ಮಾಡಲಾಯಿತು. ಅಗತ್ಯವಿರುವ ಕಡೆಗಳಲ್ಲಿ ಮಾತ್ರವೇ ಕಾಲುವೆ ನಿರ್ಮಿಸಿ, ಉಳಿದ ಕಡೆ ಹೆದ್ದಾರಿ ಅಂಚಿನಲ್ಲಿ ಬೃಹತ್ ಪೈಪ್‍ಗಳ ಮೂಲಕ ನೀರು ಕೊಂಡೊಯ್ಯುವ ಪ್ರಸ್ತಾಪವನ್ನು ಪರಿಷ್ಕೃತ ಡಿಪಿಆರ್‍ನಲ್ಲಿ ಸೇರಿಸಲಾಯಿತು.

ಪರಿಷ್ಕೃತ ಡಿಪಿಆರ್‍ನಲ್ಲಿ ಯೋಜನೆಗೆ ಅಗತ್ಯವಾದ ಅರಣ್ಯ ಭೂಮಿಯು 426 ಹೆಕ್ಟೇರ್‍ನಿಂದ ಕೇವಲ 59 ಹೆಕ್ಟೇರ್‍ಗೆ ಕುಗ್ಗಿತು. ನಾಲೆ ನಿರ್ಮಾಣಕ್ಕೂ ಹೆಚ್ಚು ಭೂಸ್ವಾೀಧಿನದ ಅಗತ್ಯ ಉದ್ಭವಿಸಲಿಲ್ಲ. ಹಾಗಾಗಿ ಪರಿಸರ ಸಚಿವಾಲಯದ ಅನುಮೋದನೆಗೆ ತೊಡಕಾಗಲಿಲ್ಲ.

ಮುಖ್ಯವಾಗಿ ಕುಡಿಯುವ ನೀರಿನ ಯೋಜನೆಯಾದ ಕಾರಣ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಗೆ ಪರಿಸರ ಪರಿಣಾಮಗಳ ಅಧ್ಯಯನ ಸಂಬಂಧದ 2006ರ ಅಸೂಚನೆಯೂ ಅಡ್ಡಿಯಾಗಲಿಲ್ಲ. ಹಾಗಾಗಿ ಯೋಜನೆಗೆ ಕೇಂದ್ರ ಸರಕಾರದ ಅನುಮೋದನೆ ಪ್ರಕ್ರಿಯೆ ಸುಸೂತ್ರವಾಯಿತು.

Kalasa, Banduri, project, Goa govt, moves, Supreme Court,

Articles You Might Like

Share This Article