ಬೆಂಗಳೂರು,ಡಿ.13- ವಿಧಾನಸಭಾ ಚುನಾವಣೆ ಸನಿಹವಾಗುತ್ತಿದ್ದು ರಾಜ್ಯ ಬಿಜೆಪಿಯಲ್ಲಿ ಜನನಾಯಕನಾಗಿ ವರ್ಚಸ್ಸು ಹೊಂದಿದ ನಾಯಕ ಸಿಗದೆ, ಮಾಸ್ ಲೀಡರ್ ಕೊರತೆ ಕಾಡತೊಡಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜೋಡಿ ರಾಜ್ಯದಲ್ಲಿ ಮೋಡಿ ಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಇಬ್ಬರು ನಾಯಕರೂ ಉತ್ತಮ ಇಮೇಜ್ ಹೊಂದಿದ್ದರೂ ಮಾಸ್ ಇಮೇಜ್ ಗಳಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿರುವುದು ಹೊಸ ಇಕ್ಕಟ್ಟು ಸೃಷ್ಟಿಸಿದೆ.
ಪ್ರತಿಪಕ್ಷಗಳ ಪ್ರಬಲ ಚುನಾವಣಾ ತಂತ್ರಗಾರಿಕೆಗೆ ಸದ್ಯದ ಮಟ್ಟಿಗೆ ಆಡಳಿತಾರೂಢ ಬಿಜೆಪಿ ನಾಯಕರಲ್ಲಿ ಟಕ್ಕರ್ ನೀಡಬಲ್ಲ ಶಕ್ತಿ ಬೊಮ್ಮಾಯಿ, ಕಟೀಲ್ ಜೋಡಿಗಿದೆ ಎನ್ನುವ ನಂಬಿಕೆ ವರಿಷ್ಠರಲ್ಲಿಲ್ಲ. ಹಾಗಾಗಿ ಪ್ರಧಾನಿ ಮೋದಿ ಹೆಸರನ್ನೇ ಮುಂದಿಟ್ಟುಕೊಂಡು ಚುನಾವಣೆಗೆ ಹೋಗಬೇಕಾದ ಅನಿವಾರ್ಯತೆ ಇದೆ.
ತಂದೆಯನ್ನು ಕೊಂದು, 30 ತುಂಡುಗಳನ್ನಾಗಿ ತುಂಡರಿಸಿದ ಪಾಪಿ ಪುತ್ರ
ಆದರೆ ರಾಜ್ಯದಲ್ಲಿ ಬಿಜೆಪಿಗೆ ಮಾಸ್ ಇಮೇಜ್ ಇರುವ ನಾಯಕನ ಅಗತ್ಯವಿದ್ದು, ಯಡಿಯೂರಪ್ಪ ನಂತರ ಆ ಕೊರತೆ ತುಂಬಬಲ್ಲ ನಾಯಕ ಇನ್ನೂ ಲಭ್ಯವಾಗಿಲ್ಲ. ಹಾಗಾಗಿ ಈ ಚುನಾವಣೆಗೂ ಯಡಿಯೂರಪ್ಪ
ಅವರ ಶಕ್ತಿಯನ್ನೇ ಬಳಸಿಕೊಳ್ಳಲು ವರಿಷ್ಠರು ನಿರ್ಧರಿಸಿದ್ದಾರೆ. ಮೂಲಗಳ ಪ್ರಕಾರ ಈ ಬಾರಿಯ ವಿಧಾನಸಭಾ ಚುನಾವಣೆಗೆ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಯಡಿಯೂರಪ್ಪ ಅವರನ್ನೇ ನೇಮಕ ಮಾಡಲಾಗುತ್ತದೆ ಎನ್ನಲಾಗುತ್ತಿದೆ.
ಯಡಿಯೂರಪ್ಪ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಆ ಸಮುದಾಯದ ಅಗ್ರ ನಾಯಕ. ಆದರೆ ಕೇವಲ ಲಿಂಗಾಯತ ಸಮುದಾಯಕ್ಕೆ ಯಡಿಯೂರಪ್ಪ ಸೀಮಿತವಾಗಿಲ್ಲ. ಜಾತ್ಯಾತೀತವಾಗಿ ಯಡಿಯೂರಪ್ಪ ಅವರನ್ನು ರಾಜ್ಯದ ಜನ ಒಪ್ಪುತ್ತಾರೆ ಮತ್ತು ಬೆಂಬಲಿಸುತ್ತಾರೆ.
ಈ ರೀತಿಯಾಗಿ ಜಾತಿ ಮೀರಿ ಬೆಳೆದು ನಾಯಕರಾಗಿರುವ ಮತ್ತೊಮ್ಮ ನಾಯಕ ಬಿಜೆಪಿಯಲ್ಲಿ ಇಲ್ಲ. ಬೊಮ್ಮಾಯಿ ಕಾಮನ್ ಮ್ಯಾನ್ ಸಿಎಂ ಎನ್ನುವುದು ಬಿಟ್ಟರೆ ಲಿಂಗಾಯಿತ ನಾಯಕರೂ ಆಗಿಲ್ಲ. ಅಶೋಕ್, ಸೋಮಣ್ಣ ಬೆಂಗಳೂರಿಗೆ ಸೀಮಿತ.
