ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್, ಕಣ್ಣೂರು ಶ್ರೀ ಅರೆಸ್ಟ್

Social Share

ಬೆಂಗಳೂರು,ಅ.30- ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕಂಚಗಲ್ ಬಂಡೆಮಠದ ಶ್ರೀ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ಸ್ಪೋಟಕ ತಿರುವು ಪಡೆದುಕೊಂಡಿದ್ದು, ಕಣ್ಣೂರು ಮಠದ ಶ್ರೀಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಮಾಗಡಿಯ ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ದೊಡ್ಡಬಳ್ಳಾಪುರದಲ್ಲಿ ಇಂಜನಿ ಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಹಾಗೂ ನಿವೃತ್ತ ಶಿಕ್ಷಕ ಮತ್ತು ವಕೀಲರಾಗಿರುವ ಮಹದೇವಯ್ಯ ಅವರುಗಳನ್ನು ಪೊಲೀಸರು ವಿಚಾರಣೆ ನಡೆಸಿದ ನಂತರ ಪ್ರಕರಣದಲ್ಲಿ ಕೈವಾಡವಿರುವ ಶಂಕೆಯ ಮೇರೆಗೆ ಬಂಧಿಸಿದ್ದಾರೆ.

ಕಳೆದ ವಾರ ಆತ್ಮಹತ್ಯೆಗೆ ಶರಣಾಗಿದ್ದ ಬಂಡೆಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅವರು, ನನಗೆ ಸ್ವಾಮೀಜಿಯೊಬ್ಬರಿಂದ ಕಿರುಕುಳವಿತ್ತು. ಸಿ.ಡಿ ಇಟ್ಟುಕೊಂಡು ನನ್ನನ್ನು ಬ್ಲಾಕ್‍ಮೇಲ್ ಮಾಡಿದ್ದರು ಎಂದು ಡೆತ್‍ನೋಟ್‍ನಲ್ಲಿ ಆರೋಪಿಸಿದ್ದರು.

ಇದರ ಜಾಡು ಹಿಡಿದ ಪೊಲೀಸರು, ಮೃತ್ಯುಂಜಯ ಸ್ವಾಮೀಜಿ, ಇಂಜಿನಿಯರ್ ವಿದ್ಯಾರ್ಥಿನಿ ಮತ್ತು ವಕೀಲನನ್ನು ಸತತ ವಿಚಾರಣೆಗೊಳಪಡಿಸಿದ್ದರು. ಫೋನ್ ಕರೆಗಳು ಹಾಗೂ ಸಿ.ಡಿ ವಿಷಯ ಮುಂದಿಟ್ಟುಕೊಂಡು ಬಾಯಿಬಿಡಿಸಿದಾಗ ತಪ್ಪೋಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಂಚಗಲ್ ಬಂಡೆಮಠದ ಮೇಲೆ ಕಣ್ಣಿಟ್ಟಿದ್ದ ಕಣ್ಣೂರಿನ ಮೃತ್ಯುಂಜಯ ಸ್ವಾಮೀಜಿ ಯುವತಿಯನ್ನು ಬಳಸಿಕೊಂಡು ಹನಿಟ್ರಾಪ್ ಬಲೆಗೆ ಬೀಳಿಸಿದ್ದರು. ಯುವತಿಯ ಮಾತು ನಂಬಿ ಬಸವಲಿಂಗ ಸ್ವಾಮೀಜಿ ಅರೆನಗ್ನ ಸ್ಥಿತಿಗೆ ಒಳಗಾಗಿದ್ದ ದೃಶ್ಯವನ್ನು ಸಿ.ಡಿ ಮಾಡಿಟ್ಟುಕೊಂಡಿದ್ದರು.

CBI ತನಿಖೆಗೆ ವಹಿಸಿದ್ದ ಪ್ರಕರಣಗಳನ್ನು ಹಿಂಪಡೆದ ತೆಲಂಗಾಣ ಸರ್ಕಾರ

ಕಳೆದ ಆರು ತಿಂಗಳಿನಿಂದ ಈ ಸಿ.ಡಿ ಇಟ್ಟುಕೊಂಡು ಪೀಠ ತ್ಯಾಗ ಮಾಡಬೇಕು. ಇಲ್ಲದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಶ್ರೀಗಳನ್ನು ಹನಿಟ್ರಾಪ್‍ಗೆ ಬೀಳಿಸಿದ್ದ ವಿದ್ಯಾರ್ಥಿನಿಯು ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಒಂದು ವೇಳೆ ಹಣ ಕೊಡದಿದ್ದರೆ ಮಾಧ್ಯಮಗಳ ಮುಂದೆ ಹೋಗುವುದಾಗಿ ಬೆದರಿಕೆಯನ್ನೂ ಒಡ್ಡಿದ್ದಳು. ಮರ್ಯಾದೆಗೆ ಅಂಜಿದ್ದ ಬಸವಲಿಂಗ ಶ್ರೀಗಳು ಮೂರು ಹಂತದಲ್ಲಿ ಒಟ್ಟು ಎರಡು ಕೋಟಿ ಹಣ ಕೊಟ್ಟಿದ್ದರು.

