ತಕ್ಕ ಉತ್ತರ ನೀಡಲು ನಮ್ಮ ಯೋಧರು ಸಮರ್ಥರಿದ್ದಾರೆ : ಪ್ರಧಾನಿ ಮೋದಿ

Social Share

ಕಾರ್ಗಿಲ್, ಅ.24- ಭಾರತ ವಿಶ್ವ ಶಾಂತಿಯ ಪರವಾಗಿದೆ. ಯುದ್ಧ ನಮ್ಮ ಮೊದಲ ಆಯ್ಕೆಯಲ್ಲ, ಅಂತಿಮ ಕ್ಷಣದ ಆಯ್ಕೆ. ಆದರೆ ದೇಶದ ಮೇಲೆ ಯಾರಾದರೂ ಕೆಟ್ಟ ದೃಷ್ಟಿ ಬೀರಿದರೆ ಅದಕ್ಕೆ ತಕ್ಕ ಉತ್ತರ ನೀಡಲು ನಮ್ಮ ಯೋಧರು ಸಮರ್ಥರಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಸೇನಾ ಯೋಧರ ಜೊತೆ ದೀಪಾವಳಿ ಹಬ್ಬವನ್ನು ಸಂಭ್ರಮಿಸುವ ಸಂಪ್ರದಾಯವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ವರ್ಷವೂ ಮುಂದುವರೆಸಿದ್ದು, ದುರ್ಗಮ ಪ್ರದೇಶವಾಗಿರುವ ದೇಶದ ಗಡಿಯ ಕಾರ್ಗಿಲ್‍ನಲ್ಲಿ ಇಂದು ವೀರ ಯೋಧರೊಂದಿಗೆ ದೀಪಾವಳಿ ಆಚರಿಸಿದ ವೇಳೆ ಮಾತನಾಡಿದರು.

ನಿಮ್ಮನ್ನೆ ನನ್ನ ಕುಟುಂಬ ಎಂದುಕೊಂಡಿದ್ದೇನೆ. ಅದಕ್ಕಾಗಿ ನಿಮ್ಮೊಂದಿಗೆ ದೀಪಾವಳಿ ಆಚರಣೆ ಮಾಡುವುದು ಅತ್ಯಂತ ಸಂತಷದ ವಿಷಯ ಎಂದು ಹೇಳಿದರು. ಇದೇ ವೇಳೆ ಇಡೀ ದೇಶವಾಸಿಗಳಿಗೆ ದೀಪಾವಳಿಯ ಶುಭಾಷಯಗಳನ್ನು ತಿಳಿಸಿದರು.

ಬಿಎಂಟಿಸಿ ಬಸ್ ಹರಿದು ಸಾವನ್ನಪ್ಪಿದ ವಿದ್ಯಾರ್ಥಿನಿ ಕುಟುಂಬಕ್ಕೆ ಒಂದೂವರೆ ಕೋಟಿ ರೂ.ಪರಿಹಾರ ನೀಡಿ

ಕಾರ್ಗಿಲ್‍ನಲ್ಲಿ ವಿಜಯದ ಪತಾಕೆ ಹಾರಿದ ನಂತರ ಈವರೆಗೂ ಪಾಕಿಸ್ತಾನದ ಜೊತೆ ಒಂದೇ ಒಂದು ಸಂಘರ್ಷ ಸಂಭವಿಸಿಲ್ಲ. ಆತಂಕದ ಅಂತ್ಯದ ಜೊತೆ ಉತ್ಸಾಹ ಮೂಡಿಸುವುದೇ ದೀಪಾವಳಿಯ ಸಂದೇಶವಾಗಿದೆ.

ಕಾರ್ಗಿಲ್‍ನಿಂದ ಇದನ್ನು ರವಾನಿಸಲಾಯಿತು. ನಮ್ಮ ಯೋಧರು ಆ ಸಂದೇಶವನ್ನು ಯಶಸ್ವಿ ತಲುಪಿಸಿದ್ದಾರೆ. ಅದರಿಂದಾಗಿಯೇ ದೇಶದ ಜನ ಇಂದು ಉತ್ಸಾದೊಂದಿಗೆ ದೀಪಾವಳಿ ಆಚರಿಸುತ್ತಿದ್ದಾರೆ ಎಂದರು.

