ಬಿಜೆಪಿಯಲ್ಲಿ ರಾಜಾಹುಲಿ ಬಿಎಸ್‍ವೈಗೆ ಇದೀಗ ಭಾರೀ ಬೇಡಿಕೆ

Social Share

ಬೆಂಗಳೂರು,ಜ.24- ಪಕ್ಷದಲ್ಲಿ ಕಡೆಗಣಿಸಲಾಗುತ್ತದೆ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇದೀಗ ಬಿಜೆಪಿಯಲ್ಲಿ ಭಾರೀ ಬೇಡಿಕೆ ಬಂದಿದೆ.

ಬಿಜೆಪಿಯ ಬಹುತೇಕ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಯಡಿಯೂರಪ್ಪನವರನ್ನು ಪ್ರಚಾರಕ್ಕೆ ಕರೆದೊಯ್ಯಲು ಮುಗಿಬಿದ್ದಿದ್ದು, ರಾಜಾಹುಲಿ ಬಂದು ಬಾರಿ ಪ್ರಚಾರ ನಡೆಸಿದರೆ ತಮ್ಮ ಅದೃಷ್ಟ ಬದಲಾಗಬಹುದೆಂದು ಅನೇಕರು ನಂಬಿದ್ದಾರೆ.

ಸುಮಾರು 125ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಎಸ್‍ವೈಗೆ ಅಭ್ಯರ್ಥಿಗಳು ಪ್ರಚಾರ ನಡೆಸಬೇಕೆಂದು ದುಂಬಾಲು ಬಿದ್ದಿದ್ದಾರೆ. ಆದರೆ ಎಲ್ಲವನ್ನು ಮೌನದಿಂದಲೇ ಅವಲೋಕಿಸುತ್ತಿರುವ ಮಾಜಿ ಸಿಎಂ ಯಾರಿಗೂ ಭರವಸೆ ಕೊಟ್ಟಿಲ್ಲ.

ನ್ಯೂಜಿಲೆಂಡ್ ನೂತನ ಪ್ರಧಾನಿಯಾಗಿ ಕ್ರಿಸ್ ಹಿಪ್ಕಿನ್ಸ್ ಅಧಿಕಾರ ಸ್ವೀಕಾರ

ಕೇವಲ ಪ್ರಧಾನಿ ನರೇಂದ್ರಮೋದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಮಬಲದಿಂದಲೇ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಬಹುತೇಕರು ಮನಗಂಡಿದ್ದಾರೆ.

ಮೋದಿ ಜನಪ್ರಿಯತೆ ಎಷ್ಟೇ ಇದ್ದರೂ ರಾಜ್ಯದ ಮಟ್ಟಿಗೆ ಈಗಲೂ ಯಡಿಯೂರಪ್ಪ ಅತ್ಯಂತ ಪ್ರಭಾವಶಾಲಿ ನಾಯಕ. 224 ವಿಧಾನಸಭಾ ಕ್ಷೇತ್ರಗಳನ್ನು ತನ್ನ ಅಂಗೈಯಷ್ಟೇ ಅರಿತಿರುವ ರಾಜಕಾರಣಿ ಎಂಬುದು ಬಹುತೇಕರಿಗೆ ಅರಿವಾಗಿದೆ.

ಅಧಿಕಾರದಿಂದ ಕೆಳಗಿಳಿದಿದ್ದರೂ ಯಡಿಯೂರಪ್ಪ ಈಗಲೂ ಅತ್ಯಂತ ಪ್ರಭಾವಶಾಲಿ ನಾಯಕರಾಗಿ ಹೊಮ್ಮಿದ್ದಾರೆ. ಕೇವಲ ಲಿಂಗಾಯಿತ ಸಮುದಾಯವಲ್ಲದೆ ಅವರನ್ನು ಬೇರೆ ಬೇರೆ ಸಮುದಾಯದವರು ಇಷ್ಟಪಡುವುದರಿಂದ ಪ್ರಚಾರ ನಡೆಸಬೇಕೆಂದು ಅನೇಕರು ಮನವಿ ಮಾಡಿಕೊಂಡಿದ್ದಾರೆ.