ಮಹದಾಯಿ ಯೋಜನೆಗೆ ಅನುಮೋದನೆ ಸಿಗುವುದಾಗಿ ಕಾರಜೋಳ ವಿಶ್ವಾಸ
ಒಮ್ಮೆ ಸಿಎಂ ಆಗಿದ್ದರೂ ಶೆಟ್ಟರ್, ಸದಾನಂದ ಗೌಡ ಕ್ಷೇತ್ರಕ್ಕೆ ಸೀಮಿತರಾಗಿದ್ದಾರೆ. ಹಿಂದುತ್ವದ ಪ್ರತಿಪಾದಕರಾದರೂ ಸಿ.ಟಿ.ರವಿಗೆ ಮಾಸ್ ಇಮೇಜ್ ಇನ್ನೂ ಬಂದಿಲ್ಲ. ಕಟೀಲ್ ರಾಜ್ಯಾಧ್ಯಕ್ಷರಾಗಿದ್ದರೂ ಕರಾವಳಿ ಅಲೆಗೆ ಸೀಮಿತವಾಗಿದ್ದಾರೆ.
ಹೀಗೆ ಯಡಿಯೂರಪ್ಪ ರೀತಿಯ ಮತ್ತೊಮ್ಮ ನಾಯಕ ಹೈಕಮಾಂಡ್ ಕಣ್ಣಿಗೆ ಕಾಣುತ್ತಿಲ್ಲ. ಹಾಗಾಗಿ ಈಗ ಅನಿವಾರ್ಯವಾಗಿ ಬಿಎಸ್‍ವೈ ಇಮೇಜ್ ಅನ್ನೇ ನಂಬಿಕೊಳ್ಳುವಂತಾಗಿದೆ.
ಯಡಿಯೂರಪ್ಪ ಅನಿವಾರ್ಯ: ಯಡಿಯೂರಪ್ಪ ರಥಯಾತ್ರೆ ಆರಂಭಿಸಲು ಈಗಾಗಲೇ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಂತರ ರಾಜ್ಯಪಾಲರಾಗಲು ಒಪ್ಪದ ಯಡಿಯೂರಪ್ಪ ಸಂಘಟನೆಯಲ್ಲಿ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದ್ದರು.
ಅದಕ್ಕೆ ಆರಂಭದಲ್ಲಿ ಅಡ್ಡಿಪಡಿಸಿದ್ದ ವರಿಷ್ಠರು ಇದೀಗ ಸ್ವತಃ ಅನುಮತಿ ನೀಡುವ ಮೂಲಕ ರಾಜ್ಯ ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ ಎಂಬುದ್ದನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿಯೇ ಪಕ್ಷದಲ್ಲಿ ರಾಷ್ಟ್ರಮಟ್ಟದಲ್ಲಿ ಇತ್ತೀಚೆಗೆ ಯಡಿಯೂರಪ್ಪ ಅವರಿಗೆ ಹೆಚ್ಚಿನ ಮನ್ನಣೆ ನೀಡುತ್ತಾ ಬರಲಾಗಿದೆ.
ಪ್ರಧಾನಿ ಮೋದಿ ಹೆಸರಿನಲ್ಲೇ ಚುನಾವಣೆಯನ್ನು ಬಿಜೆಪಿ ಎದುರಿಸಿದೆಯಾದರೂ ರಾಜ್ಯದಿಂದ ಒಬ್ಬರ ಮಾಸ್ ಇಮೇಜ್ ಬೇಕು, ಇಲ್ಲದೇ ಇದ್ದಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಕಷ್ಟ. ಇದು ಹಲವು ರಾಜ್ಯದಲ್ಲಿ ಸಾಬೀತಾಗಿದೆ.
ದೆಹಲಿ ಸಭೆ ಬಳಿಕ ರಣೋತ್ಸಾಹದಲ್ಲಿ ಕಾಂಗ್ರೆಸ್ ಕಲಿಗಳು
ಹಾಗಾಗಿ ಅಂತಹ ತಪ್ಪು ಕರ್ನಾಟಕದಲ್ಲಿ ಆಗಬಾರದು ಎಂದು ಬಿಜೆಪಿ ವರಿಷ್ಠರು ಮಾಸ್ ಇಮೇಜ್ ಇರುವ ಜನ ನಾಯಕ ಯಡಿಯೂರಪ್ಪ ಅವರ ನೇತೃತ್ವದಲ್ಲೇ ಚುನಾವಣಾ ಪ್ರಚಾರ ನಡೆಸುವ ಚಿಂತನೆ ಮಾಡಿದ್ದಾರೆ ಎನ್ನಲಾಗಿದೆ.
Karnataka assembly elections, BJP mass leader,