ಬೆಂಗಳೂರು,ಫೆ.4- ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯನ್ನಾಗಿ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಕೇಂದ್ರ ಬಿಜೆಪಿ ವರಿಷ್ಠರು ನೇಮಿಸಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡಿನ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಅವರಿಗೆ ಸಹ ಉಸ್ತುವಾರಿಯಾಗಿ ನೇಮಿಸಲಾಗಿದೆ.
ಈ ಹಿಂದೆ ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಚುನಾವಣಾ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದ ಧರ್ಮೇಂದ್ರ ಪ್ರಧಾನ್ ಬಿಜೆಪಿಯ ಚಿಂತಕರ ಛಾವಡಿಯಲ್ಲಿ ಪ್ರಮುಖರಾಗಿದ್ದಾರೆ.
ಕರ್ನಾಟಕದಲ್ಲಿ ಹಿಂದೆಯೂ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ ಅನುಭವವಿದ್ದ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಚುನಾವಣಾ ಉಸ್ತುವಾರಿ ಹೊಣೆಗಾರಿಕೆಯನ್ನು ನೀಡಿದ್ದಾರೆ.
ಬಲೂನ್ ಹಾರಾಟದ ಬೆನ್ನಲ್ಲೇ ಅಮೇರಿಕಾ ಕಾರ್ಯದರ್ಶಿ ಚೀನಾ ಪ್ರವಾಸ ಮುಂದೂಡಿಕೆ
ಇಲ್ಲಿನ ಸಾಮಾಜಿಕ, ಭೌಗೋಳಿಕ ಅಧ್ಯಯನ, ಪ್ರದೇಶವಾರು, ಜಾತಿ, ವಲಯವಾರು ಹಾಗೂ ಜಿಲ್ಲಾವಾರುಗಳಿಗೂ ಕಾರ್ಯತಂತ್ರ ರೂಪಿಸಬೇಕಾದ ಹಿನ್ನಲೆಯಲ್ಲಿ ಪ್ರದಾನ್‍ಗೆ ಈ ಜವಾಬ್ದಾರಿಯನ್ನು ಪಕ್ಷ ನೀಡಿದೆ.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದಲ್ಲಿ ಯಾವುದೇ ರೀತಿಯ ಅಸಮಾಧಾನಕ್ಕೆ ಅವಕಾಶವಿಲ್ಲದಂತೆ ಮುನ್ನಡೆಸಿಕೊಂಡು ಹೋಗುವ ಚಾಕಚಕ್ಯತೆ ಅವರಿಗಿದೆ.
ಮರಣದಂಡನೆ ಆರೋಪದಿಂದ ಬಚಾವಾಗಿ ಕೊಲೆ ಕೇಸ್‍ನಲ್ಲಿ ಸಿಕ್ಕಿಬಿದ್ದ..!
ಮೂಲತಃ ಒರಿಸ್ಸಾದವರಾದ ಧರ್ಮೇಂದ್ರ ಪ್ರಧಾನ್ 2008ರಲ್ಲೂ ಕರ್ನಾಟಕದ ಉಸ್ತುವಾರಿಯಾಗಿದ್ದರು.
ಸಹ ಉಸ್ತುವಾರಿಯಾಗಿ ನೇಮಕವಾಗಿರುವ ಅಣ್ಣಾಮಲೈ ಕರ್ನಾಟಕ ಕೇಡರ್‍ನ ಮಾಜಿ ಐಪಿಎಸ್ ಅಧಿಕಾರಿ. ಉಡುಪಿ, ಚಿಕ್ಕಮಗಳೂರು ಮತ್ತು ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಕರ್ತವ್ಯ ನಿರ್ವಹಿಸಿದ ಅನುಭವವಿದೆ.
ಕರ್ತವ್ಯದಲ್ಲಿದ್ದಾಗಲೇ ಐಪಿಎಸ್‍ಗೆ ರಾಜೀನಾಮೆ ಕೊಟ್ಟು ಸಕ್ರಿಯ ರಾಜಕಾರಣಕ್ಕೆ ಸೇರಿದರು. ಕರ್ನಾಟಕದಲ್ಲಿ ಅವರಿಗೆ ಸಾಕಷ್ಟು ಅಭಿಮಾನಿ ವರ್ಗ ಇರುವುದರಿಂದಲೇ ಬಿಜೆಪಿ ವರಿಷ್ಠರು ಬಿಜೆಪಿ ಚುನಾವಣೆಯ ಸಹ ಉಸ್ತುವಾರಿಯಾಗಿ ನೇಮಿಸಲಾಗಿದೆ.
Karnataka, BJP, Co-Incharge, Annamalai,