ಕಾರ್ಗಿಲ್ ವಿಜಯ್ ದಿವಸ್ ಸಶಸ್ತ್ರ ಪಡೆಗಳ ಅಸಾಧಾರಣ ಶೌರ್ಯದ ಸಂಕೇತ : ರಾಷ್ಟ್ರಪತಿ ಮುರ್ಮು

Social Share

ನವದೆಹಲಿ, ಜು.26- ಕಾರ್ಗಿಲ್ ವಿಜಯ್ ದಿವಸ ಸಶಸ್ತ್ರ ಪಡೆಗಳ ಅಸಾಧಾರಣ ಶೌರ್ಯದ ಸಂಕೇತವಾಗಿದೆ ಮತ್ತು ಭಾರತ ಮಾತೆಯನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಅರ್ಪಿಸಿದ ವೀರ ಸೈನಿಕರಿಗೆ ಜನರು ಯಾವಾಗಲೂ ಋಣಿಯಾಗಿರುತ್ತಾರೆ ಎಂದು ರಾಷ್ಟಾಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

ಕಳೆದ 1999. ಜುಲೈ 26 ರಂದು, ಭಾರತೀಯ ಸೇನೆಯು ಆಪರೇಷನ್ ವಿಜಯ್ ಜಯಿಸಿ ಪರಾಕಾಷ್ಠೆಯನ್ನು ಘೋಷಿಸಿತು, ಲಡಾಕ್‍ನ ಕಾರ್ಗಿಲ್ ಹಿಮಾವೃತ ಪರ್ವತದಲ್ಲಿ ಸುಮಾರು ಮೂರು ತಿಂಗಳ ಸುದೀರ್ಘ ಯುದ್ಧದ ನಂತರ ವಿಜಯ ಸಾಧಿಸಲಾಗಿತ್ತು .

ಭಾರತಮಾತೆಯನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಅರ್ಪಿಸಿದ ಎಲ್ಲಾ ವೀರ ಸೈನಿಕರಿಗೆ ನಾನು ನಮಿಸುತ್ತೇನೆ. ಅವರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ದೇಶವು ಯಾವಾಗಲೂ ಋಣಿಯಾಗಿರುತ್ತದೆ. ಜೈ ಹಿಂದ್ ಎಂದು ಮುರ್ಮು ಅವರು ಟ್ವೀಟ್ ಮಾಡಿದ್ದಾರೆ.

Articles You Might Like

Share This Article