ಬೆಂಗಳೂರು,ಡಿ.19- ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಮೊದಲ ಹಂತವಾಗಿ 93 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಇಂದು ಘೋಷಣೆ ಮಾಡಿದರು. ಪಂಚರತ್ನ ಯಾತ್ರೆ ಕೈಗೊಂಡಿದ್ದ ಕುಮಾರಸ್ವಾಮಿ ಅವರು ಅಭ್ಯರ್ಥಿಗಳ ಹೆಸರನ್ನು ಘೋಷಿಸುವುದಾಗಿ ತಿಳಿಸಿದ್ದರು. ಅದರಂತೆ ಇಂದು 93ಕ್ಷೇತ್ರಗಳಿಗೆ ಈ ಕೆಳಕಂಡಂತೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದಾರೆ.
ಸಾವರ್ಕರ್ ಫೋಟೋಗೆ ನಮ್ಮ ಆಕ್ಷೇಪವಿಲ್ಲ : ಸಿದ್ದರಾಮಯ್ಯ

ಚುನಾವಣೆ ಇನ್ನು ಆರು ತಿಂಗಳು ಇರುವಾಗಲೇ ಅಭ್ಯರ್ಥಿಗಳ ಹೆಸರನ್ನು ಘೋಷಿಸಿ ಜೆಡಿಎಸ್ ಚುನಾವಣೆಗೆ ದಾಪುಗಾಲು ಇಟ್ಟಿದೆ. ಈಗಾಗಲೇ ಪ್ರಚಾರದ ಅಬ್ಬರದಲ್ಲಿ ತೊಡಗಿರುವ ಜೆಡಿಎಸ್ ಅಭ್ಯರ್ಥಿಗಳನ್ನು ಘೋಷಿಸಿ ಮತ್ತಷ್ಟು ಜೋಶ್ನಲ್ಲಿ ಚುನಾವಣಾ ರಣಕಹಳೆ ಮೊಳಗಿಸಿದೆ.
#AssemblyElection2023, #AssemblyElection, #KarnatakaAssemblyElection, #KarnatakaElections2023, #ವಿಧಾನಸಭೆಚುನಾವಣೆ, #ವಿಧಾನಸಭೆಚುನಾವಣೆ2023,