ಹೊಸ ವರ್ಷಾಚರಣೆಯಲ್ಲಿ ಅಹಿತಕರ ಘಟನೆಗಳು ಸಂಭವಿಸಿಲ್ಲ: ಕಮಲ್ ಪಂಥ್

ಬೆಂಗಳೂರು, ಜ.1- ನಗರದಲ್ಲಿ ನಿನ್ನೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ ಎಂದು ನಗರ ಪೊಲೀಸ್ ಆಯುಕ್ತ  ಕಮಲ್ ಪಂಥ್  ಅವರು ತಿಳಿಸಿದ್ದಾರೆ. ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಸಹಕಾರದಿಂದ ಹೊಸ ವರ್ಷಾಚರಣೆ ಯಶಸ್ವಿಯಾಗಿದೆ. ತಮ್ಮ ತಮ್ಮ ಸ್ಥಳಗಳಲ್ಲೇ ವರ್ಷಾಚರಣೆ ನಡೆಸಿದ್ದಾರೆ. ಅದಕ್ಕಾಗಿ ನಾಗರಿಕರಿಗೆ ಧನ್ಯವಾದ ಹೇಳುವೆ ಎಂದರು.

2022 ವರ್ಷ ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಕಮಲ್ ಪಂಥ್  ಇದೇ ವೇಳೆ ಶುಭಾಶಯ ತಿಳಿಸಿದರು. ನಗರದಲ್ಲಿ ಡ್ರಗ್ಸ್ ಪ್ರಕರಣಗಳು ಹೆಚ್ಚಳವಾಗಿವೆ. ನಾವು ಕಟ್ಟುನಿಟ್ಟಾಗಿ ಪೆಡ್ಲರ್ಗಳನ್ನು ಮಟ್ಟ ಹಾಕುತ್ತಿದ್ದೇವೆ. ನಾವೇನಾದರೂ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳದಿದ್ದರೆ ಡ್ರಗ್ಸ್ ಮಾಫಿಯಾ ಹೆಚ್ಚಳವಾಗುತ್ತಿತ್ತು. ಹೀಗಾಗಿ ಮಾದಕ ವಸ್ತು ಸಣ್ಣ ಪ್ರಮಾಣವಾದರೂ ಸಹ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.

ಡ್ರಗ್ಸ್ ವಿರುದ್ಧದ ಸಮರ ನಿರಂತರವಾಗಿ ನಡೆಯುತ್ತದೆ. ಇದುವರೆಗೂ ಪೊಲೀಸರು ಉತ್ತಮ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಷ್ಟು ಕಾರ್ಯಾಚರಣೆ ಮುಂದುವರೆಸುತ್ತೇವೆ ಎಂದು ಕಮಲ್ ಪಂಥ್ ಅವರು ಹೇಳಿದರು.