ಆದರೆ ಈ ವಿದ್ಯಾರ್ಥಿನಿ ಇತ್ತೀಚೆಗೆ ಮತ್ತಷ್ಟು ಹಣ ಕೊಡಬೇಕು, ಇಲ್ಲದಿದ್ದರೆ ಮರ್ಯಾದೆ ತೆಗೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಳು. ಇದರ ಜೊತೆ ಕಣ್ಣೂರಿನ ಮೃತ್ಯುಂಜಯ ಶ್ರೀಗಳು ಪೀಠ ತ್ಯಾಗ ಮಾಡಬೇಕು. ಚಿತ್ರದುರ್ಗದ ಮುರುಘಾ ಶ್ರೀಗೆ ಯಾವ ಪರಿಸ್ಥಿತಿ ಬಂದಿದೆಯೋ ನಿಮಗೂ ಅದೇ ಪರಿಸ್ಥಿತಿ ಬರುತ್ತದೆ. ಮರ್ಯಾದೆ ಕಳೆದುಕೊಳ್ಳುವ ಮುನ್ನ ಪೀಠ ತ್ಯಾಗ ಮಾಡಿದರೆ ಸಿ.ಡಿ ವಿಷಯವನ್ನು ಯಾರಿಗೂ ಬಹಿರಂಗಪಡಿಸುವುದಿಲ್ಲ ಎಂದು ಹೇಳಿದ್ದರು.

ಇದೇ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳು ಬಂಧನಕ್ಕೆ ಒಳಗಾಗುತ್ತಿದ್ದಂತೆ ಬಸವಲಿಂಗ ಶ್ರೀಗಳು ಮಾನಸಿಕವಾಗಿ ಕುಗ್ಗಿ ಹೋಗಿದ್ದರು.

ಪೀಠ ತ್ಯಾಗ ಮಾಡಿದರೆ ಭಕ್ತರಿಗೆ ಉತ್ತರ ಕೊಡಬೇಕು. ಸಿ.ಡಿ ಬಹಿರಂಗಗೊಂಡರೆ ಮಠದ ಮರ್ಯಾದೆ ಹೋಗುತ್ತದೆ. ಇದರ ಬದಲು ಆತ್ಮಹತ್ಯೆ ಮಾಡಿಕೊಳ್ಳುವುದೇ ಲೇಸು ಎಂದು ಮಠದ ಕಿಟಕಿಯ ಕಂಬಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ಡೆತ್‍ನೋಟ್ ಬರೆದಿದ್ದ ಬಸವಲಿಂಗ ಶ್ರೀಗಳು:
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬಸವಲಿಂಗ ಶ್ರೀಗಳು ಮಠದಲ್ಲಿ ನಡೆದಿದ್ದ ಇಂಚಿಂಚು ಘಟನೆಯನ್ನು ಡೆತ್‍ನೋಟ್‍ನಲ್ಲಿ ವಿವರಿಸಿದ್ದು, ನಾನು ಈ ಮಠದ ಉತ್ತಾರಾಧಿಕಾರಿಯಾಗಿ 25ವರ್ಷಗಳು ಹೇಗೆ ಇದ್ದೆ ಎಂಬುದು ನಿಮಗೆಲ್ಲಾ ತಿಳಿದಿದೆ. ಇಷ್ಟು ದಿನ ನಾನು ಈ ಮಠದ ಒಬ್ಬ ನಿಷ್ಠಾವಂತ ಸೇವಕನಾಗಿ ಪ್ರಮಾಣಿಕನಾಗಿ ಶ್ರದ್ದೆಯಿಂದ ಮಠದ ಕೆಲಸ ಮಾಡಿದ್ದೇನೆ.

ಆದರೆ ಈಗ ತುಂಬ ಮನಸ್ಸಿಗೆ ನೋವಾಗುವ ಸಂಗತಿ ಎಂದರೆ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಕೆಟ್ಟ ವಿಚಾರಗಳನ್ನು ನನ್ನ ಮೇಲೆ ಹೊರಿಸಿ ನನ್ನ ಮನಸ್ಸಿಗೆ ನೋವು ಉಂಟು ಮಾಡಿದೆ. ಆರೇಳು ತಿಂಗಳ ಹಿಂದೆ ಗೊತ್ತಿಲ್ಲದ ಮಹಿಳೆ ನನಗೆ ದೂರವಾಣಿ ಕರೆ ಮಾಡಿ ಮಾತನಾಡಿಸುವುದು ಯಾರು ಅಂತ ಕೇಳದೆ…. ಎಂದು ಇಲ್ಲಿಗೆ ಮೊದಲ ಪುಟ ಮುಕ್ತಾಯವಾಗಿದೆ.

ಪಾದಯಾತ್ರೆಯಲ್ಲಿ ಇದ್ದಕ್ಕಿದ್ದಂತೆ ಓಡಿದ ರಾಹುಲ್, ಭದ್ರತಾ ಸಿಬ್ಬಂದಿ ಕಕ್ಕಾಬಿಕ್ಕಿ

ಮುಂದಿನ ಪುಟಗಳಲ್ಲಿ ಬಹಳಷ್ಟು ವಿಷಯ ಹಾಗೂ ಕೆಲ ವ್ಯಕ್ತಿಗಳ ಹೆಸರು ಉಲ್ಲೇಖವಾಗಿರುವ ಮಾತುಗಳು ಕೇಳಿ ಬಂದಿದ್ದು ಪೊಲೀಸರ ತನಿಖೆಯಿಂದ ಮಾತ್ರ ಸತ್ಯಾಸತ್ಯತೆ ಹೊರಬರಬೇಕಿದೆ ಎಂದು ಡೆತ್ ನೋಟ್‍ನಲ್ಲಿ ಬಸವಲಿಂಗ ಶ್ರೀಗಳು ಮನವಿ ಮಾಡಿದ್ದರು.

Articles You Might Like

Share This Article