ಕಾರ್ಗಿಲ್‍ನಲ್ಲಿ ಶತ್ರುಗಳಿಗೆ ಉತ್ತರ ನೀಡಿದ ಯೋಧರ ನಡುವೆ ದೀಪಾವಳಿ ಆಚರಿಸಲು ನನಗೆ ಅವಕಾಶ ಸಿಕ್ಕಿದೆ. ಅದಕ್ಕಾಗಿಯೇ ಕರ್ತವ್ಯ ಪಥದಿಂದ ಕಾರ್ಗಿಲ್‍ವರೆಗೂ ಆಗಮಿಸಲು ನನಗೆ ಹೆಮ್ಮೆಯೆನಿಸಿದೆ. ದೇವರ ಭಕ್ತಿಯನ್ನು ಆಚರಣೆ ಮಾಡುತ್ತೇವೆ. ಜೊತೆಯಲ್ಲಿ ದೇಶ ಭಕ್ತಿಯನ್ನು ಸಂಭ್ರಮಿಸುತ್ತೇವೆ. ಎಲ್ಲಾ ದಿಕ್ಕೂಗಳಲ್ಲೂ ವಿಜಯ ದಿವಸ ಕಂಡು ಬರುತ್ತಿದೆ ಎಂದರು.

ಭಾರತ ಭೌಗೋಳಿಕ ಪ್ರದೇಶ ಮಾತ್ರವಲ್ಲ ಜೀವನ ಅನುಭೂತಿ, ಅಮರತ್ವದ ಅಸ್ತಿತ್ವ, ಚಿರಂತನ ಚೇತನ. ಭಾರತ ಎಂದರೆ ಶಾಶ್ವತ ಸಂಸ್ಕøತಿ, ಪರಾಕ್ರಮ ನಮ್ಮ ಕಣ್ಣ ಮುಂದೆ ಬರುತ್ತದೆ. ಹಿಂದೂ ಮಹಾಸಾಗರದಿಂದ ಹಿಮಾಲಯದ ಮೇರು ಶಿಖರದವರೆಗೂ ಭಾರತದ ಸಂಸ್ಕøತಿ ಅಸ್ತಿತ್ವ ಅಜರಾಮರವಾಗಿದೆ.

ಮೀಸಲಾತಿ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ, ಪ್ರತಿಭಟನೆ ಕೈಬಿಟ್ಟ ಪ್ರಸನ್ನಾನಂದ ಸ್ವಾಮೀಜಿ

ದೇಶಕ್ಕಾಗಿ ಸಮರ್ಪಿತವಾಗಿದ್ದವರ ಮಕ್ಕಳಲ್ಲಿ ವಿಶ್ವಾಸ ಮೂಡಿಸಲಾಗುತ್ತದೆ. ಯೋಧರ ಬಲಿದಾನ ಹಿಮಾಲಯ ಶಿಖರದಂತೆ ಕೀರ್ತಿ ಶೇಷವಾಗಲಿದೆ ಎಂದರು. ಗಡಿ ಸುರಕ್ಷಿತವಾಗಿದ್ದು, ಅರ್ಥ ವ್ಯವಸ್ಥೆ ಉತ್ತಮವಾಗಿದ್ದರೆ ದೇಶದ ಜನ ಆತ್ಮವಿಶ್ವಾಸ ಹಾಗೂ ನೆಮ್ಮದಿಯಾಗಿರುತ್ತಾರೆ. ಯೋಧರು ದೇಶದ ಸುರಕ್ಷತಾ ಕವಚವಾಗಿದ್ದಾರೆ. ಯೋಧರಿಗೆ ಭಾರತೀಯರು ಸಂಪೂರ್ಣ ಶಕ್ತಿ ನೀಡಿದ್ದಾರೆ ಎಂದರು.

ಎರಡು ದಿನಗಳ ಹಿಂದೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮೂರು ಡಜನ್ ಉಪಗ್ರಹಗಳನ್ನು ಉಡಾವಣೆ ಮಾಡಿ ದಾಖಲೆ ಮಾಡಿದೆ. ಅಂತರಿಕ್ಷದಲ್ಲಿ ಭಾರತ ಹೊಸ ದಾಖಲೆಯನ್ನೇ ಬರೆದಿದೆ. ಕೆಲ ವರ್ಷಗಳ ಹಿಂದೆ ಉಕ್ರೇನ್‍ನಲ್ಲಿ ಸಂಘರ್ಷ ನಡೆಯುವಾಗ ನಮ್ಮ ರಾಷ್ಟ್ರ ಧ್ವಜ ಭಾರತೀಯರಿಗೆ ಹೇಗೆ ರಕ್ಷಾ ಕವಚವಾಗಿತ್ತು ಎಂಬುದನ್ನು ಎಲ್ಲರೂ ನೋಡಿದ್ದಾರೆ.

