ತಿರುವಂತನಪುರಂ,ಫೆ.13-ಹೈಕೋರ್ಟ್ ನಿರ್ದೇಶನದ ಮೇರೆಗೆ ಕನ್ನಡದ ಸೂಪರ್‍ಹಿಟ್ ಚಲನಚಿತ್ರ ಕಾಂತಾರ ಚಿತ್ರದ ನಿರ್ಮಾಪಕ ವಿಜಯ್‍ಕಿರಂಗದೂರು ಹಾಗೂ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರುಗಳು ಕೇರಳ ತನಿಖಾಕಾರಿ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದರು.
ಕಾಂತಾರಾ ಚಿತ್ರದ ವರಾಹರೂಪಂ ಗೀತೆಯ ಕೃತಿಚೌರ್ಯ ಮಾಡಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ನಿನ್ನೆ ಇಬ್ಬರು ಕೇರಳದ ಕೋಝಿಕೋಡ್ ಪೊಲೀಸರ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದರು.
ನ್ಯಾಯಾಲಯದ ನಿರ್ದೇಶನದಂತೆ ರಿಷಬ್ ಶೆಟ್ಟಿ ಹಾಗೂ ವಿಜಯ್ ಕಿರಂಗದೂರು ಅವರುಗಳು ತನಿಖಾಕಾರಿಯ ಮುಂದೆ ಹಾಜರಾಗಿ ಅವರ ಹೇಳಿಕೆಗಳನ್ನು ದಾಖಲಿಸಿದ್ದಾರೆ ಅಗತ್ಯಬಿದ್ದರೆ ಮತ್ತೆ ಅವರನ್ನು ಮತ್ತೆ ಕರೆಸಿ ವಿಚಾರಣೆ ಮಾಡಲಾಗುವುದು ಎಂದು ಕೇರಳದ ಹಿರಿಯ ಪೊಲೀಸ್ ಅಕಾರಿಯೊಬ್ಬರು ತಿಳಿಸಿದ್ದಾರೆ.
ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣದಲ್ಲಿ ಅಂತಿಮ ಆದೇಶದವರೆಗೆ ‘ವರಾಹರೂಪಂ’ ಗೀತೆಯೊಂದಿಗೆ ಚಿತ್ರವನ್ನು ಪ್ರದರ್ಶಿಸದಂತೆ ಕನ್ನಡ ಬ್ಲಾಕ್‍ಬಸ್ಟರ್ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಿಗೆ ನಿರ್ದೇಶಿಸಿದ ಕೇರಳ ಹೈಕೋರ್ಟ್‍ನ ಷರತ್ತಿಗೆ ಸುಪ್ರೀಂ ಕೋರ್ಟ್ ಫೆಬ್ರವರಿ 10 ರಂದು ತಡೆಯಾಜ್ಞೆ ನೀಡಿತ್ತು.
ಹೈಕೋರ್ಟ್‍ನ ಷರತ್ತುಗಳಲ್ಲಿ ಒಂದನ್ನು ಮಾರ್ಪಡಿಸಿದ ಪೀಠವು ನಿರ್ಮಾಪಕ ಕಿರಂಗದೂರು ಮತ್ತು ನಿರ್ದೇಶಕ ಶೆಟ್ಟಿ ಅವರನ್ನು ಬಂಸಿದರೆ ತಕ್ಷಣ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಸೂಚಿಸಿತ್ತು.
ಹಾಡಿನಲ್ಲಿ ಕೃತಿಚೌರ್ಯ ಆರೋಪದಡಿ ಕೋಝಿಕ್ಕೋಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಫೆಬ್ರವರಿ 8ರಂದು ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ಮಾತೃಭೂಮಿ ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಕಂ ಲಿಮಿಟೆಡ್ ಒಡೆತನದ ಮಲಯಾಳಂ ಮ್ಯೂಸಿಕ್ ಚಾನೆಲ್ ಕಪ್ಪಾ ಟಿವಿಯಲ್ಲಿ ಪ್ರದರ್ಶಿಸಲಾದ ಥೈಕ್ಕುಡಂ ಬ್ರಿಡ್ಜ್‍ಬ್ಯಾಂಡ್ ಪ್ರದರ್ಶಿಸಿದ ‘ನವರಸಂ’ ಹಾಡಿನ ಅನಕೃತ ನಕಲು ‘ವರಾಹರೂಪಂ’ ಎಂಬುದು ಆರೋಪವಾಗಿತ್ತು.
ನ್ಯಾಯಾಲಯವು ಐದು ಷರತ್ತುಗಳನ್ನು ವಿಸಿತು ಮತ್ತು ವಿಚಾರಣೆಗಾಗಿ ಫೆಬ್ರವರಿ 12 ಮತ್ತು 13 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರ ನಡುವೆ ಎರಡು ದಿನಗಳ ಕಾಲ ತನಿಖಾಕಾರಿಯ ಮುಂದೆ ಶರಣಾಗುವಂತೆ ಸೂಚಿಸಿದ್ದ ಹಿನ್ನಲೆಯಲ್ಲಿ ಇಬ್ಬರು ನಿನ್ನೆ ವಿಚಾರಣೆಗೆ ಹಾಜರಾಗಿದ್ದರು.
ಆರೋಪಿಗಳು ಸಾಕ್ಷಿಗಳನ್ನು ಬೆದರಿಸಬಾರದು ಅಥವಾ ಸಾಕ್ಷ್ಯವನ್ನು ಹಾಳು ಮಾಡಬಾರದು ಮತ್ತು ಅವರು ತನಿಖೆಗೆ ಸಹಕರಿಸಬೇಕು ಮತ್ತು ವಿಚಾರಣೆಗೆ ಲಭ್ಯವಿರಬೇಕು ಎಂದು ನ್ಯಾಯಾಲಯ ಸೂಚಿಸಿತ್ತು. ಮಾತ್ರವಲ್ಲ, ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಆರೋಪಿಗಳು ದೇಶವನ್ನು ತೊರೆಯಬಾರದು ಎಂದೂ ಆದೇಶಿಸಿತ್ತು.
#Kantara, #RishabShetty, #Questioning, #KeralaPolice, #VarahaRoopamControversy,