ಕಾಂಗ್ರೆಸ್ ಸೇರುವರೇ ನಟ ಕಮಲ್‍ ಹಾಸನ್..?!

Social Share

ಚೆನ್ನೈ,ಜ.26- ಖ್ಯಾತ ಚಿತ್ರನಟ ಕಮಲ್‍ಹಾಸನ್ ಅವರು ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ. ಈರೋಡ್ ಪೂರ್ವದ ಉಪಚುನಾವಣೆಯಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟ ಪಕ್ಷದ ಅಭ್ಯರ್ಥಿ ಇಳಂಗೋವನ್ ಅವರಿಗೆ ಕಮಲ್‍ಹಾಸನ್ ನೇತೃತ್ವದ ಮಕ್ಕಳ್ ನಿಧಿ ಮೈಯಂ ಪಕ್ಷ ಬೆಂಬಲ ನೀಡಿದೆ.

ಈ ಕುರಿತಂತೆ ಮಾಧ್ಯಮದರೊಂದಿಗೆ ಮಾತನಾಡಿದ ಕಮಲ್, ದೇಶದ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವುದಾಗಿ ಘೋಷಿಸಿದರು. ಆಗ ಮಾಧ್ಯಮದವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ನೀವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ರ್ಪಸುವಿರಾ ಎಂದಾಗ ಯಾಕಾಗಬಾರದು ಎಂದು ಹೇಳಿಕೆ ನೀಡುವ ಮೂಲಕ ಭವಿಷ್ಯದಲ್ಲಿ ಕೈ ಪಾಳಯಕ್ಕೆ ಸೇರ್ಪಡೆಯಾಗುವ ಸುಳಿವು ನೀಡಿದ್ದಾರೆ.

ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಕಾಂಗ್ರೆಸ್‍ನ ಭಾರತ್ ಜೋಡೋ ಯಾತ್ರೆಯಲ್ಲಿ ಕಮಲ್ ಹಾಸನ್ ಅವರು ರಾಹುಲ್ ಗಾಂಧಿ ಅವರೊಂದಿಗೆ ಕಾಣಿಸಿಕೊಂಡು ಗಮನ ಸೆಳೆದಿದ್ದರು.

ಆರ್ಕಿಡ್ ಶಾಲೆ ಮುಂದೆ ಪೋಷಕರ ಪ್ರತಿಭಟನೆ

ಇತ್ತಿಚೆಗೆ ಇಳಂಗೋವನ್ ಅವರು ಕಮಲ್‍ಹಾಸನ್ ಅವರನ್ನು ಭೇಟಿಯಾಗಿ ಉಪಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಇದೀಗ ಅವರು ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ಅಭ್ಯರ್ಥಿಗೆ ಬೆಂಬಲ ನೀಡಿರುವುದು ಕೂತುಹಲಕ್ಕೆ ಕಾರಣವಾಗಿದೆ.

ದೊಡ್ಡ ಕಾರಣದ ವಿರುದ್ಧದ ಹೋರಾಟ, ಇದರಲ್ಲಿ ನಾನು ಸಣ್ಣ ಭಿನ್ನಾಭಿಪ್ರಾಯಗಳನ್ನು ತ್ಯಾಗ ಮಾಡಲು ಸಿದ್ಧನಿದ್ದೇನೆ. ನಾವು ಮತ್ತೆ ಯುದ್ಧಕ್ಕೆ ಹಿಂತಿರುಗುತ್ತೇವೆ. ಇದರರ್ಥ ನಾನು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವುದಿಲ್ಲ ಎಂದಲ್ಲ. ಏನಾದರೂ ಸಂಭವಿಸಿದರೆ ನಾನು ಮËನವಾಗಿರುತ್ತೇನೆ ಎಂದಲ್ಲ ಎಂದು ಅವರು ಮಾರ್ಮಿಕವಾಗಿ ಮಾತನಾಡಿದ್ದಾರೆ.

Kamal Haasan, backs, Congress, candidate,

Articles You Might Like

Share This Article