ಚೆನ್ನೈ,ಜ.28- ಖ್ಯಾತ ನಟ ಕಮಲ ಹಾಸನ್ ನೇತೃತ್ವದ ಮಕ್ಕಳ್ ನಿಧಿ ಮೈಯಂ ಪಕ್ಷವನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸಲಾಗುವುದು ಎಂಬ ಹೇಳಿಕೆ ಕಾಣಿಸಿಕೊಂಡ ಬೆನ್ನಲ್ಲೆ ಮೈಯಂ ಪಕ್ಷದ ವೆಬ್‍ಸೈಟ್ ಹ್ಯಾಕ್ ಆಗಿದೆ.
2024ರ ಲೋಕಸಭಾ ಚುನಾವಣೆ ವೇಳೆಗೆ ಮಕ್ಕಳ್ ನಿಧಿ ಮೈಯಂ ಪಕ್ಷವನ್ನು ಕಾಂಗ್ರೆಸ್‍ನೊಂದಿಗೆ ವಿಲೀನಗೊಳಿಸಲಾಗುವುದು ಎಂಬ ಪೋಸ್ಟ್ ವೆಬ್‍ಸೈಟ್‍ನಲ್ಲಿ ಕಾಣಿಸಿಕೊಂಡ ಬೆನ್ನಲ್ಲೆ ವೆಬ್‍ಸೈಟ್ ಹ್ಯಾಕ್ ಆಗಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ನಮ್ಮ ಪಕ್ಷವನ್ನು ಕಾಂಗ್ರೆಸ್‍ನೊಂದಿಗೆ ವಿಲೀನಗೊಳಿಸುವ ತೀರ್ಮಾನ ನಾವು ಕೈಗೊಂಡಿಲ್ಲ. ನಮ್ಮ ಪಕ್ಷದ ವೆಬ್‍ಸೈಟ್‍ನ್ನು ಹ್ಯಾಕ್ ಮಾಡಿ ಇಂತಹ ಪೋಸ್ಟ್ ಮಾಡಲಾಗಿದೆ ಎಂದು ಪಕ್ಷದ ವಕ್ತಾರ ಮುರಳಿ ಅಬ್ಬಾಸ್ ತಿಳಿಸಿದ್ದಾರೆ.
ಇತ್ತಿಚೆಗೆ ಭಾರತ್ ಜೋಡೋ ಯಾತ್ರೆಯಲ್ಲಿ ಕಮಲ್‍ಹಾಸನ್ ಅವರು ರಾಹುಲ್‍ಗಾಂಧಿ ಅವರೊಂದಿಗೆ ಕಾಣಿಸಿಕೊಂಡ ನಂತರ ಕಮಲ್ ಕಾಂಗ್ರೆಸ್ ಸೇರಬಹುದು ಎಂಬ ಗುಮಾನಿ ಇತ್ತು.
ಪರೀಕ್ಷೆಯಲ್ಲಿ ನಕಲು ಮಾಡಬಹುದು, ಜೀವನದಲ್ಲಿ ಯಶಸ್ವಿಯಾಗುವುದಿಲ್ಲ : ಪ್ರಧಾನಿ ಮೋದಿ
ಇದಕ್ಕೆ ಪೂರಕವೆಂಬಂತೆ ತಮಿಳುನಾಡಿನಲ್ಲಿ ನಡೆದ ಉಪ ಚುನಾವಣೆಯಲ್ಲಿ ಮಕ್ಕಳ್ ನಿಧಿ ಮೈಯಂ ಪಕ್ಷ ಕಾಂಗ್ರೆಸ್ ಅಭ್ಯರ್ಥಿ ಇಳಂಗೋವನ್‍ಗೆ ಬೆಂಬಲ ವ್ಯಕ್ತಪಡಿಸಿತ್ತು. ಈ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಕಮಲ್ ಭವಿಷ್ಯದಲ್ಲಿ ಯಾಕೆ ನಾನು ಕಾಂಗ್ರೆಸ್ ಅಭ್ಯರ್ಥಿಯಾಗಬಾರದು ಎಂಬ ಹೇಳಿಕೆ ನೀಡಿದ್ದರು.
ಇಂತಹ ಬೆಳವಣಿಗೆ ಸಂದರ್ಭದಲ್ಲೇ ಮಕ್ಕಳ್ ನಿಧಿ ಮೈಯಂ ಪಕ್ಷದ ವೆಬ್‍ಸೈಟ್‍ನಲ್ಲಿ ನಮ್ಮ ಪಕ್ಷವನ್ನು ಕಾಂಗ್ರೆಸ್‍ನೊಂದಿಗೆ ವಿಲೀನಗೊಳಿಸಲಾಗುವುದು ಎಂಬ ಹಣೆಬರಹ ಹಾಕಿ ತಕ್ಷಣ ಅದು ಸುಳ್ಳು ನಮ್ಮ ವೆಬ್‍ಸೈಟ್‍ನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿಕೆ ನೀಡಿರುವುದು ಹಲವಾರು ಕೂತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ.
Kamal Haasan, party, website, hacked,