ಕಿತ್ತೂರು ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲ್ಯಾಣ ಕರ್ನಾಟಕದ ವಿಜಯನಗರ, ಬಳ್ಳಾರಿ, ರಾಯಚೂರು, ಕ್ಪೊಪಳ, ಯಾದಗಿರಿ, ಕಲಬುರಗಿ, ಬೀದರ್, ಬಿಜಾಪುರ, ಬಾಗಲಕೋಟೆ, ಮಧ್ಯಕರ್ನಾಟಕದ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಬಿಎಸ್‍ವೈಗೆ ಭಾರೀ ಬೇಡಿಕೆ ಇದೆ.

ಇನ್ಮುಂದೆ ವಿಮಾನದಲ್ಲಿ ಕೇಳಿದಷ್ಟು ಮದ್ಯ ಸಿಗಲ್ಲ

2018ರಲ್ಲಿ ಮೋದಿ ಅಲೆ ಎಷ್ಟೇ ಇದ್ದರೂ 104 ಸ್ಥಾನ ಗೆಲ್ಲುವಲ್ಲಿ ಬಿಎಸ್‍ವೈ ಪಾತ್ರವನ್ನು ಅಲ್ಲಗೆಳೆಯುವಂತಿಲ್ಲ. ಅದೇ ರೀತಿ ಲೋಕಸಭೆ ಚುನಾವಣೆಯಲ್ಲೂ 28 ಕ್ಷೇತ್ರಗಳ ಪೈಕಿ ಬಿಜೆಪಿ 25 ಕ್ಷೇತ್ರಗಳನ್ನು ಗೆದ್ದಿತ್ತು. ಇದರಲೂ ಕೂಡ ಬಿಎಸ್‍ವೈ ಪಾತ್ರ ಸಾಕಷ್ಟಿತ್ತು ಎಂಬುದು ಅವರ ಅಭಿಮಾನಿಗಳ ವಾದ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಸಮರ್ಥವಾಗಿ ಎದುರಿಸುವ ಸಾಮಥ್ರ್ಯ ಮತ್ತು ತಾಕತ್ತು ಯಡಿಯೂರಪ್ಪನವರಿಗೆ ಇದೆ. ಅವರನ್ನು ಪಕ್ಷವು ಸರಿಯಾಗಿ ನಡೆಸಿಕೊಂಡರೆ ಬಿಜೆಪಿಯ ಉದ್ದೇಶಿತ 130 ಸ್ಥಾನಗಳನ್ನು ಗೆಲ್ಲಲು ಅನುಕೂಲವಾಗುತ್ತದೆ ಎಂಬ ವಾದವನ್ನು ಆಕಾಂಕ್ಷಿಗಳು ಮುಂದಿಡುತ್ತಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಎ.ಕೆ.ಆಂಟನಿ ಪುತ್ರ ಗುಡ್‍ಬೈ

ಯಡಿಯೂರಪ್ಪ ಹೊರತುಪಡಿಸಿ ಚುನಾವಣೆ ಗೆಲ್ಲುವುದನ್ನು ಕನಸಿನಲ್ಲೂ ಕೂಡ ಊಹಿಸಲು ಅಸಾಧ್ಯ ಎಂಬುದು ಪಕ್ಷದ ವರಿಷ್ಠರಿಗೂ ಗೊತ್ತಾಗಿರುವುದರಿಂದ ಸದ್ಯಕ್ಕೆ ಅವರನ್ನು ಮೂಲೆ ಗುಂಪು ಮಾಡುವ ಇಲ್ಲವೇ ಕಡೆಗಣಿಸುವಂತಹ ತೀರ್ಮಾನದಿಂದ ಹಿಂದೆ ಸರಿದಿದ್ದಾರೆ.

Karnataka, BJP, BS Yediyurappa, assembly election, campaign,

Articles You Might Like

Share This Article