SRH ನಾಯಕತ್ವ ತೊರೆದ ಕೇನ್ ವಿಲಿಯಮ್ಸನ್
ಮುಂಬೈ, ಮೇ 18- ಮಾಡು ಇಲ್ಲ ಮಡಿ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 3 ರನ್ಗಳ ರೋಚಕ ಗೆಲುವು ಸಾಧಿಸಿದ ಬೆನ್ನಲ್ಲೇ ಸನ್ರೈಸರ್ಸ್ ಹೈದ್ರಾಬಾದ್ನ ನಾಯಕ ಕೇನ್ ವಿಲಿಯಮ್ಸನ್ ನಾಯಕತ್ವ ತೊರೆಯುವ ಮೂಲಕ ಆಘಾತ ನೀಡಿದ್ದಾರೆ.
ಕೇನ್ ವಿಲಿಯಮ್ಸನ್ ಅವರ ಪತ್ನಿ ಮಗುವಿಗೆ ಜನ್ಮ ನೀಡುತ್ತಿರುವು ದರಿಂದ ಐಪಿಎಲ್ನಲ್ಲಿ ಉಳಿದಿರುವ ಪಂದ್ಯಗಳಿಂದ ಅವರು ತಂಡವನ್ನು ತೊರೆದಿದ್ದಾರೆ ಎಂದು ಎಸ್ಆರ್ಎಚ್ನ ಫ್ರಾಂಚೈಸಿಗಳು ತಿಳಿಸಿದ್ದಾರೆ. ಮಗುವಿನ ನಿರೀಕ್ಷೆಯಲ್ಲಿರುವ ಕೇನ್ ವಿಲಿಯಮ್ಸನ್ ಹಾಗೂ ಆತನ ಪತ್ನಿ ಸಾರಾ ರಹೀಂಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.
ಕೇನ್ ವಿಲಿಯಮ್ಸ್ ಅವರು ತಂಡವನ್ನು ತೊರೆದಿರುವುದರಿಂದ ಸನ್ರೈಸರ್ಸ್ನ ಮುಂದಿನ ನಾಯಕರಾಗಿ ವೆಸ್ಟ್ಇಂಡೀಸ್ನ ಸೀಮಿತ ಓವರ್ಗಳ ನಾಯಕ ನಿಕೋಲಸ್ ಪೂರನ್ ಅಥವಾ ಭಾರತದ ವೇಗದ ಬೌಲರ್ ಭುವನೇಶ್ವರ್ಕುಮಾರ್ ಅವರ ಹೆಗಲಿಗೆ ನಾಯಕನ ಜವಾಬ್ದಾರಿ ಬೀಳಲಿದೆ.
ಸನ್ರೈಸರ್ಸ್ ಹೈದ್ರಾಬಾದ್ ಮೇ 22 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ತನ್ನ ಕೊನೆಯ ಪಂದ್ಯ ಆಡಲಿದೆ.