ನವರಂಗಿ ಆಟವಾಡಲು ಹೋಗಿ ಪೊಲೀಸ್ ಅತಿಥಿಯಾದ ಬಾಲಿವುಡ್ ನಿರ್ಮಾಪಕ

Social Share

ಮುಂಬೈ, ಅ.28-ನವರಂಗಿ ಆಟವಾಡಲು ಹೋಗಿ ಬಾಲಿವುಡ್ ಹಿಂದಿ ಚಲನಚಿತ್ರದ ನಿರ್ಮಾಪಕ ಪೊಲೀಸರಿಗೆ ಅತಿಥಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ದೇಹತಿ ಡಿಸ್ಕೋ ಚಲನಚಿತ್ರದ ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ ಅವರನ್ನು ಇಂದು ಮುಂಜಾನೆ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಕಳೆದ ಅ. 19 ರಂದು ಅಂಧೇರಿ (ಪಶ್ಚಿಮ) ದಲ್ಲಿರುವ ಅಪಾರ್ಟ್‍ಮೆಂಟ್‍ನ ಪಾರ್ಕಿಂಗ್ ಸ್ಥಳದಲ್ಲಿ ಮಹಿಳೆಯೊಂದಿಗೆ ಕಾರಿನಲ್ಲಿ ಮಿಶ್ರಾ ಸರಸಲ್ಲಿದ್ದಾಗ ಅವರ ಪತ್ನಿ ನೋಡಿದ್ದಾರೆ. ಅವರನ್ನು ಪ್ರಶ್ನಿಸಲು ಹೋದಾಗ, ಮಿಶ್ರಾ ಅವರು ಸ್ಥಳದಿಂದ ತಪ್ಪಿಸಿಕೊಳ್ಳುವಾಗ ಪತ್ನಿಗೆ ಕಾರು ಡಿಕ್ಕಿ ಹೊಡೆದಿದೆ ಇದರಿಂದ ಆಕೆಯ ಕಾಲುಗಳು, ಕೈ ಮತ್ತು ತಲೆಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾನು ಹಿಂದೂ ರಾಮಯ್ಯ ಕೃತಿ ವಿದ್ಯಾರ್ಥಿಗಳಿಗೆ ಪರಾಮರ್ಶನ ಗ್ರಂಥ: ಡಾ.ವೋಡೆ ಪಿ.ಕೃಷ್ಣ

ಮಿಶ್ರಾಅವರ ಪತ್ನಿ ದೂರು ನೀಡಿದ ನಂತರ ಪೊಲೀಸರು ಬಂಧಿಸಿ ಅಂಬೋಲಿ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

Articles You Might Like

Share This Article