ಇಂದು ಇಡೀ ವಿಶ್ವದಲ್ಲೇ ಭಾರತದ ಗೌರವ ಹೆಚ್ಚಾಗಿದೆ. ಭಾರತ ಇಂದು ಆಂತರಿಕ ಮತ್ತು ಬಾಹ್ಯ ಶತ್ರುಗಳನ್ನು ನಿಗ್ರಹಿಸುವಲ್ಲಿ ಯಶಸ್ವಿಯಾಗಿದೆ. ದೇಶದಲ್ಲಿ ಆಂತಕವಾದ, ಉಗ್ರವಾದ, ನಕ್ಸಲೀಯವಾದವನ್ನು ಹತ್ತಿಕ್ಕಲಾಗಿದೆ. ಭ್ರಷ್ಟಚಾರದ ವಿರುದ್ಧವೂ ನಿರ್ಣಾಯಕ ಯುದ್ಧ ನಡೆದಿದೆ, ಭ್ರಷ್ಟಚಾರಿ ಎಷ್ಟೇ ಬಲಿಷ್ಠನಾಗಿದ್ದರು, ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದರು.

ಸುದೀರ್ಘ ಅವಯವರೆಗೂ ದೇಶದ ಅಭಿವೃದ್ಧಿಯನ್ನು ಸೀಮಿತಗೊಳಿಸಲಾಗಿತ್ತು. ಇಂದು ನಾವು ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್ ಮಂತ್ರದೊಂದಿಗೆ ಎಲ್ಲರನ್ನು ಒಳಗೊಂಡ ಅಭಿವೃದ್ಧಿ ಮುನ್ನುಡಿ ಬರೆದಿದ್ದೇವೆ.

ಮುಂದಿನ ದಿನಗಳಲ್ಲಿ ತಂತ್ರಜ್ಞಾನದಿಂದಾಗಿ ಯುದ್ಧದ ಸ್ವರೂಪ ಬದಲಾಗುತ್ತ್ತಿದೆ. ಸೇನೆಯಲ್ಲಿ ಬಹಷ್ಟು ಸುಧಾರಣೆ ಮತ್ತು ಬದಲಾವಣೆ ಮಾಡಲಾಗಿದೆ. ಸೇನೆ ಸುಧಾರಣೆಯಾಗಬೇಕು ಎಂಬ ಬೇಡಿಕೆ ಇತ್ತೀಚೆಗೆ ಈಡೇರಿದೆ. ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ನಮ್ಮ ಸಾಮಥ್ರ್ಯ ಹೆಚ್ಚಿಸಲು ಆತ್ಮನಿರ್ಭರ ಭಾರತ ಸಹಕಾರಿಯಾಗಿದೆ.

ದೇಶಿ ನಿರ್ಮಿತ ಶಸ್ತ್ರಗಳು ಬಳಕೆಯಾಗುತ್ತಿವೆ. ಸೇನೆಯ ಮೂರು ಘಟಕಗಳಲ್ಲೂ ಆತ್ಮನಿರ್ಭರ ಭಾರತಕ್ಕೆ ಒತ್ತು ನೀಡಲಾಗಿದೆ. 400ಕ್ಕೂ ಯುದ್ಧ ಸಲಕರಣೆಗಳನ್ನು ವಿದೇಶದಿಂದ ಖರೀದಿಸದೆ, ದೇಶದಲ್ಲೇ ತಯಾರಿಕೆ ಮಾಡಲಾಗುತ್ತಿದೆ. ಇದರಿಂದ ಬಹಳಷ್ಟು ಲಾಭವಾಗಿದೆ. ನಮ್ಮ ಯೋಧರು ದೇಶಿ ನಿರ್ಮಿತ ಯುದ್ಧ ಸಲಕರಣೆಗಳ ಬಳಕೆಯಿಂದ ನಮ್ಮ ಯೋಧರ ಆತ್ಮವಿಶ್ವಾಸ ಹೆಚ್ಚಾಗಲಿದೆ ಎಂದರು.

