ಹಾವೇರಿಯ ಅದ್ಧೂರಿ ಅಕ್ಷರ ಜಾತ್ರೆಗೆ ಇಂದು ತೆರೆ

Social Share

ಹಾವೇರಿ, ಜ.8- ಕನಕನ ನಾಡು ಸಾಮರಸ್ಯದ ಬೀಡು ಹಾವೇರಿಯಲ್ಲಿ ಜ.6ರಿಂದ ಆರಂಭವಾದ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕಿಂದು ತೆರೆ ಬಿದ್ದಿದೆ. ರಾಜ್ಯದ ನಾನಾ ಭಾಗಗಳಿಂದ ತಾಯಿ ಭುವನೇಶ್ವರಿ ಸ್ಮರಣೆಗೆ ತಂಡೋಪತಂಡವಾಗಿ ಟ್ರ್ಯಾಕ್ಟರ್, ಬಸ್, ಕಾರು ಹಾಗೂ ಟೆಂಪೊಗಳಲ್ಲಿ ಬಂದ ಸಹಸ್ರಾರು ಜನ ಸಾಹಿತಿಗಳ ಮಾತು-ಮಂಥನ, ಗೋಷ್ಠಿಗಳಲ್ಲಿ ಮಿಂದೆದ್ದರು.

ಅಲ್ಲದೆ, ಸಂಜೆ ಹಾಸ್ಯ ಕಲಾವಿದರು, ಸ್ಥಳೀಯ ಕಲಾವಿದರು, ಮಕ್ಕಳ ನೃತ್ಯ ಹೀಗೆ ಹತ್ತು ಹಲವು ಮನರಂಜನಾ ಕಾರ್ಯಕ್ರಮಗಳು ನೆರೆದ ಜನರನ್ನು ಕೊರೆವ ಚಳಿಯಲ್ಲೂ ಮಧ್ಯರಾತ್ರಿ ವರೆಗೂ ಹಿಡಿದಿಟ್ಟಿದ್ದವು. ಬಂದವರಿಗೆ ಎಲ್ಲ ಊಟೋಪಚಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತಾದರೂ ಕೆಲಮ್ಮೊಮೆ ಅಸ್ತವ್ಯಸ್ತ ಕಂಡುಬಂತು.

ಒಟ್ಟಾರೆ ಹೇಳುವುದಾದರೆ ಜಿಲ್ಲೆಯಲ್ಲಿ ಜರುಗಿದ ನುಡಿ ಜಾತ್ರೆ, ಹಾವೇರಿಯ ಜನ ಹಿಂದೆಂದೂ ಕಾಣದ ಅತಿದೊಡ್ಡ ಕಾರ್ಯಕ್ರಮವಾಗಿ ಹೊರಹೊಮ್ಮಿತು.

ಜೋಡೊ ಯಾತ್ರೆ ಬೆಂಬಲಿಸಲು ಚಳಿಯಲ್ಲೂ ಶರ್ಟ್ ತೆಗೆದು ನೃತ್ಯ

ಸಮ್ಮೇಳನದ ವಿಶೇಷತೆಗಳು: ಕನಕ -ಶರೀಫ-ಸರ್ವಜ್ಞ ಪ್ರಧಾನ ವೇದಿಕೆ ಎದುರಿಗೆ ತಾಯಿ ಭುವನೇಶ್ವರಿಯ ರಥ, ಪುನೀತ್ ರಾಜ್‍ಕುಮಾರ್ ಅವರ ಸ್ಥಬ್ಧ ಚಿತ್ರ, ಹೋರಿ ಹಬ್ಬದಲ್ಲಿ ತನ್ನದೇ ಆದ ಹೆಸರು ಮಾಡಿದ ಚಾಮುಂಡಿ ಎಕ್ಸ್‍ಪ್ರೆಸ್ ಎನ್ನುವ ಹೋರಿಯ ಸ್ಥಬ್ಧ ಚಿತ್ರ ಹಾಗೂ ಪುಟ್ಟರಾಜ್ ಗವಾಯಿಗಳವರ ಸ್ತಬ್ಧ ಚಿತ್ರಗಳು ಅಕ್ಷರ ಜಾತ್ರೆಗೆ ಬಂದಿದ್ದ ಜನರ ಕಣ್ಮನ ಸೆಳೆದವು.

ತೋಟಗಾರಿಕೆ ಇಲಾಖೆಯವರ ಫಲಪುಷ್ಪ ಪ್ರದರ್ಶನ ಜನರ ಆಕರ್ಷಿತ ಕೇಂದ್ರ ಬಿಂದುವಾಗಿತ್ತು. ಅರಣ್ಯ ಇಲಾಖೆಯ ಅರಣ್ಯ ಸಂರಕ್ಷಣೆಯ ಕಲಾಕೃತಿಗಳು, ಅರಣ್ಯ ಬೆಳೆಸಿ ನಾಡು ಉಳಿಸಿ ಎಂಬ ಸಂದೇಶಗಳು ಜನರ ಮನಮುಟ್ಟುವಂತಿದ್ದವು.

26/11 ದಾಳಿ ಸಂದರ್ಭದಲ್ಲಿ ಬಚಾವಾಗಿದ್ದ ಗೌತಮ್ ಅದಾನಿ

ಒಂದು ಕಡೆ ಸಾಹಿತ್ಯ ಗೋಷ್ಠಿ, ಕಲೆ, ಚಿತ್ರಕಲೆ, ನೃತ್ಯವಾದರೆ, ಇನ್ನೊಂದೆಡೆ ಸಾಹಿತ್ಯ ರಸಿಕರಿಗೆ ತಮ್ಮ ನೆಚ್ಚಿನ ಸಾಹಿತಿಗಳ ಪುಸ್ತಕಗಳ ಹಬ್ಬ. ಮತ್ತೊಂದೆಡೆ ಜನರನ್ನು ಕೈಬೀಸಿ ಕರೆದ ವಾಣಿಜ್ಯ ಮಳಿಗೆಗಳು. ಹೀಗೆ ಅನೇಕ ವಿಶೇಷತೆಗಳಿಗೆ ಹಾವೇರಿಯಲ್ಲಿ ನಡೆದ 86ನೇ ಸಾಹಿತ್ಯ ಸಮ್ಮೇಳನ ಸಾಕ್ಷಿಯಾಯಿತು.

kannada sahitya sammelana, haveri

Articles You Might Like

Share This Article