ಚೆನ್ನೈ,ಫೆ.19- ಈರೋಡ್ ಪೂರ್ವ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಪ್ರಚಾರದಲ್ಲಿ ನಟ ರಾಜಕಾರಣಿ ಕಮಲ್ ಹಾಸನ್ ಭಾಗವಹಿಸಿದ್ದರು. ಆಡಳಿತಾರೂಢ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಾಂಗ್ರೆಸ್‍ನ ಇ.ವಿ.ಕೆ.ಎಸ್.ಇಳಂಗೋವನ್ ಪರ ಕಮಲ್ ಹಾಸನ್ ಪ್ರಚಾರ ನಡೆಸಿದ್ದಾರೆ.
2018ರಲ್ಲಿ ಮಕ್ಕಳ್ ನೀ ಮೈಯಂ ಪಕ್ಷ ಸ್ಥಾಪಿಸಿದ ಕಮಲ್ ಹಾಸನ್, 2021ರಲ್ಲಿ ವಿಧಾನಸಭೆ ಚುನಾವಣೆ ಸೇರಿದಂತೆ ಹಲವು ಚುನಾವಣೆಗಳನ್ನು ಎದುರಿಸಿದ್ದಾರೆ. ಇದೇ ಮೊದಲ ಬಾರಿಗೆ ಬೇರೆ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ.
ಛತ್ರಪತಿ ಶಿವಾಜಿ ಕೋಟೆಗೆ ಜನರ ಭೇಟಿಗೆ ಅಡ್ಡಿ ಆರೋಪ
ಉಪಚುನಾವಣೆಯಲ್ಲಿ ಎಐಎಡಿಎಂಕೆಯ ಕೆ.ಎಸ್.ತೆನ್ನರಸು ವಿರುದ್ಧ ಕಾಂಗ್ರೆಸ್ ಮುಖಂಡ ಇಳಂಗೋವನ್ ಕಣಕ್ಕಿಳಿದಿದ್ದಾರೆ. ಉಪಚುನಾವಣೆಯಲ್ಲಿ ಸೀಮಾನ್ ಅವರ ನಾಮ್ ತಮಿಜರ್ ಕಚ್ಚಿ ಮತ್ತು ನಟ ವಿಜಯಕಾಂತ್ ಅವರ ಡಿಎಂಡಿಕೆ ಅಭ್ಯರ್ಥಿಗಳು ಕೂಡ ಕಣದಲ್ಲಿದ್ದಾರೆ.
ವಿಚಾರವಾದಿ ನಾಯಕ ಪೆರಿಯಾರ್ ಇ ವಿ ರಾಮಸಾಮಿ ಅವರ ಮೊಮ್ಮಗ ಎವೆರಾ ಅವರು 2021 ರಲ್ಲಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಅವರ ನಿಧನದಿಂದ ಉಪಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಇಳಂಗೋವನ್ ಕಮಲ್ ಹಾಸನ್ ಅವರನ್ನು ಭೇಟಿಯಾಗಿ ಬೆಂಬಲ ಕೋರಿದ್ದರು.
IAS vs IPS : ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ ಗಂಭೀರ ಆರೋಪ
ಉಪಚುನಾವಣೆ ಫಲಿತಾಂಶ ಡಿಎಂಕೆ ಸರ್ಕಾರದ ಕಾರ್ಯಕ್ಷಮತೆಗೆ ದಿಕ್ಸೂಚಿ ಎಂದು ಭಾವಿಸಲಾಗಿದೆ. ಕೆ.ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಅಭ್ಯರ್ಥಿ ನಡುವೆ ಕಾಂಗ್ರೆಸ್ ಪ್ರಬಲ ಪೈಪೋಟಿ ನಡೆಸುತ್ತಿದೆ.
Kamal Haasan, campaign, Congress, candidate, Elangovan,