ನಮ್ಮ ಸೇನೆ ಹೆಚ್ಚು ಹೆಚ್ಚು ಮೇಡ್ ಇನ್ ಇಂಡಿಯಾ ಯುದ್ಧ ಸಲಕರಣೆಗಳನ್ನು ಬಳಕೆ ಮಾಡುತ್ತಿದೆ. ಬ್ರಹ್ಮೋಸ್‍ನಿಂದ ಸೂಪರ್ ಸಾನಿಕ್ ಹೆಲಿಕಾಫ್ಟರ್‍ನಿಂದ ಆರಂಭಿಸಿ ಹಲವು ಸಲಕರಣಗಳು ದೇಶಿ ನಿರ್ಮಿತವಾಗಿವೆ. ವಿಶಾಲ ಸಮುದ್ರದ ಮೇಲೆ ಆಕ್ರಮಣವಾದರೂ ನಾವು ಸಿದ್ದರಿದ್ದೇವೆ. ಆಕಾಶದಲ್ಲಾಗಲಿ, ಭೂಮಿಯ ಮೇಲಾಗಲಿ ಯುದ್ಧ ಸಂಭವಿಸಿದರೆ ಭಾರತ ಅರ್ಜುನ ಗುರಿಯ ಮಾದರಿಯಲ್ಲಿ ಶತ್ರುವನ್ನು ಭೇದಿಸಲು ಸಜ್ಜುಗೊಂಡಿದೆ.

ಕ್ಪಿಪಣಿಗಳಿಂದ, ಆಧುನಿಕ ಡ್ರೋಣ್‍ಗಳವರೆಗೂ ಆಧುನಿಕ ಶಸ್ತ್ರಾಸ್ತ್ರಗಳು ನಮ್ಮ ಬತ್ತಳಿಕೆಯಲ್ಲಿವೆ ಎಂದರು.
ನಾವು ಯುದ್ಧದ ಪರವಾಗಿಲ್ಲ, ಸದಾ ಶಾಂತಿಯನ್ನು ಬಯಸುತ್ತೇವೆ. ಯುದ್ಧ ನಮ್ಮ ಕೊನೆಯ ಆಯ್ಕೆಯಾಗಿದೆ. ಕೊನೆಯ ಕ್ಷಣದವರೆಗೂ ಪರಿಸ್ಥಿತಿಯನ್ನು ಸುಧಾರಿಸಲು ಯತ್ನಿಸುತ್ತೇವೆ. ಭಾರತ ಸಂಪೂರ್ಣ ಯುದ್ಧದ ವಿರೋಯಾಗಿದೆ. ವಿಶ್ವ ಶಾಂತಿಯನ್ನು ಬಯಸುತ್ತೇವೆ. ಆದರೆ ಸಾಮಥ್ರ್ಯ ವೃದ್ಧಿಯಾಗದ ಹೊರತು ಶಾಂತಿ ಸಾಧ್ಯವಿಲ್ಲ. ಶತ್ರುವಿಗೆ ತಕ್ಕ ಉತ್ತರ ನೀಡಲು ನಾವು ಸಜ್ಜುಗೊಂಡಿರಬೇಕಾಗುತ್ತದೆ ಎಂದರು.

ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಷಯ ಕೋರಿದ ಸಿಎಂ

ನಾವು ಗುಲಾಮಿ ಮನಸ್ಥಿತಿಯಿಂದ ಹೊರ ಬರಬೇಕಿದೆ. ಸುದೀರ್ಘ ಕಾಲದವರೆಗೂ ರಾಜಪಥದ ಹೆಸರಿನೊಂದಿಗೆ ಗುಲಾಮಿ ಮನಸ್ಥಿತಿಯೊಂದಿಗೆ ಬದುಕಿದ್ದೇವು. ಅದನ್ನು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಿದ್ದೇವೆ. ಇಂಡಿಯಾ ಗೇಟ್‍ನಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಬೃಹತ್ ಪುತ್ಥಳಿ ನಿರ್ಮಿಸಲಾಗಿದೆ.

ಭಾರತ ಸೇನೆಯಲ್ಲಿ ವಿದೇಶಿ ಚಿನ್ಹೆಯನ್ನು ಬದಲಾವಣೆ ಮಾಡಿ, ವೀರ ಶಿವಾಜಿ ಅವರ ಸಂಕೇತವನ್ನು ಅಳವಡಿಸಲಾಗಿದೆ. ಇಂದು ಭಾರತದ ಶಕ್ತಿ ವೃದ್ಧಿಯಾಗಿದೆ, ಸಂವೃದ್ಧಿ, ಸಮತೋಲನ ಹೆಚ್ಚಾಗಿದೆ. ದೇಶದ ಈ ಸಾಮಥ್ರ್ಯಕ್ಕೆ ವೀರ ಯೋಧರ ಪಾತ್ರ ಅಮೂಲ್ಯವಾಗಿದೆ ಎಂದರು.

Articles You Might Like

Share This Article