ಡಿ.31ರಂದು ಬೆಂಗಳೂರಿನಲ್ಲಿ ಮತ್ತಷ್ಟು ಬಿಗಿ ಕ್ರಮ: ಕಮಲ್ ಪಂಥ್

ಬೆಂಗಳೂರು,ಡಿ.29- ಹೊಸ ವರ್ಷ ಆಚರಣೆ ದಿನವಾದ ಡಿ.31ರಂದು ಕೆಲವು ನಿರ್ಭಂದ ಗಳೊಂದಿಗೆ  ಬಿಗಿಯಾದ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು ತಿಳಿಸಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿ ನಂತರ ಸುದ್ದಿ ಗಾರರೊಂದಿಗೆ ಮಾತನಾಡುತ್ತಾ , ನಗರ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಇನ್ನು ಮುಂದೆ ಜಂಟಿಯಾಗಿ ನೈಟ್ ಕರ್ಫೂ ಅನುಷ್ಠಾನಗೊಳಿಸಲಿದ್ದಾರೆ. ಒಟ್ಟಿಗೆ ನಾಕಾಬಂಧಿಯನ್ನು ಮಾಡಲಾಗುವುದು. ನಿನ್ನೆ ಯಿಂದ ಆರಂಭವಾದ ನೈಟ್ ಕರ್ಫೂಗೆ ಜನರಿಂದ ಉತ್ತಮ ಬೆಂಬಲ ದೊರೆತಿದೆ.

ಮುಂದೆಯೂ ಸಹ ಇದೇ ರೀತಿ ಸಹಕಾರ ಇರುತ್ತದೆ ಎಂದು ನನಗೆ ಭರವಸೆ ಇದೆ. ಪೊಲೀಸರು ಸಹ ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ. ಫ್ಲೈಓವರ್‍ನ್ನು ಬಂದ್ ಮಾಡುವ ಸಂಭಂಧ ಸ್ಥಳೀಯ ಅಧಿಕಾರಿಗಳು ಅಲ್ಲಿನ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.