50% ಆಫರ್ : ಟ್ರಾಫಿಕ್ ದಂಡ ಪಾವತಿಗೆ ಮುಗಿ ಬಿದ್ದಿ ಜನ

Social Share

ಬೆಂಗಳೂರು,ಫೆ.3- ಸಂಚಾರ ನಿಯಮಗಳ ಉಲ್ಲಂಘನೆಯ ದಂಡ ಪಾವತಿಗೆ ಶೇ.50ರಷ್ಟು ರಿಯಾಯ್ತಿ ಘೋಷಿಸಿದ ಬೆನ್ನಲ್ಲೇ ಬಾಕಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ವಾಹನ ಸವಾರರು ಮುಗಿ ಬಿದ್ದಿದ್ದಾರೆ.
ನಗರ ಸಂಚಾರ ಪೊಲೀಸ್ ವತಿಯಿಂದ ಹೊರಡಿಸಲಾದ ಪ್ರಕಟಣೆಯಲ್ಲಿ ಬಾಕಿ ಇರುವ ದಂಡ ಪಾವತಿಯ ವಿಧಾನಗಳನ್ನು ವಿವರಿಸಲಾಗಿದೆ.

ವಾಹನ ಮಾಲೀಕರು ಮತ್ತು ಚಾಲಕರು ಕರ್ನಾಟಕ ಒನ್ ವೆಬ್‍ಸೈಟ್‍ನಲ್ಲಿ ವಿವರಗಳನ್ನು ಪಡೆದು ಅಥವಾ ಪೇ ಟಿಎಮ್ ಆ್ಯಪ್ ಮೂಲಕವೂ ದಂಡ ಪಾವತಿಸಬಹುದಾಗಿದೆ.

ನೆಲಮಂಗಲ ನಗರಸಭೆ ಅಧ್ಯಕ್ಷರ ರಾಜಕೀಯ ಭವಿಷ್ಯಕ್ಕೆ ಅರ್ಧಚಂದ್ರ

ಇಲ್ಲವಾದರೆ ಹತ್ತಿರದ ಸಂಚಾರ ಪೊಲೀಸ್ ಠಾಣೆಗೆ ತೆರಳಿ ವಾಹನ ನೋಂದಣಿ ಸಂಖ್ಯೆಗಳನ್ನು ತಿಳಿಸಿ ದಂಡ ಪಾವತಿಸಬಹುದು. ಸಂಚಾರ ನಿರ್ವಹಣೆ ಕೇಂದ್ರದ ಮೊದಲ ಮಹಡಿಯಲ್ಲಿನ ಕೌಂಟರ್‍ನಲ್ಲಿ ಅಥವಾ ರಸ್ತೆಗಳಲ್ಲಿ ಸಂಚಾರ ನಿರ್ವಹಿಸುವ ಪೊಲೀಸ್ ಅಧಿಕಾರಿಗಳ ಬಳಿಯಲ್ಲೂ ದಂಡ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಶೇ.50ರಷ್ಟು ರಿಯಾಯ್ತಿ ಸೌಲಭ್ಯ ಫೆ.11ರವರೆಗೆ ಮಾತ್ರ ಲಭ್ಯವಿರಲಿದೆ. ಅನಂತರ ಬಾಕಿ ಉಳಿಯುವ ಪ್ರಕರಣಗಳಲ್ಲಿ ಪೂರ್ಣ ಪ್ರಮಾಣದ ದಂಡ ಪಾವತಿಸಬೇಕಾಗುತ್ತದೆ. ಬಾಕಿ ಪ್ರಕರಣಗಳಲ್ಲಿ ಒಂದೇ ಕಂತಿನಲ್ಲಿ ದಂಡ ತೆರಬೇಕಾಗಿದೆ. ಕಂತುಗಳಲ್ಲಿ ಅಥವಾ ಹಂತ ಹಂತವಾಗಿ ಪಾವತಿಸಲು ಅವಕಾಶವಿಲ್ಲ.

ಹೀಗಾಗಿ ಬೆಂಗಳೂರಿನ ಬಹುತೇಕ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಜನ ಸಾಲುಗಟ್ಟಿ ನಿಂತು ದಂಡ ಪಾವತಿಸುವ ಮೂಲಕ ಬಾಕಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳುತ್ತಿದ್ದಾರೆ.

ಕೆಲವು ವಾಹನಗಳ ಮೇಲೆ 10ಸಾವಿರಕ್ಕೂ ಮೇಲ್ಪಟ್ಟ ದಂಡವಿದ್ದು, ಅಂತಹವರಿಗೆ ರಿಯಾಯ್ತಿ ಸೌಲಭ್ಯ ವರದಾನವಾಗಿದೆ. ಈಗಾಗಲೇ ಮೊಬೈಲ್ ಆ್ಯಪ್‍ಗಳಲ್ಲೂ ರಿಯಾಯ್ತಿ ಕಡಿತಗೊಂಡು ದಂಡ ಬಾಕಿ ಇರುವ ದಂಡದ ಮೊತ್ತ ಗೋಚರವಾಗುತ್ತಿದೆ.

ಮೇ 3ನೇ ವಾರದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ..?

ಹೀಗಾಗಿ ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಂಚಾರಿ ವಿಭಾಗದ ವಿಶೇಷ ಪೊಲೀಸ ಆಯುಕ್ತ ಡಾ.ಸಲೀಂ ಅವರು ಮನವಿ ಮಾಡಿದ್ದಾರೆ.

Karnataka, announces, discount, pending, traffic fines,

Articles You Might Like

Share This Article