ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಷರತ್ತು ಬದ್ಧ ರಜೆ ಘೋಷಣೆ

Social Share

ಬೆಂಗಳೂರು,ಜ.4- ಇದೇ ತಿಂಗಳ 6ರಿಂದ 8ವರೆಗೆ ಏಲಕ್ಕಿ ನಾಡು ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಷರತ್ತುಬದ್ಧ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ.

ಆದರೆ ಸಾಹಿತ್ಯ ಸಮ್ಮೇಳನದಲ್ಲಿ ಭಾಗ ವಹಿಸುವ ನೌಕರರು ಕೆಲವು ಷರತ್ತುಗಳನ್ನು ಪಾಲಿಸಲೇಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಸಂಖ್ಯೆ 100ಕ್ಕೆ ಮೀರದಂತೆ ವಿಶೇಷ ಸಾಂದರ್ಭಿಕ ರಜೆ ಸೌಲಭ್ಯವನ್ನು ನೀಡಲಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಕಾರ್ಯದರ್ಶಿಗಳ ಪತ್ರದ ಅನ್ವಯ ಪ್ರತಿ ವರ್ಷವೂ ಈ ರಜೆಯನ್ನು ನೀಡಲಾಗುತ್ತದೆ.

ಷರತ್ತುಗಳು:
ವಿಶೇಷ ಸಾಂದರ್ಭಿಕ ರಜೆಯು, ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ನೌಕರರು ಅವರ ಆಸಕ್ತಿಯ ಒಂದು ಅಥವಾ ಎರಡು ದಿನಗಳ ಅವಧಿಗೆ ಮತ್ತು ಹೋಗಿಬರುವ ಪ್ರಯಾಣಕ್ಕೆ ಬೇಕಾಗುವ ಅವಧಿಗೆ ಸೀಮಿತವಾಗಿರಬೇಕು.
ಕನ್ನಡ ಸಾಹಿತ್ಯದ ಜ್ಞಾನ ಮತ್ತು ಅಭಿರುಚಿ ಇದ್ದು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಮಂತ್ರಿಸಲ್ಪಟ್ಟ ಸರ್ಕಾರಿ ನೌಕರರಿಗೆ ಈ ರಜೆಯ ಸೌಲಭ್ಯ ನೀಡುವುದು.

ಕನ್ನಡ ಸಾಹಿತ್ಯದ ಅಭಿರುಚಿಯುಳ್ಳ ನೌಕರರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿದ್ದರೆ ಅವರಿಗೂ ಈ ಸೌಲಭ್ಯ ನೀಡುವುದು. ಯಾವುದೇ ವಿಶೇಷ ಗುರುತರ ಸರ್ಕಾರಿ ಕೆಲಸದ ಮೇಲೆ ನೇಮಿಸಲ್ಪಟ್ಟ ನೌಕರರಿಗೆ ಸಮ್ಮೇಳನದಲ್ಲಿ ಭಾಗವಹಿಸಲು ಅನುಮತಿ ಕೊಡಬಾರದು.

ಬಜೆಟ್ ಮೂಲಕ ಜನಮನ ಗೆಲ್ಲಲು ಸಿಎಂ ತಯಾರಿ

ಈ ಸಮ್ಮೇಳನ ಮುಗಿದಮೇಲೆ ಸಮ್ಮೇಳನದಲ್ಲಿ ಭಾಗವಹಿಸಿದ ಸರ್ಕಾರಿ ನೌಕರರಿಗೆ ಸಾಹಿತ್ಯ ಪರಿಷತ್ತಿನವರು ಅಧಿಕೃತ ರಾಜರಿಷತ್ ಕೊಡಬೇಕು. ಈ ಆಧಾರದ ಮೇಲೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಅಧಿಕಾರ ಅಧಿಕಾರಿಗಳು ಈ ರಜೆಯನ್ನು ಮಂಜೂರು ಮಾಡುವುದು ಹಾಗೂ ಈ ರಜೆ ಪಡೆಯಲಿಚ್ಛಿಸುವ ನೌಕರರು ರಜೆ ಮಂಜೂರು ಮಾಡುವ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯತಕ್ಕದ್ದು ಎಂದು ಸೂಚಿಸಲಾಗಿದೆ.

Kannada Sahitya Sammelna, Haveri, government, employees,

Articles You Might Like

Share This Article