ದುಬಾರಿಯಾಯ್ತು ಕಸಾಪ ಸಭಾಂಗಣ

Social Share

ಬೆಂಗಳೂರು,ನ.3- ಇದುವರೆಗೂ ಕೈಗೆಟಕುವ ಬೆಲೆಗೆ ಸಿಗುತ್ತಿದ್ದ ಕಸಾಪ ಸಭಾಂಗಣ ಇನ್ನು ಮುಂದೆ ದುಬಾರಿಯಾಗಲಿವೆ.ಐದು ಸಾವಿರ ರೂ.ಗಳಿಗೆ ಬಾಡಿಗೆಗೆ ಸಿಗುತ್ತಿದ್ದ ಸಭಾಂಗಣಕ್ಕೆ 15 ಸಾವಿರದಷ್ಟು ಬಾಡಿಗೆ ಏರಿಕೆ ಮಾಡಲಾಗಿದೆ.

ಹೀಗಾಗಿ ನವೀಕೃತ ಸಭಾಂಗಣಕ್ಕೆ ಇನ್ನು ಮುಂದೆ 20 ಸಾವಿರ ರೂ.ಗಳ ಬಾಡಿಗೆ ಪಾವತಿಸಬೇಕಾಗಿದೆ.ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಕಚೇರಿಯಲ್ಲಿರುವ ಶ್ರೀ ಕೃಷ್ಣರಾಜ ಪರಿಷನ್ಮಂದಿರ ಸಭಾಂಗಣವನ್ನು ಇತ್ತಿಚೆಗೆ ನವೀಕರಿಸಲಾಗಿದ್ದು, ಇನ್ನು ಮುಂದೆ ಈ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಬೇಕೆಂದರೆ 20 ಸಾವಿರ ಪಾವತಿಸುವುದು ಕಡ್ಡಾಯವಾಗಿದೆ.

ಅರ್ಧ ದಿನಕ್ಕೆ 10 ಸಾವಿರ, ದಿನಕ್ಕೆ 20 ಸಾವಿರ ಬಾಡಿಗೆ ನಿಗಪಡಿಸಲಾಗಿದ್ದು, ಇದರ ಜೊತೆಗೆ ತಾವು ಕಟ್ಟುವ ಬಾಡಿಗೆಗೆ ಜಿಎಸ್ಟಿ ದರವನ್ನು ಪಾವತಿಬೇಕು ಎಂದು ಕಸಾಪ ತಿಳಿಸಿದೆ. ಇದರ ಜೊತೆಗೆ ಟಿಕೆಟ್ ಇರಿಸಿ ನಡೆಸುವ ಕಾರ್ಯಕ್ರಮಗಳಿಗೆ ಮತ್ತಷ್ಟು ಬಾಡಿಗೆ ಹೆಚ್ಚಳ ಮಾಡಲಾಗಿದೆ.

ಇದು ಘನಘೋರ : ಸಕಾಲದಲ್ಲಿ ಚಿಕಿತ್ಸೆ ಸಿಗದೇ ತಾಯಿ ಮತ್ತು ಅವಳಿ ನವಜಾತ ಶಿಶುಗಳ ಸಾವು

ಈ ಮೊದಲು ಸಭಾಂಗಣಕ್ಕೆ ದಿನವೊಂದಕ್ಕೆ 5 ಸಾವಿರ, ಅರ್ಧ ದಿನಕ್ಕೆ 3 ಸಾವಿರ ಬಾಡಿಗೆಯನ್ನು ಪಾವತಿಸಬೇಕಾಗಿತ್ತು. ಕೆಲ ತಿಂಗಳ ಹಿಂದಷ್ಟೇ ಸುಮಾರು 1.95 ಕೋಟಿ ರೂ. ವೆಚ್ಚದಲ್ಲಿ ಸಭಾಂಗಣವನ್ನು ಸಂಪೂರ್ಣ ನವೀಕರಿಸಿರುವ ಹಿನ್ನಲೆ ಬಾಡಿಗೆ ದರ ಹೆಚ್ಚಳ ಮಾಡಲಾಗಿದೆ.

128 ಆಸನಗಳಿರುವ ಪರಿಷನ್ಮಂದಿರವನ್ನು ಹವಾ ನಿಯಂತ್ರಿತ ಸಭಾಂಗಣವನ್ನಾಗಿ ಪರಿವರ್ತನೆ ಮಾಡಲಾಗಿದೆ. ಆದರೂ ಸಾಹಿತ್ಯ ಮತ್ತಿತರ ಕಾರ್ಯಕ್ರಮಗಳಿಗೆ 20 ಸಾವಿರ ಬಾಡಿಗೆ ದುಬಾರಿಯಾಗಲಿದೆ ಎಂದು ಸಾಹಿತ್ಯ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Articles You Might Like

Share This Article