Saturday, September 23, 2023
Homeಇದೀಗ ಬಂದ ಸುದ್ದಿಹುಟ್ಟುಹಬ್ಬದ ಸಂಭ್ರಮದಲ್ಲಿ ಡಾಲಿ ಧನಂಜಯ್‍

ಹುಟ್ಟುಹಬ್ಬದ ಸಂಭ್ರಮದಲ್ಲಿ ಡಾಲಿ ಧನಂಜಯ್‍

- Advertisement -

ಅರಸೀಕೆರೆ ಕಾಳೇನಹಳ್ಳಿಯಿಂದ ಖಾಲಿ ಕೈಯಲ್ಲಿ ಬಂದ ಯುವಕ ಇಂದು ಗಾಂಧಿನಗರದಲ್ಲಿ ತನ್ನದೇ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದಾನೆ. ಯಾವ ಗಾಡ್ ಫಾದರ್ ಇಲ್ಲದೆ ಸ್ಟಾರ್ ನಟನಾಗಿ ಬೆಳೆದಿದ್ದಾನೆ ಅದು ಡಾಲಿ ಧನಂಜಯ್‍.

ಮೊದಮೊದಲು ಅನೇಕ ಸೋಲುಗಳನ್ನು ಕಂಡ ಧನಂಜಯï, ಅವುಗಳನ್ನು ಗೆಲುವಿನ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಕನ್ನಡಿಗರ ಪ್ರೀತಿಯ ಡಾಲಿಯಾಗಿದ್ದಾರೆ. ಡೈರೆಕ್ಟರ್ ಸ್ಪೆಷಲ್ ಚಿತ್ರದ ಮೂಲಕ ತನ್ನನ್ನು ಗುರುತಿಸಿಕೊಂಡ ಇವರು, ಟಗರು ಚಿತ್ರದಲ್ಲಿ ಶಿವಣ್ಣನವರ ಜೊತೆ ಮಿಂಚಿದ್ದಷ್ಟೇ ಅಲ್ಲದೆ ಕನ್ನಡ ಚಿತ್ರರಂಗದಲ್ಲಿ ಭದ್ರ ಬುನಾದಿಯನ್ನು ಹಾಕಿಕೊಂಡರು. ಈಗ ಬರೀ ನಟನಾಗಿ ಉಳಿಯದೆ ಕೋಟಿಗಟ್ಟಲೆ ಸಿನಿಮಾ ಮಾಡುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ.

- Advertisement -

ಕೊರೊನಾ ಮತ್ತು ಇನ್ನಿತರ ಕಾರಣಗಳಿಂದ ಧನಂಜಯ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಈ ಬಾರಿ ತಮ್ಮ ಅಭಿಮಾನಿಗಳ ಮನಸ್ಸು ನೋಯಿಸಬಾರದು ಎಂಬ ಉದ್ದೇಶದಿಂದ ನಂದಿ ಲಿಂಕ್ಸ್ ಗ್ರೌಂಡ್‍ನಲ್ಲಿ ಅಭಿಮಾನಿಗಳನ್ನು ಭೇಟಿ ಮಾಡುವ ಮೂಲಕ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಬಂದು ನೆಚ್ಚಿನ ನಟನಿಗೆ ಶುಭ ಕೋರಿದ್ದಾರೆ.

ಬಡವ ರಾಸ್ಕಲ್ ಚಿತ್ರತಂಡದಿಂದ ಡಾಲಿ ಬರ್ತ್ ಡೇ ಸ್ಪೆಷಲ್ ಗಿಫ್ಟ್ ಸಿಕ್ಕಿದೆ. ಮಧ್ಯರಾತ್ರಿ 12 ಗಂಟೆಗೆ ಟೈಟಲ್ ಹಾಗೂ ಫಸ್ಟ್ಲುಕ್ ಮೋಷನ್ ಪೋಸ್ಟರ್ ಅನೌ ï ಮಾಡಲಾಗಿದೆ. ಈ ಚಿತ್ರಕ್ಕೆ ಅಣ್ಣ ಫ್ರೇಮ್ ಮೆಕ್ಸಿಕೋ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. 2021ರಲ್ಲಿ ತೆರೆಗೆ ಬಂದ ಬಡವ ರಾಸ್ಕಲ್ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಚಿತ್ರದ ಮೂಲಕ ಧನಂಜಯ್ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದರು. ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ನಿರ್ಮಿಸಿ ನಟಿಸಿದ್ದ ಬಡವ ರಾಸ್ಕಲ್ ಚಿತ್ರವನ್ನು ಶಂಕರ್ ಗುರು ನಿರ್ದೇಶಿಸಿದ್ದರು. ಮೊದಲ ಹೆಜ್ಜೆಯಲ್ಲಿಯೇ ಗೆದ್ದಿದ್ದ ಶಂಕರ್ ಗುರು ಈಗ ಮತ್ತೊಂದು ಚೆಂದದ ಕಥೆ ಮಾಡಿ ಡಾಲಿ ರಂಜಿಸಲು ಅಣಿಯಾಗಿದ್ದಾರೆ.

ಅದರ ಮೊದಲ ಭಾಗವೆಂಬಂತೆ ಇಂದುಅಣ್ಣ ಮ್ ಮೆಕ್ಸಿಕೋ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಕೊರಳಿಗೆ ಕರ್ನಾಟಕ ಮ್ಯಾಪ್ ಇರುವ ಪೆಂಡೆಂಟ್ ಆಭರಣ ಧರಿಸಿ, ಸೂಟ್ ತೊಟ್ಟಿರುವ ಧನಂಜಯ್ ಲುಕ್ ರಿವೀಲ್ ಮಾಡದೇ ಚಿತ್ರತಂಡ ನಿರೀಕ್ಷೆ ಹೆಚ್ಚಿಸಿದೆ.

ಟೈಂ ಸ್ವ್ಕೇರ್ ನಲ್ಲಿ ಡಾಲಿ ಹುಟ್ಟುಹಬ್ಬದ ವಿಡಿಯೋವನ್ನು ಪ್ರಸಾರ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಗೌರವ ಸಿಕ್ಕಿದೆ. ಸೂಪರ್ ಸ್ಟಾರ್ ರಜಿನಿ ನಂತರ ಭಾರತದ ಎರಡನೆ ನಟನಿಗೆ ಈ ಗೌರವ ಸಿಕ್ಕಿರುವುದು ಕನ್ನಡಿಗರ ಹೆಮ್ಮೆಯ ವಿಷಯ. 15 ಸೆಕೆಂಡ್‍ನ ವಿಡಿಯೋ ಪ್ರಸಾರ ಮಾಡಿದ ಟೈಂ ಸ್ವ್ಕೇರ್ ಜೈಲರ್ ಬಿಡುಗಡೆಗೂ ಮುನ್ನ ರಜಿನಿ ವಿಡಿಯೋ ಪ್ರಸಾರ ಮಾಡಿತ್ತು.

Kannada, #actor, #Dolly, #Dhananjay, #birthday,

- Advertisement -
RELATED ARTICLES
- Advertisment -

Most Popular